ಒಬ್ಬ ಮುಸ್ಲಿಂ ಹತ್ರ ಕೈ ಮುಗಿದು ಮತ ಕೇಳಿಲ್ಲ ಎಂದಿದ್ದ ಈಶ್ವರಪ್ಪ ಹಿಂದೆ ಮಾಡಿದ್ದೇನು ಗೊತ್ತಾ?- ವಿಡಿಯೋ ವೈರಲ್

ಬೆಂಗಳೂರು: ಇದುವರೆಗೂ ಒಬ್ಬ ಮುಸ್ಲಿಂ ಹತ್ರ ಕೈ ಮುಗಿದು ಮತ ಹಾಕಿ ಅಂತ ಕೇಳಿಲ್ಲ ಎಂದಿದ್ದ ಸಚಿವ ಕೆ.ಎಸ್ ಈಶ್ವರಪ್ಪ, ಮುಸ್ಲಿಂ ಮತದಾರನ ಮನೆಗೆ ಹೋಗಿ ಖರ್ಜೂರ ತಿಂದು ಮತ ಹಾಕಿ ಎಂದು ಮನವಿ ಮಾಡಿ ಬಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಈಶ್ವರಪ್ಪ ಬಿಜೆಪಿಯವರು ಹಾಗೆ ಹೀಗೆ ಏನೂ ಮನಸಲ್ಲಿ ಇಟ್ಟುಕೊಳ್ಳಬೇಡಿ,  ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರೆಸೋಣ ಎಂದು ಭರವಸೆ ನೀಡಿದ್ದು. ಚುನಾವಣೆ ಸಮಯದಲ್ಲಿ ಮತಯಾಚನೆ ಮಾಡಿರುವ ವಿಡಿಯೋ ಇದೀಗ ಸಾಕಷ್ಟು ಸುದ್ದಿಯಾಗಿದೆ.

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಷ್ಟ್ರ ಭಕ್ತ ಮುಸ್ಲಿಂರು ಬಿಜೆಪಿ ವೋಟ್ ಹಾಕ್ತಾರೆ. ಪಾಕ್ ಪರ ಇರುವ ಮುಸ್ಲಿಂರು ಮಾತ್ರ ಬಿಜೆಪಿಗೆ ವೋಟ್ ಹಾಕಲು ಹಿಂದೆ ಮುಂದೆ ನೋಡ್ತಾರೆ. ನನ್ನ ಕ್ಷೇತ್ರದಲ್ಲಿ ಎಂದು ಸಹ ಕೈ ಮುಗಿದು ಮುಸ್ಲಿಂರಿಂದ ವೋಟ್ ಕೇಳಿಲ್ಲ. ಅವರಾಗಿಯೇ ವೋಟ್ ಹಾಕ್ತಾರೆ ಎಂದಿದ್ದರು.

Recommended For You

About the Author: Dayakar

Leave a Reply

Your email address will not be published. Required fields are marked *