ಹೊಸ ಟ್ರಾಫಿಕ್ ರೂಲ್ಸ್​ ಬ್ರೇಕ್ ಮಾಡಿದ ಸಚಿವರು..!

ಕೊಪ್ಪಳ: ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆ ತಂದು ಕೆಲವು ದಿನಗಳೆ ಕಳೆಯಿತು. ಈ ಹೊಸ ಟ್ರಾಫಿಕ್ ರೂಲ್ಸ್​ನ್ನು ಕಾಪಡಬೇಕಾದ ಜನನಾಯಕರಿಗೆ ಈ ಟ್ರಾಫಿಕ್ ರೂಲ್ಸ್ ಬೇಕ್ ಮಾಡಿದ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ.

ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಜಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಹೊಸ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ನಳೀನ್ ಕುಮಾರ್ ಅವರು ಸೀಟ್ ಬೆಲ್ಟ್ ಹಾಕದೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ನಿಯಮ ಕಾಪಾಡಬೇಕಾದ ಮಂತ್ರಿಯಿಂದಲೇ ನಿಯಮ ಕಾಪಾಡದಿರುವುದು ವಿಪರ್ಯಾಸವೇ ಸರಿ.

ಇದಕ್ಕೆ ನಾನೇನು ಕಡಿಮೆ ಎಂಬಂತೆ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಹ ಸೀಟ್ ಬೆಲ್ಟ್ ಹಾಕದೆ ಪ್ರಯಾಣ ಮಾಡಿದ್ದು ಅಲ್ಲಿನ ಜನರ ಕೆಂಗೆಣ್ಣಿಗೆ ಗುರಿಯಾಯ್ತು. ಸಾರ್ವಜನಿಕರಿಗೆ ಒಂದು ರೂಲ್ಸ್, ರಾಜಕಾರಣಿಗಳಿಗೆ ಮತ್ತೊಂದು ರೂಲ್ಸ್​, ಒಂದು ವೇಳೆ ಸಾರ್ವಜನಿಕರು ಸಂಚಾರಿ ನಿಯಮ ಉಲ್ಲಂಘಿಸಿದರೆ ಅಂತವರಿಗೆ ಭಾರಿ ದಂಡ ವಿಧಿಸುತ್ತಾರೆ. ಆದರೆ ಇಂತಹ ಜನನಾಯಕರು ಕಾಣುವುದಿಲ್ಲವೇ? ಎಂದು ಅಲ್ಲಿನ ಜನರು ಸಿಡಿಮಿಡಿಗೊಂಡರು.

Recommended For You

About the Author: Sushmitha T S

Leave a Reply

Your email address will not be published. Required fields are marked *