ಕುಮಾರಸ್ವಾಮಿ ಇವೆಲ್ಲವನ್ನೂ ಬಿಡಬೇಕು. ಒಬ್ಬ ಅಣ್ಣನಾಗಿ ಹೇಳುತ್ತಿದ್ದೇನೆ – ರೇವಣ್ಣ

ಹಾಸನ:  ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ಅಸ್ಥಿತ್ವ ಉಳಿಸಿಕೊಂಡಿದೆ. ಇದನ್ನು ರಾಷ್ಟ್ರೀಯ ಪಕ್ಷಗಳು ತೆಗೆಯಲು ಒಳಸಂಚನ್ನು ಮಾಡುತ್ತಿದ್ದಾರೆ. ಅದು ಏನೇ ಮಾಡಿದರು ಯಶಸ್ವಿಯಾಗಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪಪ್ರಚಾರವನ್ನು ದೇವೇಗೌಡರು, ಕುಮಾರಸ್ವಾಮಿ ಅಪಾರ ದಿವಸ ನೋಡಿದ್ದಾರೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರದಿದ್ದರೆ 48 ಸಾವಿರ ಕೋಟಿ ರೈತರ ಸಾಲಮನ್ನಾ ಆಗುತ್ತಿರಲಿಲ್ಲ ಎಂದರು.

ಡಿ.ಕೆ. ಶಿವಕುಮಾರ್ ಪಾಪ ಕಷ್ಟದಲ್ಲಿದ್ದಾರೆ ಅವರೊಬ್ಬರೇ ಆಸ್ತಿ ಮಾಡಿರುವುದು,  ಬೇರೆ ಪಕ್ಷದಲ್ಲಿರುವವರು ಯಾರು ಆಸ್ತಿ ಮಾಡಿಲ್ಲವಾ, ನಾನು, ದೇವೇಗೌಡರು, ಕುಮಾರಸ್ವಾಮಿ ನಿತ್ಯ ಡಿಕೆಶಿ ಜೊತೆ ಸಂಪರ್ಕದಲ್ಲಿದ್ದೇವೆ, ಕೆಲವರು ಬೆಳಿಗ್ಗೆ ಎದ್ದರೆ ಸಿದ್ದರಾಮಯ್ಯ ರಾತ್ರಿ ಆದರೆ ಯಡಿಯೂರಪ್ಪ ಮನೆಯ ಬಾಗಿಲು ತಟ್ಟುತ್ತವೆ.  ಅಂತಹವರು ಡಿ. ಕೆ ಶಿವಕುಮಾರ್ ಉಳಿಸುತ್ತಾರಾ..? ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ.  ಕುಮಾರಸ್ವಾಮಿ ಏಕೆ ಡಿಕೆ ವಿರುದ್ದ ಮಾತನಾಡುತ್ತಾರೆ. ಅವರ ಮನೆಗೆ ಹೋಗಿ ಡಿಕೆಶಿ ತಾಯಿ, ಪತ್ನಿಯನ್ನು ಮಾತನಾಡಿಸಿ ಸಮಾಧಾನ ಹೇಳಿದ್ದಾರೆ ಎಂದು ತಿಳಿಸಿದರು.

ಕೆಲವರು ಬೀಗರ ಊಟವನ್ನೇ ಹುಡುಕಿಕೊಂಡು ತಿರುಗುತ್ತಿದ್ದಾರೆ, ಎಲ್ಲಿ, ಯಾರ ಮನೆಯಲ್ಲಿ ಬೀಗರ ಊಟ ಇದೆ ಎಂದು ಹುಡುಕಿಕೊಂಡು ಓಡಾಡುತ್ತಿದ್ದಾರೆ, ಇವರಿಂದ ಕುಮಾರಸ್ವಾಮಿ ಕಲಿಯಬೇಕಾ..? ಕುಮಾರಸ್ವಾಮಿ ಕೆಲವು ತಪ್ಪು ಮಾಡಿದ್ದಾರೆ. ಏತಕ್ಕೂ ಬಾರದವರನ್ನು ಶಾಸಕ, ಮಂತ್ರಿ, ಎಂಪಿಯನ್ನಾಗಿ ಮಾಡಿದ್ದಾರೆ. ಮಾಡಿದ ತಪ್ಪಿಗೆ ಈಗ ಕುಮಾರಸ್ವಾಮಿ ಅನುಭವಿಸುತ್ತಿದ್ದಾರೆ,

