ಡಿ.ಕೆ ಶಿವಕುಮಾರ್ ಆಪ್ತರಿಗೆ ನಾಲ್ಕು ವಾರ ರಿಲೀಫ್‌

ಬೆಂಗಳೂರು: ಇತ್ತ ಕರ್ನಾಟಕ ಹೈಕೋರ್ಟ್‌ನಲ್ಲೂ ಡಿ.ಕೆ.ಶಿವಕುಮಾರ್‌ಗೆ ಹಿನ್ನೆಡೆಯಾಗಿದೆ. ಇಡಿ ಸಮನ್ಸ್ ಮತ್ತು ರದ್ದುಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಂಡಿದೆ. ಆದರೆ, ಅವರ ಆಪ್ತರಿಗೆ 4 ವಾರ ರಿಲೀಫ್ ಸಿಕ್ಕಿದೆ.

ದೆಹಲಿ ನಿವಾಸದಲ್ಲಿ ದಾಖಲೆ ಇಲ್ಲದ ಹಣ ಪತ್ತೆ ಪ್ರಕರಣ ಸಂಬಂಧ ಇಡಿ ಸಮನ್ಸ್ ಹಾಗೂ ಪ್ರಕರಣ ರದ್ದುಕೋರಿ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಆಪ್ತರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಜಾಗೊಂಡಿದೆ. ಸಿಆರ್‌ಪಿಸಿ ಸೆಕ್ಷನ್ 482 ಅಡಿ ಏಕಸದಸ್ಯ ಪೀಠ ಆದೇಶ ನೀಡಿರೋದರಿಂದ ಮೇಲ್ಮನವಿ ವಿಚಾರಣೆಗೆ ಅರ್ಹವಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಇದರಿಂದ ಡಿಕೆಶಿಗೆ ಹೈಕೋರ್ಟ್‌ನಲ್ಲಿ ಮತ್ತೆ ಹಿನ್ನಡೆಯಾಗಿದೆ. ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಡಿಕೆಶಿ ಮತ್ತು ಅವರ ಆಪ್ತರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಡಿಕೆಶಿ ಆಪ್ತರಾದ ಆಂಜನೇಯ, ಸುನೀಲ್ ಶರ್ಮಾ ಹಾಗೂ ಸಚಿನ್ ನಾರಾಯಣ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಕೂಡ ಹೈಕೋರ್ಟ್ ವಜಾಗೊಳಿಸಿತು. ಈ ವೇಳೆ ಇವರ ಪರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವರೆಗೂ ಮಧ್ಯಂತರ ರಕ್ಷಣೆಗೆ ಮನವಿ ಮಾಡಿದರು. ‌ಇದನ್ನು ಪರಿಗಣಿಸಿದ ಸಿಜೆ ಎ.ಎಸ್.ಒಕಾ ನೇತೃತ್ವದ ವಿಭಾಗೀಯ ಪೀಠ, ನಾಲ್ಕು ವಾರಗಳವರೆಗೆ ಬಂಧಿಸದಂತೆ ಇಡಿಗೆ ನಿರ್ದೇಶನ ನೀಡಿತು. ಅಲ್ದೆ, ಇ.ಡಿ ಸಮನ್ಸ್ ನೀಡಿದರೆ ವಿಚಾರಣೆಗೆ ಹಾಜರಾಗಬೇಕು. ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿತು.

ಇತ್ತ, ಸಿಆರ್‌ಪಿಸಿ 482 ಅಡಿ ಹೈಕೋರ್ಟ್‌ನಲ್ಲಿ‌ ಮೇಲ್ಮನವಿ ‌ಸಲ್ಲಿಸಲು ಅವಕಾಶವಿಲ್ಲದ ಕಾರಣ ಡಿಕೆಶಿ ಮತ್ತು ಆಪ್ತರು ಈಗ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಇದರಿಂದ ಡಿಕೆಶಿಯ ಇಡಿ ವಿಚಾರಣೆ, ಮೇಲ್ಮನವಿ, ಜಾಮೀನು ಅರ್ಜಿಗಳ ಎಲ್ಲವೂ ದೆಹಲಿಗೆ ಶಿಪ್ಟ್ ಆಗಲಿದೆ.

Recommended For You

About the Author: Manjunatha D

Leave a Reply

Your email address will not be published. Required fields are marked *