‘ಸಿದ್ದರಾಮಯ್ಯ, ಜಿಟಿ ದೇವೇಗೌಡ ನಮ್ಮ ಕುಟುಂಬದವರು’ – ಸಚಿವ ವಿ. ಸೋಮಣ್ಣ

ಮೈಸೂರು: ಒಂದು ಕುಟುಂಬ ಅಂದ ಮೇಲೆ ಒಬ್ಬರ ಮೇಲೆ ಪ್ರೀತಿ ಜಾಸ್ತಿ ಇರುತ್ತೆ. ಹಾಗೇ ಮಾಜಿ ಸಚಿವ ಜಿ.ಟಿ ದೇವೇಗೌಡ ಅವರ ಮೇಲೆ ಸ್ವಲ್ಪ ನನ್ನ ಪ್ರೀತಿ ಜಾಸ್ತಿ ಇದೆ ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ಮಂಗಳವಾರ ಹೇಳಿದರು.

ನಗದಲ್ಲಿಂದು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಟಿಡಿ ನನ್ನ ಹಳೆ ಸ್ನೇಹಿತರು. ಮೈಸೂರು ದಸರಾ ಮಾಡುವಾಗ ನಾವೇಲ್ಲ ಒಂದೆ ಕುಟುಂಬ ಇದ್ದಂತೆ. ಹಾಗಾಗಿ ಕುಟುಂಬ ಅಂದ ಮೇಲೆ ಒಬ್ಬರ ಮೇಲೆ ಒಬ್ಬರ ಪ್ರೀತಿ ಜಾಸ್ತಿ ಇದ್ದೆ ಇರುತ್ತದೆ ಎಂದರು.

ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ದಸರಾಗೆ ಆಹ್ವಾನ ಕೊಡುವ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ನಮ್ಮ ಕುಟುಂಬದವರೇ, ಈಗಾಗಲೇ ಅವರನ್ನು ನಾನು ಸಂಪರ್ಕ ಮಾಡಿದ್ದೇನೆ. ಅವರು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದರು.

ಇನ್ನೊಮ್ಮೆ ನಿಮ್ಮ ಮುಂದೆ ಬೇಕಿದ್ದರೆ ಸಿದ್ದರಾಮಯ್ಯ ಅವರಿಗೆ ಸಂಪರ್ಕ ಮಾಡಿ ನಿಮ್ಮೊಟ್ಟಿಗೆ ಆಹ್ವಾನ ಕೊಡಲು ಹೋಗುತ್ತೇನೆ. ನಾನು ಸಿದ್ದರಾಮಯ್ಯನವರು ಒಂದೇ ಪಕ್ಷದಲ್ಲಿ ಇದ್ದವರು. ಅವರು ಅದೃಷ್ಟದಿಂದ 5 ವರ್ಷ ಸಿಎಂ ಆಗಿ ಕಾರ್ಯನಿರ್ವಹಿಸಿದಲ್ಲದೇ, ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನುಭವ ಉಳ್ಳವರು. 13 ಬಾರಿ ಬಜೆಟ್ ಮಂಡಿಸಿದ ಅನುಭವ ಉಳ್ಳವರು ಸಿದ್ದರಾಮಯ್ಯ ಅವರು, ಅಂತಹ ವ್ಯಕ್ತಿಗಳ ಜೊತೆಗೂಡಿ ನಾವು ದಸರಾ ಆಚರಣೆ ಮಾಡುತ್ತೇವೆ ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ.

ಕೆಲವು ದಿನಗಳ ಇಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮೈಸೂರು ದಸರಾಗೆ ಆಹ್ವಾನಿಸಲ್ಲ ಎಂಬ ಸುದ್ದಿ ಎದ್ದಿತ್ತು, ಈ ಬಗ್ಗೆ ಸ್ಪಷ್ಠನೆ ನೀಡದ ವಿ.ಸೋಮಣ್ಣ ಅವರು ಯಾವುದೇ ಸಂಶಯ ಬೇಡ ಎಲ್ಲಾ ಪಕ್ಷದವರನ್ನು ಕರೆಯುತ್ತೇವೆ ಎಂದು ತಿಳಿಸಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *