ಅರ್ಥಪೂರ್ಣ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಉಪ್ಪಿ: ವಿಷ್ಣು ಸಮಾಧಿಗೆ ಅಭಿಮಾನಿಗಳಿಂದ ಪೂಜೆ

ಬೆಂಗಳೂರು: ಇಂದು ಸ್ಯಾಂಡಲ್‌ವುಡ್ ಸಿನಿ ಇಂಡಸ್ಟ್ರಿಯ ಇಬ್ಬರು ಗಣ್ಯರಿಗೆ ಹುಟ್ಟುಹಬ್ಬದ ಸಂಭ್ರಮ. ಓರ್ವ ಹೃದಯವಂತನಾದರೆ, ಇನ್ನೋರ್ವ ಬುದ್ಧಿವಂತ. ಎಸ್.. ದಿ.ಡಾ.ವಿಷ್ಣುವರ್ಧನ್ ಅವರ 69ನೇ ಜನ್ಮದಿನದ ನೆನಪಾದರೆ, ರಿಯಲ್ ಸ್ಟಾರ್ ಉಪೇಂದ್ರ 51 ವಸಂತಕ್ಕೆ ಕಾಲಿರಿಸಿದ್ದಾರೆ.

ಈ ಬಾರಿ ವಿಷ್ಣುವರ್ಧನ್ ಕುಟುಂಬ ಮೈಸೂರಿನಲ್ಲಿ ವಿಷ್ಣು ಬರ್ತ್‌ಡೇ ಸೆಲೆಬ್ರೇಟ್ ಮಾಡುತ್ತಿದ್ದು, ಮೈಸೂರಿನಲ್ಲಿರುವ ವಿಷ್ಣು ಸ್ಮಾರಕಕ್ಕೆಂದು ಸರ್ಕಾರ ನೀಡಿರುವ ಭೂಮಿಯಲ್ಲಿ ಹುಟ್ಟುಹಬ್ಬ ಆಚರಿಸಲಾಗಿದೆ. ಆಚರಣೆಯಲ್ಲಿ ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್, ಪುತ್ರಿ ಮತ್ತು ಅಳಿಯ ಅನಿರುದ್ಧ ಭಾಗಿಯಾಗಿದ್ದಾರೆ.

ಇಂದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 69ನೇ ಜನ್ಮದಿನದ ನೆನಪಾದ್ದರಿಂದ, ವಿಷ್ಣುದಾದಾ ಅಭಿಮಾನಿಗಳು ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿದ್ದಾರೆ. ಅಭಿಮಾನ್ ಸ್ಟುಡಿಯೋ ಆವರಣದಲ್ಲಿರು ವಿಷ್ಣು ಸಮಾಧಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ್ದು, ಅಭಿಮಾನಿಗಳು ರಕ್ತದಾನ ಶಿಬಿರ ಏರ್ಪಡಿಸಿದ್ದರು. ಅಲ್ಲದೇ, ಅಭಿಮಾನಿಗಳಿಗಾಗಿ ಅನ್ನದಾನ ಕೂಡ ಮಾಡಲಾಗಿದೆ.

ಇನ್ನು ನಟ ರಿಯಲ್ ಸ್ಟಾರ್ ಉಪೇಂದ್ರ 51ನೇ ವಸಂತಕ್ಕೆ ಕಾಲಿಟ್ಟಿದ್ದು, ಬೆಂಗಳೂರಿನ ಕತ್ರಿಗುಪ್ಪೆ ನಿವಾಸದಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡರು. ಪ್ರತಿವರ್ಷದಂತೆ ಈ ವರ್ಷವೂ ಕೂಡ, ಅಭಿಮಾನಿಗಳು ಅದ್ಧೂರಿಯಾಗಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದು, ಬೆಳ್ಳಂಬೆಳಿಗ್ಗೆಯೇ ನೆಚ್ಚಿನ ನಟನ ಮನೆ ಮುಂದೆ ಜಮಾಯಿಸಿದ್ದರು.

ಬರ್ತ್‌ಡೇಗೆ ಕೇಕ್, ಹೂವಿನ ಹಾರ ತರಬೇಡಿ, ಅದರ ಬದಲು ಗಿಡಗಳನ್ನ ತನ್ನಿ ಎಂದು ನಟ ಉಪೇಂದ್ರ ಹೇಳಿದ್ದರೂ ಕೂಡ ಅಭಿಮಾನಿಗಳು, 51 ಕೆಜಿ ತೂಕದ ಉಪ್ಪಿ ಮತ್ತು ಪ್ರಿಯಾಂಕ ಫೋಟೋ ಇರುವ ಕೇಕ್ ತಯಾರಿಸಿದ್ದಾರೆ.

ಇನ್ನು ನೆಚ್ಚಿನ ನಟನಿಗೆ ವಿಶ್ ಮಾಡಲು ಭದ್ರಾವತಿಯಿಂದ ಉಪ್ಪಿ ಅಭಿಮಾನಿ ನಾಗ ಎನ್ನುವರು ಬಂದಿದ್ದರು. ಕಾರ್ ವಾಶ್ ಮಾಡಿಕೊಂಡು ಜೀವನ ಮಾಡುತ್ತಿರೋ ಅಭಿಮಾನಿ ನಾಗ, ಕೇಕ್ ಬದಲಿಗೆ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ 10 ಸಾವಿರ ರೂಪಾಯಿ ಸಹಾಯ ಮಾಡಿದ್ದಾರೆ. ತನ್ನ ಒಂದು ತಿಂಗಳ ಸಂಬಳವನ್ನು ಸಹಾಯವಾಗಿ ನೀಡಿದ್ದಾರೆ.

Recommended For You

About the Author: Shravani Bhat

Leave a Reply

Your email address will not be published. Required fields are marked *