ಬೆದರಿಕೆಗೆ ಜಗ್ಗೋನಲ್ಲ ನಮ್ಮ ಪೈಲ್ವಾನ್, ದರ್ಶನ್​ಗೆ ಎಚ್ಚರಿಕೆ ಕೊಟ್ಟ ಪೈಲ್ವಾನ್ ನಿರ್ಮಾಪಕಿ..!

ಬೆಂಗಳೂರು: ಪೈಲ್ವಾನ್ ಸಿನಿಮಾ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ನಟ ದರ್ಶನ್ ಟ್ವೀಟ್ ಮಾಡಿದ ಕೆಲವೇ ನಿಮಿಷದಲ್ಲಿ ಪರೋಕ್ಷವಾಗಿ ದರ್ಶನ್​​ಗೆ ಟಾಂಗ್​ ಕೊಟ್ಟಿದ್ದು, ಇದೀಗ ಸ್ಯಾಂಡಲ್​ವುಡ್​ನಲ್ಲಿ ಭಾರಿ ಚರ್ಚೆ ಆಗುತ್ತಿದೆ.

ಸ್ವಪ್ನ ಕೃಷ್ಣ ಅವರು ಟ್ವೀಟ್ ಮಾಡಿ ನಿಮ್ಮ ಈ ಬೆದರಿಕೆಗೆ ಜಗ್ಗೋನಲ್ಲ ನಮ್ಮ ಪೈಲ್ವಾನ್, ಕಾಲ್ ಏಳೆಯೋಕೆ ಬಂದವರ ಸ್ಥಾನ ಕಾಲ್ ಕೆಳಗೆನೇ ಎಂದು ನಿರ್ಮಾಪಕಿ ಕೃಷ್ಣ ಅವರು ಟ್ವೀಟ್ ಮಾಡಿದ್ದಾರೆ.


ಇಂದು ಬೆಳಿಗ್ಗೆ ನಟ ದರ್ಶನ್ ಅವರು ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ ನನ್ನ ಅಭಿಮಾನಿಗಳನ್ನು ಕೆಣಕಬೇಡಿ ಎಂದು ಚಾಲೆಂಜಿಂಗ್​​ ಸ್ಟಾರ್ ದರ್ಶನ್ ಅವರು ಎಚ್ಚರಿಕೆ ಕೊಟ್ಟಿದ್ದರು.

ಇದಲ್ಲದೇ ದರ್ಶನ್ ಅವರು ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು ಪ್ರಚೋದಿಸಲು ಬರದಿರಿ ಎನ್ನುವ ಸಂದೇಶವನ್ನು ದರ್ಶನ್​ ರವಾನಿಸಿದ್ದಾರು.

ಇನ್ನು ದರ್ಶನ್ ಅಭಿಮಾನಿಗಳು, ಸುದೀಪ್ ಅಭಿಮಾನಿಗಳು ಟ್ವೀಟರ್​ನಲ್ಲಿ ಒಬ್ಬರಿಗೊಬ್ಬರು ಪ್ರತ್ಯುತ್ತರ ಕೊಡುತ್ತಿದ್ದು, ಈ ಸ್ಟಾರ್ಸ್​ಗಳ ಜಗಳ ಇಲ್ಲಿಗೆ ನಿಲ್ಲುವಂತೆ ಕಾಣುವಂತಿಲ್ಲ.

Recommended For You

About the Author: Sushmitha T S

Leave a Reply

Your email address will not be published. Required fields are marked *