ಸಂಚಲನ ಸೃಷ್ಟಿಸಿದೆ ಎಪಿಕ್ ಆ್ಯಕ್ಷನ್​ ಸಿನಿಮಾ ಸೈರಾ ನರಸಿಂಹ ರೆಡ್ಡಿ ಟ್ರೈಲರ್

ಮೋಸ್ಟ್ ಅವೇಟೆಡ್​​ ಸೈರಾ ನರಸಿಂಹ ರೆಡ್ಡಿ ಟ್ರೈಲರ್​​ ಯೂಟ್ಯೂಬ್​​ನಲ್ಲಿ ಧೂಳೆಬ್ಬಿಸಿದೆ. ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ನರಸಿಂಹ ರೆಡ್ಡಿ ಮತ್ತು ಆತನ ಸಹಚರರ ಹೋರಾಟ ಹೇಗಿತ್ತು. ಅನ್ನೋದರ ಝಲಕ್​​​​​ ಇದರಲ್ಲಿದೆ. ಸೈರಾ, ಅವುಕು ರಾಜು, ರಾಜಾ ಪಾಂಡಿ ಲುಕ್ಸ್, ಸ್ಟನ್ನಿಂಗ್​ ವಿಷ್ಯುವಲ್ಸ್, ಮೈಜುಂ​ ಅನ್ಸೋ ವಾರ್ ಸೀಕ್ವೆನ್ಸ್​​, ಅದ್ಧೂರಿ​ ಮೇಕಿಂಗ್​, ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ, ಸೈರಾ ಸಮರ ನಿಜಕ್ಕೂ ರೋಚಕವಾಗಿ ಮೂಡಿ ಬಂದಿದೆ.

ಅಬ್ಬಬ್ಬಾ, ಏನ್​​ ಮೇಕಿಂಗೂ, ಏನ್​ ವಿಷ್ಯುವಲ್ಸು, ಸೈರಾ ನರಸಿಂಹ ರೆಡ್ಡಿ ಟ್ರೈಲರ್​​​ ನೋಡಿದವರ ಉದ್ಘಾರ ಇದು. 250 ಕೋಟಿ ಬಜೆಟ್​​​ನಲ್ಲಿ ದೊಡ್ಡ ಕ್ಯಾನ್ವಾಸ್​ನಲ್ಲಿ ನಿರ್ಮಾಣವಾಗಿರೋ ಐತಿಹಾಸಿಕ ಚಿತ್ರ ಸೈರಾ. ಟ್ರೈಲರ್​ ನೋಡುತ್ತಿದ್ದರೇ, ನಿರ್ಮಾಪಕ ರಾಮ್​ ಚರಣ್​ ತೇಜಾ ಸುರಿದಿರೋ ಪ್ರತಿ ರೂಪಾಯಿ ತೆರೆಮೇಲೆ ಕಾಣುವಂತಿದೆ. ಸ್ಟಾರ್​​​​​ ಟೆಕ್ನೀಷಿಯನ್ಸ್​ ಕೈಚಳಕದಲ್ಲಿ ಸೈರಾ ಸಮರ ಸಖತ್​ ಥ್ರಿಲ್​ ಕೊಡೋ ಸುಳಿವು ಸಿಕ್ಕಿದೆ.

ಆಂಧ್ರದ ಸ್ವಾತಂತ್ರ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಕುರಿತಾದ ಐತಿಹಾಸಿಕ ಸಿನಿಮಾ ಇದು. ಚಿತ್ರದಲ್ಲಿ ನರಸಿಂಹ ರೆಡ್ಡಿಯ ಹಿನ್ನೆಲೆ, ಆತ ಬ್ರಿಟೀಷರು ವಿರುದ್ಧ ತಿರುಗಿ ಬಿದ್ದಿದ್ಯಾಕೆ(?) ಅಕ್ಕಪಕ್ಕದ ಪಾಳೇಗಾರರನ್ನ ಸೇರಿಸಿಕೊಂಡು ಹೇಗೆ ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ಆತ ಹೋರಾಡಿದ ಅನ್ನೋದನ್ನ ಕಟ್ಟಿಕೊಡಲಾಗುತ್ತಿದೆ. ಆಂಗ್ಲರಿಗೆ ಸಿಂಹ ಸ್ವಪ್ನವಾಗಿದ್ದ ಮಹಾನ್​ ವೀರನ ಕಥೆಯಿದು. ಸುರೇಂದರ್​ ರೆಡ್ಡಿ ಈ ಮಹಾದೃಶ್ಯಕಾವ್ಯದ ಹಿಂದಿನ ಸೂತ್ರಧಾರಿ. ನರಸಿಂಹ ರೆಡ್ಡಿ ಅವತಾರದಲ್ಲಿ ಮೆಗಾಸ್ಟಾರ್​ ಅಬ್ಬರಿಸಿದ್ದಾರೆ.​

ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಯುದ್ಧಭೂಮಿಯಲ್ಲಿ ತಮ್ಮ ಸೈನಿಕರನ್ನ ಹುರಿದುಂಬಿಸಲು, ನರಸಿಂಹ ರೆಡ್ಡಿಯ ಸಾಹಸದ ಕಥೆ ಹೇಳುವಂತೆ, ಚಿತ್ರವನ್ನು ಕಟ್ಟಿಕೊಡಲಾಗುತ್ತಿದ್ದು, ಝಾನ್ಸಿ ರಾಣಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಮಿಂಚಿದ್ದಾರೆ.

ನರಸಿಂಹ ರೆಡ್ಡಿಗೆ ಪಾಳೇಗಾರರಾದ ಅವುಕು ರಾಜು ಮತ್ತು ರಾಜಾ ಪಾಂಡಿ ಸಾಥ್​ ಕೊಡ್ತಿದ್ದಾರೆ. ಟ್ರೈಲರ್​​​ನಲ್ಲಿ ಅವರಿಬ್ಬರ ಲುಕ್ಕು, ಖದರ್ರು , ಪರ್ಫಾರ್ಮೆನ್ಸ್ ಸಖತ್​ ಕಿಕ್ ಕೊಡುತ್ತಿದೆ. ಅವುಕು ರಾಜನಾಗಿ ಕಿಚ್ಚ ಕಿಚ್ಚು ಹಚ್ಚಿದರೆ, ರಾಜಾ ಪಾಂಡಿಯಾಗಿ ವಿಜಯ್ ಸೇತುಪತಿ ವಿಜೃಂಭಿಸಿದ್ದಾರೆ.

ತೆಲುಗು ಮಾತ್ರವಲ್ಲದೇ ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಎಲ್ಲಾ ಭಾಷೆಗಳಲ್ಲೂ ಟ್ರೈಲರ್​​ ರಿವೀಲ್​ ಆಗಿ ಸೌಂಡ್ ಮಾಡುತ್ತಿದೆ. ನರಸಿಂಹ ರೆಡ್ಡಿ ಗುರುವಿನ ಪಾತ್ರದಲ್ಲಿ ಬಿಗ್ ಬಿ ಅಮಿತಾಬ್, ಮಡದಿಯಾಗಿ ನಯನತಾರಾ ಮಿಂಚಿದ್ದಾರೆ. ವೀರಾ ರೆಡ್ಡಿಯಾಗಿ ಜಗಪತಿ ಬಾಬು ಮತ್ತು ಲಕ್ಮೀಯಾಗಿ ತಮನ್ನಾ ಸೈರಾ ಬಳಗದಲ್ಲಿ ದರ್ಬಾರ್ ಮಾಡಿದ್ದಾರೆ.

1840 ಕಾಲಘಟ್ಟದ ಕಥೆಯನ್ನ ಚಿತ್ರದಲ್ಲಿ ಹೇಳಲಾಗುತ್ತಿದ್ದು, ಬ್ರಿಟೀಷರ ಬಂದೂಕು, ಪಿರಂಗಿಗೆ ಎದೆ ಒಡ್ಡುವ ಭಾರತೀಯ ಸೈನಿಕರ ಶೌರ್ಯ ಪರಾಕ್ರಮ, ಯುದ್ಧಭೂಮಿಯಲ್ಲಿ ನರಸಿಂಹ ರೆಡ್ಡಿಯ ಆರ್ಭಟ, ಪ್ರೇಕ್ಷಕರ ಹುಬ್ಬೇರಿಸಲಿದೆ. ಹಾಲಿವುಡ್​​​ನ ಗ್ರೇಗ್​ ಪೋವೆಲ್​​, ಲೀ ವಿಟ್ಟೇಕರ್​​​ ಮತ್ತು ರಾಮ್​-ಲಕ್ಷ್ಮಣ್​ ಮಾಸ್ಟರ್ಸ್​​ ಕಂಪೋಸ್​ ಮಾಡಿರೋ ಆ್ಯಕ್ಷನ್​ ಸೀಕ್ವೆನ್ಸ್​​, ಸೈರಾ ಸಿನಿಮಾದ ಸ್ಪೆಷಲ್ ಅಟ್ರಾಕ್ಷನ್.

ರತ್ನವೇಲು ಕ್ಯಾಮರಾ ವರ್ಕ್​​ ಚಿತ್ರದ ಮತ್ತೊಂದು ಹೈಲೆಟ್​​, ಬಹುಕೋಟಿ ವೆಚ್ಚದ ಸೆಟ್​ಗಳಲ್ಲಿ ಜಾರ್ಜಿಯಾ, ಹೊಗೆನೇಕಲ್​ ಸೇರಿದಂತೆ ಅದ್ಭುತ ಲೊಕೇಶನ್​ಗಳಲ್ಲಿ ಸಿನಿಮಾ ಶೂಟ್ ಮಾಡಲಾಗಿದೆ. ರಿಲೀಸ್​ ಡೇಟ್ ಹತ್ತಿರವಾದಂತೆ ಸೈರಾ ಟ್ರೈಲರ್​ ಬಂದು ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಅ. 2ರಂದು ಪಂಚ ಭಾಷೆಗಳಲ್ಲಿ ಸಾವಿರಾರು ಸ್ಕ್ರೀನ್​ಗಳ ಮೇಲೆ ಸೈರಾ ಆರ್ಭಟ ಶುರುವಾಗಲಿದೆ.

Recommended For You

About the Author: TV5 Kannada

Leave a Reply

Your email address will not be published. Required fields are marked *