‘ಸಾಮಾನ್ಯ ಸದಸ್ಯ ರಾಜ್ಯಾಧ್ಯಕ್ಷ, ಸಂಸದನಾದ ಅಂದ್ರೆ ಅದು ನಮ್ಮಲ್ಲಿ ಮಾತ್ರ’

ಬಳ್ಳಾರಿ: ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಅಂತಾ ಘೋಷಣೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆಯನ್ನು ತಿಳಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಮಂಗಳವಾರ ಹೇಳಿದರು.

ನಗರದ ಬಸವ ಭವನದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷದ ಒಬ್ಬ ಸಾಮಾನ್ಯ ಸದಸ್ಯ ರಾಜ್ಯಾಧ್ಯಕ್ಷ, ಸಂಸದನಾಗುತ್ತಾನೆ ಅಂದರೆ ಅದು ಬಿಜೆಪಿಯಲ್ಲಿ ಮಾತ್ರ. ಬಿಎಸ್​ವೈ ಅವರು ನುಡಿದಂತೆ ನಡೆದಿದ್ದಾರೆ. ನಾನೂ ಕೂಡಾ ಲಕ್ಷ್ಮಣ ಸವದಿ ಅವರಂತೆ ಆಕಸ್ಮಿಕವಾಗಿ ರಾಜ್ಯಾಧ್ಯಕ್ಷನಾದೆ ಎಂದರು.

ನಮ್ಮ ಗುರಿ ಕೇವಲ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡೋದಲ್ಲ ಹಾಗೂ ರವಿಕುಮಾರ್​ ಅವರನ್ನು ಅಧ್ಯಕ್ಷರನಾಗಿ ಮಾಡೋದಲ್ಲ, ನಮ್ಮ ಗುರಿ ದೇಶವನ್ನೇ ವಿಶ್ವಗುರುವನ್ನಾಗಿ ಮಾಡುವುದು ಎಂದು ನಳೀನ್​ ಕುಮಾರ್​ ಕಟೀಲ್ ಅವರು ನುಡಿದರು.

ಇನ್ನು ಭಾರತ ದೇಶದಲ್ಲಿ ಒಂದೇ ಧ್ವಜ, ಒಂದೇ ಸಂವಿಧಾನ ಹಾಗೂ ಒಬ್ಬರೇ ಪ್ರಧಾನಿ ಇರಬೇಕು ಇದಕ್ಕೆ ಅಟಲ್ ಬಿಹಾರಿ ವಾಜಪೇಯಿ, ಎಲ್​.ಕೆ ಅಡ್ವಾನಿಯಂತವರೂ ಕೂಡ ವ್ಯಕ್ತಿಗಳಿಗೆ ಪೂಜಿಸಲು ಪ್ರೋತ್ಸಾಹಿಸಲಿಲ್ಲ, ವ್ಯಕ್ತಿಗಿಂತ ಪಕ್ಷ ಶ್ರೇಷ್ಠ, ಪಕ್ಷಕ್ಕಿಂತ ದೇಶ ಶ್ರೇಷ್ಠ ಎನ್ನುವುದನ್ನು ಬಿಜೆಪಿ ಪಾಲಿಸುತ್ತಿದೆ. ಆದರೆ, ನಾನು 2004ರಲ್ಲಿ ಪಕ್ಷಕ್ಕೆ ಬಂದಾಗ ಕೇಳಿದೆ. ಆಗ ಕಾಂಗ್ರೆಸ್ ಅಧ್ಯಕ್ಷ ಯಾರು ಅಂದರೆ ಸೋನಿಯಾ ಗಾಂಧಿ, ಅಂದಿನಿಂದ ಇಂದಿನ ವರೆಗೂ ಅವರು ಮತ್ತವರ ಮಗ ರಾಹುಲ್ ಗಾಂಧಿಯವರೆ ಅಧಿಕಾರ ನಡೆಸುತ್ತಾ ಬರುತ್ತಿದ್ದಾರೆ ಎಂದು ಅವರು ಮಾತನಾಡಿದರು.

ಅಲ್ಲದೇ ತಮ್ಮ ಪಕ್ಷದಲ್ಲಿ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅಮಿತ್ ಶಾ ಸೇರಿದಂತೆ ನಾಲ್ಕು ಮಂದಿ ಬದಲಾಗಿದ್ದಾರೆ. ನಮ್ಮ ಪಕ್ಷ ಪ್ರಜಾಪ್ರಭುತ್ವ ತತ್ವದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಮುಂದಿನ ಐದು ವರ್ಷದಲ್ಲಿ ಬಿಜೆಪಿ ಬಾವುಟ ಕೇರಳದ ಮನೆ-ಮನೆಗಳಲ್ಲಿ ಹಾರಾಡುತ್ತದೆ. ಆರ್ಥಿಕ ಕುಸಿತ ಆಗಿರೋದು ಭಾರತದಲ್ಲಿ ಮಾತ್ರ ಅಲ್ಲ, ಇಡೀ ಜಗತ್ತಿನಲ್ಲಿಯೇ ಆಗಿದೆ. ಇಂತಹ ಸ್ಥಿತಿಯಲ್ಲಿ ಇದ್ದರೂ ಕೂಡಾ ಭಾರತ ಸುಸ್ತಿರವಾಗಿ, ಆರನೇ ಸ್ಥಾನದಲ್ಲಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಸಂಸದ ನಳೀನ್​ ಕುಮಾರ್ ಕಟೀಲ್ ಅವರು ತಿಳಿಸಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *