ನಿಖಿಲ್​ ಕುಮಾರಸ್ವಾಮಿ ಒಳ್ಳೆಯ ಹುಡುಗ, ನನ್ನ ಮಗ ಇದ್ದಂತೆ – ಚೆಲುವರಾಯಸ್ವಾಮಿ

ಮಂಡ್ಯ:  ನಿಖಿಲ್ ಕುಮಾರಸ್ವಾಮಿ ಒಳ್ಳೆಯ ಹುಡುಗ, ರಾಜಕಾರಣ ಮಾಡೋದಕ್ಕೆ ಟೈಮ್ ಇತ್ತು,  ದೊಡ್ಡದಾಗಿ ಮೀಸೆ ತಿರುಗಿ, ಕರೆತಂದು ಸೋಲಿಸಿದರು ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ನಿಖಿಲ್ ಎಲ್ಲೋ ಒಂದು ಕಡೆ ರಾಜಕಾರಣ ಮಾಡಿಕೊಳ್ಳುತ್ತಿದರು.  ಅವರನ್ನು ಕರೆತಂದು ಸೋಲಿಸಿದರು. ಪುಟ್ಟರಾಜು ಚುನಾವಣೆ ಜವಾಬ್ದಾರಿ ತಗೆದುಕೊಂಡಿದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಕಾರಣ ಎಂದ ಚೆಲುವರಾಯಸ್ವಾಮಿ ತಿಳಿಸಿದರು.

ಇನ್ನೂ ನನಗೂ ಕುಮಾರಸ್ವಾಮಿಗೂ ವೈರತ್ವ ಇದೆ.  ಹಾಗಂತ ನಿಖಿಲ್ ಗೂ ವೈರತ್ವ ಮಾಡೋದಕ್ಕೆ ಆಗುತ್ತ. ಅವನೂ ನನ್ನ ಮಗ ಇದ್ದಂತೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.

ಪುಟ್ಟರಾಜು ಕ್ಷೇತ್ರದಲ್ಲಿ ನಿಖಿಲ್ ಗೆ ಎಷ್ಟು ಲೀಡ್ ಕೊಟ್ಟಿದ್ದಾರೆ? ಎಂದು ಇದೇ ವೇಳೆ ಪ್ರಶ್ನೆ ಮಾಡಿದರು.  ಸಚಿವರಾಗಿದ್ದಾಗ ಕುದುರೆ ಮೇಲಿದ ಮಾತಾಡ್ತಾರೆ ಅಂದುಕೊಂಡಿದ್ದೇ,  ಕುದುರೆ ಮೇಲಿಂದ ಇಳಿದ ಮೇಲೂ ಮಾತನಾಡೋದನ್ನು ಎಲ್ಲೂ ನೋಡಿಲ್ಲ,   ಎರಡೂವರೆ ಲಕ್ಷ ಲೀಡ್ ಬರದಿದ್ರೆ ರಾಜಕೀಯ ನಿವೃತ್ತಿ ಅಂದಿದರು,   ಆ ಮೇಲೆ ತಮಾಷೆಗೆ ಅಂತೆ ಅಂತಾರೆ.  ರಾಜಕಾರಣದಲ್ಲಿ ಸ್ವಲ್ಪ ಹಿಡಿತದಲ್ಲಿ ಮಾತನಾಡಬೇಕು ಎಂದು  ಪುಟ್ಟರಾಜು ವಿರುದ್ಧ ಮತ್ತೆ ಚೆಲುವರಾಯಸ್ವಾಮಿ ಕೆಂಡಕಾರಿದರು.

8 ಸಾವಿರ ಕೋಟಿ ಕೊಟ್ಟಿದ್ದೀವಿ ಅಂತಾರೆ. ಎಲ್ಲಿ ಟೆಂಡರ್ ಆಗಿದೆ. ಯಾವ ಕೆಲಸ ಪ್ರಾರಂಭವಾಗಿದೆ. ಇದಕ್ಕೆಲ್ಲ ಕೆ.ಆರ್.ಪೇಟೆ ಚುನಾವಣೆಗೂ ಮುನ್ನ ಕೊಡಲೇಕಲ್ವಾ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 14 ತಿಂಗಳ ಅವಧಿಯಲ್ಲಿ ಮಂಡ್ಯಕ್ಕೆ 8 ಸಾವಿರ ಕೋಟಿ ಹಣ ಬಿಡುಗಡೆಯಾಗಿಲ್ಲ ಎಂದ ಚಲುವರಾಯಸ್ವಾಮಿ ಹೇಳಿದರು.

Recommended For You

About the Author: Dayakar

Leave a Reply

Your email address will not be published. Required fields are marked *