ಕುಮಾರಸ್ವಾಮಿದು ಸ್ವಲ್ಪ ದೊಡ್ಡ ಗುಣ,  ಅಯ್ಯೋ ಅಂಥಾ ಬಂದರೆ ತಥಾಸ್ತು ಅಂದು ಬಿಡಿತ್ತಾನೆ, ಅಮೇಲೆ ಅವರೆಲ್ಲರೂ ಕುಮಾರಸ್ವಾಮಿಗೆ ಟೋಪಿ ಹಾಕಿ ಹೋಗುತ್ತಾರೆ. ಕುಮಾರಸ್ವಾಮಿ ಇವೆಲ್ಲವನ್ನೂ ಬಿಡಬೇಕು. ಒಬ್ಬ ಅಣ್ಣನಾಗಿ ಹೇಳುತ್ತಿದ್ದೇನೆ ಕುಮಾರಸ್ವಾಮಿ ಗೌರವದಿಂದ ಇರಬೇಕು . ರಾಜಕೀಯ ಶಾಶ್ವತವಲ್ಲ ಕೆಲವೊಂದನ್ನು ಕುಮಾರಸ್ವಾಮಿ ಬಿಡಬೇಕು ಎಂದರು.

ಮಾಜಿ ಶಾಸಕ ಚೆಲುವರಾಯಸ್ಬಾಮಿ ಹೇಳಿಕೆಗೆ ರೇವಣ್ಣ ತಿರುಗೇಟು ನೀಡಿದ ಅವರು,  ಕೆ.ಆರ್.ಪೇಟೆ ಕ್ಷೇತ್ರದಲ್ಲಿ 700 ಕೋಟಿ ಕೆಲಸ ಮಾಡಲಾಗಿದೆ,  ಇವೆಲ್ಲವೂ ಎಲ್ಲಿ ಮೇವು ಸಿಗುತ್ತದೋ ಅಲ್ಲಿಗೆ ಹುಡುಕಿಕೊಂಡು ಹೋಗುತ್ತವೆ. ಯಾವ ಶಾಸಕರು ಪಕ್ಷ ಬಿಡುವುದಿಲ್ಲ ಅವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ, ಮುಖ್ಯಮಂತ್ರಿ ಮಾಡಿ ಎಂದು ನಾವು ಕಾಂಗ್ರೆಸ್ ಬಳಿ ಹೋಗಿದ್ದೆವಾ..? ದೈವಾನುಗ್ರಹ ಇತ್ತು ಹದಿನಾಲ್ಕು ತಿಂಗಳು ಮುಖ್ಯಮಂತ್ರಿ ಆಗಿ ಸಾಲಮನ್ನಾ ಮಾಡಿದ್ದಾರೆ, ಬೇರೆ ಯಾವ ಮುಖ್ಯಮಂತ್ರಿ ಆಗಿದ್ದರೂ ಸಾಲಮನ್ನಾ ಮಾಡಲು ಆಗುತ್ತಿರಲಿಲ್ಲ ಎಂದು ತಿಳಿಸಿದರು.

ದೇವೇಗೌಡರಿಗೆ ಚಾಕು ಹಾಕಿದವರಿಗೆ ಜನರೇ ಉತ್ತರ ಕೊಟ್ಟಿದ್ದಾರೆ.  ಅವರನ್ನು ಡಸ್ಟ್ ಪಿನ್ ಗೆ ಜನರೇ ಹಾಕಿದ್ದಾರೆ. ಅವರಿಗೆಲ್ಲ ಉತ್ತರ ಕೊಡಲು ಹೋದರೆ ಪೊಳ್ಳೆದ್ದು ಹೋಗುತ್ತೇವೆ.  ಜೆಡಿಎಸ್ ನ ಮುಗಿಸಲು ಯಾರಿಂದಲೂ ಆಗಲ್ಲ, ಜನತೆ ದೇವರ ಆಶೀರ್ವಾದ ಇರೋವರೆಗೂ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ, ದೇವೇಗೌಡರು ಇವೆಲ್ಲವನ್ನೂ ಹೆದರಿಸಿ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಿದ್ದಾರೆ, ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ, ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ಶಕ್ತಿ ಜೆಡಿಎಸ್ ಗೆ ಇದೆ, ಜನರೇ ಎರಡು ರಾಷ್ಟ್ರೀಯ ಪಕ್ಷಗಳಿಗೆ ಉಗಿಯುವ ಕಾಲ ಬರಲಿದೆ ಎಂದು ರೇವಣ್ಣ ವಾಗ್ಥಾಳಿ ನಡೆಸಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *