ಡಿಕೆಶಿ ಜೈಲಿಗೆ ಹಾಕುವ ಅವಶ್ಯಕತೆ ಇರಲಿಲ್ಲ ‘ರಾಜಕೀಯದಲ್ಲಿ ಇದೆಲ್ಲಾ ಮಾಮೂಲಿ’

ಗದಗ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬಂಧನದ ಹಿನ್ನಲೆಯಲ್ಲಿ ಇಡಿ ವಿಷಯಕ್ಕೆ ಸಂಬಂಧಿದಂತೆ ದೇಶದಲ್ಲಿ ಕೋರ್ಟ್, ಕಾನೂನುಗಳ ಇದೆ. ಡಿಕೆಶಿ ಅವರು ಹಿಂದಿನ ದಿನಗಳಲ್ಲಿ ಐಟಿ ದಾಳಿಯ ವೇಳೆ ಬಹಳ ಗಟ್ಟಿಯಾಗಿ ಇದ್ದರು ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಅವರು ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ವಿಚಾರಣೆಗೆ ಅವರು ತಪ್ಪಿಸಿಲ್ಲ, ಇಡಿ ಅಧಿಕಾರಿಗಳು ಅವರನ್ನು ವಿಚಾರಣೆಗೆ ಕರೆದಾಗಲೆಲ್ಲಾ ಹೋಗಿದ್ದಾರೆ. ಅವರನ್ನು ಜೈಲಿಗೆ ಹಾಕುವ ಅವಶ್ಯತೆ ಇರಲಿಲ್ಲ ಏನು ಮಾಡುವುದಕ್ಕೆ ಆಗುವುದಿಲ್ಲ ಇವತ್ತಿನ ರಾಜಕೀಯದಲ್ಲಿ ಇದೆಲ್ಲಾ ಮಾಮುಲಿ ಆಗಿ ಬಿಟ್ಟಿದೆ ಎಂದು ಅವರು ತಿಳಿಸಿದರು.

ಸದ್ಯ ಇವತ್ತಿನ ಪರಿಸ್ಥಿತಿಯನ್ನು ನೋಡಿದರೆ ಡಿ.ಕೆ ಶಿವಕುಮಾರ್​ ಅವರನ್ನು ಅಷ್ಟು ಸರಳವಾಗಿ ಬಿಡುವುದಿಲ್ಲ, ರಾಜಕೀಯದವರು ಈ ದೇಶದಲ್ಲಿ ಏನು ಮಾಡಿದರು ನಡಿಯುತ್ತೇ ಅಂದುಕೊಂಡಿದ್ದಾರೆ. ಯಾವ ರಾಜಕೀಯ ಪಕ್ಷಗಳನ್ನು ಸಮರ್ಥನೆ ಮಾಡಿಕೊಳ್ಳಬಾರದು ಎಲ್ಲರ ದೋಸೆನೂ ತೂತೇ ಎಂದು ಮಾಜಿ ಸಚಿವ ಬಸವರಾಜ್ ಹೊರಟ್ಟಿ ಅವರು ನುಡಿದರು.

ಇನ್ನು ವಿರೋಧ ಪಕ್ಷದವರು ಜೈಲಿಗೆ ಹೋದಾಗ ಅಪಪ್ರಚಾರ ಮಾಡಿರುವ ತಪ್ಪೇ, ಇದೀಗ ಅವರ ಪಕ್ಷದವರು ಜೈಲಿಗೆ ಹೋಗಿದ್ದಾರೆ. ಡಿಕೆಶಿ ಅವರ ಪ್ರಕರಣದಲ್ಲಿ ದೇಶದಲ್ಲಿ ಕಾನೂನುಗಳಿವೆ ನ್ಯಾಯಾಲಗಳು ಯಾವುದು ತಪ್ಪು(?) ಯಾವುದು ಸರಿ(?) ಎಂದು ಹೇಳುತ್ತವೆ ಎಂದು ಬಸವರಾಜ ಹೊರಟ್ಟಿ ಅವರು ಹೇಳಿದರು.

Recommended For You

About the Author: Manjunatha D

Leave a Reply

Your email address will not be published. Required fields are marked *