‘ಜಿಟಿಡಿ ಮಾತ್ರವಲ್ಲ ದೇವೇಗೌಡ, ಸಿದ್ದರಾಮಯ್ಯ ಕೂಡ ಬಿಜೆಪಿಗೆ ಬಂದ್ರು ಆಶ್ಚರ್ಯ ಇಲ್ಲ’

ಶಿವಮೊಗ್ಗ: ಜಿ.ಟಿ ದೇವೆಗೌಡ ಅವರು ಬಿಜೆಪಿ ಬಗ್ಗೆ ಹೆಚ್ಚು ಒಲವು ತೋರುತ್ತಿರುವ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬಿಜೆಪಿ ಬಗ್ಗೆ ಜಿ.ಟಿ ದೇವೇಗೌಡರು ಮಾತ್ರ ಅಲ್ಲ, ದೇವೇಗೌಡರು, ಸಿದ್ದರಾಮಯ್ಯ ಅವರು ಬಿಜೆಪಿಗೆ ಬಂದರೂ ಆಶ್ಚರ್ಯ ಇಲ್ಲ ಎಂದು ಅವರು ಮಂಗಳವಾರ ಹೇಳಿದರು.

ನಗರದಲ್ಲಿಂದಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಾಯೋ ಪಾರ್ಟಿ, ಮುಳುಗೋ ಹಡಗಲ್ಲಿ ಯಾರು ಇರೋಕೆ ಇಷ್ಟ ಪಡ್ತಾರೆ(?) ಕಾಂಗ್ರೆಸ್ ಪಕ್ಷ ಎಲ್ಲಿದೆ(?) ಎಂದು ಈಶ್ವರಪ್ಪ ಅವರು, ಸಿದ್ದರಾಮಯ್ಯ ಹೇಗೆ ಮುಖ್ಯಮಂತ್ರಿ ಆದರೂ(!) ಕೆಜೆಪಿ ಹಾಗೂ ಬಿಜೆಪಿಯ ವೋಟು ಹಂಚಿಕೆಯಿಂದಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಅದರೂ ಎಂದರು.

ಇನ್ನು ಇಲ್ಲವಾಗಿದರೇ ಸಿದ್ದರಾಮಯ್ಯ ಎಲ್ಲಿದ್ದಾರೆ ಎಂದು ಹುಡುಕಾಡಬೇಕಿತ್ತು, ಅವರದ್ದೇ ಕ್ಷೇತ್ರದಲ್ಲಿ 36 ಸಾವಿರ ಓಟಲ್ಲಿ ಸೋತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಹೇಗಾದರೂ ಮಾಡಿ ವಿರೋಧ ಪಕ್ಷ ಸ್ಥಾನ ಪಡೆಯಲು ಈಗ ವಿಲವಿಲ ಒದ್ದಾಡ್ತಾ ಇದ್ದಾರೆ. ಇಂತಹ ಪರಿಸ್ಥಿತಿ ಸಿದ್ದರಾಮಯ್ಯನಿಗೆ ಬರಬಾರದಿತ್ತು ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಅವರು ತಿರುಗೇಟು ನೀಡಿದ್ದಾರೆ.

ಮಾಜಿ ಸಚಿವ ಜಿ.ಟಿ ದೇವೇಗೌಡ ಅವರು ಇತ್ತೀಚಿಗೆ ಜೆಡಿಎಸ್​ ಪಕ್ಷದ ಯಾವುದೇ ಸಭೆ-ಸಮಾರಂಭಗಳಲ್ಲಿ ಭಾಗಿಯಾಗುತ್ತಿಲ್ಲ ಅದುವಲ್ಲದೇ ಕೆಲವು ಬಿಜೆಪಿ ನಾಯಕರೊಟ್ಟಿಗೆ ಅವರು ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಈ ಬೆಳೆವಣಿಗಳ ಬಗ್ಗೆ ಮಾಧ್ಯಮ ಮಿತ್ರರು ಕೆ.ಎಸ್​ ಈಶ್ವರಪ್ಪ ಅವರನ್ನು ಕೇಳಿದಾಗ ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Recommended For You

About the Author: Manjunatha D

Leave a Reply

Your email address will not be published. Required fields are marked *