ಆಹ್ವಾನವು ಗೋಲ್ಡನ್‌ ಸ್ಟಾರ್‌ದು.. ಆಗಮನವು ಸೋನು ನಿಗಮ್‌ದು..!

ಗೋಲ್ಡನ್ ವಾಯ್ಸ್ ಸೋನು ನಿಗಮ್ ಗಾನಸುಧೆ ಇಲ್ಲ ಅಂದ್ರೆ, ಗೋಲ್ಡನ್ ಸ್ಟಾರ್ ಸಿನಿಮಾಗಳೇ ಇನ್​ಕಂಪ್ಲೀಟ್. ಅದ್ರಲ್ಲೂ ಪ್ರೇಮ ವಿರಹ ಗೀತೆಗಳಿಗೆ ಕೇರ್ ಆಫ್​ ಅಡ್ರೆಸ್ ಈ ಮೆಗಾ ಕಾಂಬೋ. ಸದ್ಯ ನಾವೀಗ ಹೇಳೋಕ್ಕೆ ಹೊರಟಿರೋ ಗೀತಾ ಹಾರ್ಟ್​ ಟಚಿಂಗ್ ಹಾಡಿನ ಸ್ಪೆಷಲ್ ಸ್ಟೋರಿಯನ್ನ. ನೀವೇ ಒಮ್ಮೆ ಫೀಲ್ ಮಾಡಿ.

ಮನಾಲಿಯಲ್ಲಿ ಗೀತಾ ಜೊತೆ ಗೋಲ್ಡನ್​ ಸ್ಟಾರ್​​ ಡ್ಯುಯೆಟ್
ಅನೂಪ್ ಟ್ಯೂನು.. ಸಂತೋಷ್ ಲೈನು.. ಪ್ರಯಾಗ ಪ್ರೇಮ..!
ತಂಗಾಳಿಯಲ್ಲಿ ತೇಲಿದಂತಿದೆ ಸೋನು ನಿಗಮ್ ಗಾನಸುಧೆ
ಆಹ್ವಾನವು ನನದು.. ಆಗಮನವು ನಿನದು ಎಂದ ಮಳೆ ಹುಡ್ಗ
ಇದೇ ಸೆಪ್ಟೆಂಬರ್ 27ಕ್ಕೆ ಗ್ರ್ಯಾಂಡ್ ರಿಲೀಸ್ ಆಗ್ತಿರೋ ಗೀತಾ ಚಿತ್ರದ ಟೈಟಲ್ ಸಾಂಗ್ ಇದು. ಮನಾಲಿಯ ಕಣ್ಣು ಕೋರೈಸೋ ರಮಣೀಯ ತಾಣಗಳಲ್ಲಿ ಚಿತ್ರಿಸಿರೋ ಗೀತಾ ನನ್ನ ಗೀತಾ ಇಡೀ ಸಿನಿಮಾದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಗೋಲ್ಡನ್ ಸ್ಟಾರ್ ಸಿನಿಮಾಗಳ ಫೀಲ್ ಗುಡ್ ಸಾಂಗ್ಸ್ ಲಿಸ್ಟ್ ಸೇರೋ ಸೂಚನೆ ಕೊಟ್ಟಿರೋ ಈ ಲವ್ಲಿ, ರೊಮ್ಯಾಂಟಿಕ್ ಡ್ಯುಯೆಟ್ ಸಖತ್ ಇಂಟರೆಸ್ಟಿಂಗ್ ಅನಿಸಿದೆ.

ಸಂತೋಷ್ ಆನಂದರಾಮ್ ಪದಪುಂಜವಿರೋ ಈ ಹಾಡಿಗೆ ಅನೂಪ್ ರೂಬೆನ್ಸ್ ಸಂಗೀತ ಸಂಯೋಜಿಸಿದ್ದು, ಮೊಲೋಡಿ ಹಾಡುಗಳ ಮಹಾರಾಜ ಸೋನು ನಿಗಮ್ ಕಂಠದಲ್ಲಿ ಮೂಡಿಬಂದಿರೋದು ಕೇಳುಗಳ ಕಣ್ಮನ ಥಣಿಸುವಂತಿದೆ. ಇಂಪಾದ, ನಯವಾದ, ಸೊಗಸಾದ ಹಾಗೂ ನಾಜೂಕಾದ ಸಾಹಿತ್ಯ, ಲೊಕೇಷನ್ಸ್ ಹಾಗೂ ಟ್ಯೂನ್​ಗೆ ಎಲ್ಲವೂ ಹೇಳಿ ಮಾಡಿಸಿದಂತಿದೆ. ಪ್ರಯಾಗ ಮಾರ್ಟಿನ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಆನ್ ಸ್ಕ್ರೀನ್ ಕೆಮಿಸ್ಟ್ರಿ ಸಖತ್ ವರ್ಕೌಟ್ ಆಗಿದೆ.

ಶಿಲ್ಪಾ ಗಣೇಶ್ ಹಾಗೂ ಸೈಯದ್ ಸಲಾಂ ನಿರ್ಮಾಣದಲ್ಲಿ ತಯಾರಾಗಿರೋ, ವಿಜಯ್ ನಾಗೇಂದ್ರ ನಿರ್ದೇಶನವಿರೋ ಈ ಸಿನಿಮಾದ ಒಂದೊಂದು ಹಾಡು ಕೂಡ ವೈರೈಟಿ ಆಗಿವೆ. ಈ ಚಿತ್ರದ ಮೂಲಕ ಮತ್ತೊಮ್ಮೆ ಸೋನು ನಿಗಮ್- ಗೋಲ್ಡನ್ ಸ್ಟಾರ್ ಮೆಗಾ ಕಾಂಬೋ ಮೋಡಿ ಮಾಡ್ತಿದೆ. ಅಂದಹಾಗೆ ಮಳೆ ಹುಡ್ಗನ ಸಿನಿಮಾಗಳಲ್ಲಿ ಸೋನು ಸುಧೆ ಇಲ್ಲ ಅಂದ್ರೆ ಆ ಸಿನಿಮಾನೇ ಇನ್​ಕಂಪ್ಲೀಟ್.

(ಕೃಪೆ: ಆನಂದ್ ಆಡಿಯೋ)

ಗಣಿ ಸಿನಿಮಾಗಳಲ್ಲಿ ಸೋನು ಮೆಲೋಡಿ ಹಾಡುಗಳ ಮೇಳ
ಮುಂಗಾರು ಮಳೆಯಿಂದ- ಗೀತಾವರೆಗೂ ಸಂಗೀತ ಹೊಳೆ
ಸೋನು ನಿಗಮ್ ಭಾರತೀಯ ಚಿತ್ರರಂಗದ ನಂಬರ್ ಒನ್ ಸಿಂಗರ್. ಅದ್ರಲ್ಲಿ ಯಾವುದೇ ಡೌಟ್ ಇಲ್ಲ. 90ರ ದಶಕದಿಂದಲೇ ಕನ್ನಡ ಚಿತ್ರಗೀತೆಗಳನ್ನ ಹಾಡ್ತಿದ್ರೂ ಸಹ, ಸೋನುಗೆ ಬಹುದೊಡ್ಡ ಹೆಸ್ರು ತಂದುಕೊಟ್ಟಿದ್ದು ಮಾತ್ರ ಮುಂಗಾರು ಮಳೆಯ ಅನಿಸುತಿದೆ ಸಾಂಗ್. ಮಳೆ ಹುಡ್ಗ ಗಣಿ- ಸೋನು ಕಾಂಬೋ ಅಲ್ಲಿಂದ ಹೊಸ ಸಂಗೀತ ಯಾನವನ್ನೇ ಶುರುವಿಟ್ಟಿತು.

ಗಾಳಿಪಟ ಚಿತ್ರದ ಮಿಂಚಾಗಿ ನೀನು ಬರಲು, ಸರ್ಕಸ್ ಚಿತ್ರದ ಪಿಸುಗುಡಲೇ, ಚೆಲುವಿನ ಚಿತ್ತಾರದ ಕನಸೋ ಇದು ನನಸೋ ಇದು, ಮಳೆಯಲಿ ಜೊತೆಯಲಿ ಚಿತ್ರದ ನೀ ಸನಿಹಕೆ ಬಂದರೆ, ಉಲ್ಲಾಸ ಉತ್ಸಾಹ ಸಿನಿಮಾದ ಚೆಲಿಸುವಾ ಚೆಲುವೇ, ಶ್ರಾವಣಿ ಸುಬ್ರಮಣ್ಯದ ನಿನ್ನ ನೋಡೋ ಕಣ್ಣುಗಳು & ನಗುವಾ ಮೊಗವಾ ಸಾಂಗ್ಸ್, ಮುಂಗಾರು ಮಳೆ 2ನ ಗಮನಿಸು ಒಮ್ಮೆ ನೀನು, ಮುಗುಳುನಗೆ ಚಿತ್ರದ ಮುಗುಳು ನಗೆಯೇ ನೀ ಹೇಳು ಸೇರಿದಂತೆ ಇತ್ತೀಚೆಗೆ ತೆರೆಕಂಡ ಗಣಿಯ 99 ಚಿತ್ರದ ನೀ ಜ್ಞಾಪಕ ಹಾಡಿನವರೆಗೆ ಸಾಲು ಸಾಲು ಮೆಲೋಡಿ ಹಾಡುಗಳ ಕಂಠ ಇದೇ ಸೋನು ನಿಗಮ್​ರದ್ದು.

ಒಟ್ಟಾರೆ ಗೀತಾ ಚಿತ್ರದ ಮೂಲಕ ಮತ್ತೊಮ್ಮೆ ಮ್ಯೂಸಿಕ್ ಪ್ರಿಯರ ಬಾಯಲ್ಲಿ ಸೋನು- ಗೋಲ್ಡನ್ ಸ್ಟಾರ್ ಹಾಡು ಗುನುಗುವಂತಾಗಿದೆ. ಇನ್ನು ಥಿಯೇಟರ್ ಅಂಗಳದಲ್ಲೇ ಇದರ ದೃಶ್ಯಚಿತ್ತಾರ ಕಣ್ತುಂಬಿಕೊಳ್ಳೋಕೆ ಸಿನಿಪ್ರಿಯರು ಕಾತುರರಾಗಿರೋದು ಮತ್ತೊಂದು ವಿಶೇಷ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *