ಮತ್ತೆ ಶಿವಗಾಮಿಯಾಗಿ ರಮ್ಯಾಕೃಷ್ಣ ಈಸ್​ ಬ್ಯಾಕ್..!

ಬಾಹುಬಲಿಯ ಚಿತ್ರದ ಯಾವ್ದೇ ಪಾತ್ರವನ್ನ ಮರೆಯೋಕ್ಕೆ ಸಾಧ್ಯವಿಲ್ಲ. ‘ನಾ ಮಾಟೇ ಶಾಸನಂ’ ಅಂತ ರಾಜಮಾತೆ ಶಿವಗಾಮಿಯಾಗಿ ಅಬ್ಬರಿಸಿದ ರಮ್ಯಾಕೃಷ್ಣ, ಕಮಾಲ್​ ಮಾಡಿದ್ರು. ಇದೀಗ ಅದೇ ರಮ್ಯಾಕೃಷ್ಣ, ರಾಣಿ ಶಿವಗಾಮಿಯಾಗಿ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಶಿವಗಾಮಿಯ ಪಾತ್ರ ಪರಿಚಯಿಸೋ ಹಾಡು ರಿಲೀಸ್​ ಆಗಿ ಸದ್ದು ಮಾಡ್ತಿದೆ.

ಮತ್ತೆ ಶಿವಗಾಮಿಯಾಗಿ ರಮ್ಯಾಕೃಷ್ಣ ಈಸ್​ ಬ್ಯಾಕ್
‘ಆಡುವೆ ನಾನು ರತಿ ಶಿವಗಾಮಿ’ ಸಾಂಗ್​ ರಿಲೀಸ್
ಬಾಹುಬಲಿ ಚಿತ್ರದ ಶಿವಗಾಮಿ ಪಾತ್ರ ಚಿತ್ರರಸಿಕರ ಮನ ಗೆದ್ದಿತ್ತು. ಇದೀಗ ಆ ಪಾತ್ರದ ಹೆಸರನ್ನೇ ಟೈಟಲ್​ ಮಾಡಿಕೊಂಡು ರಾಣಿ ಶಿವಗಾಮಿ ಅನ್ನೋ ಸಿನಿಮಾ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಬಾಹುಬಲಿಯ ಮಾತೆ ಶಿವಗಾಮಿಯ ಪಾತ್ರ ಮಾಡಿದ್ದ ಅದೇ ರಮ್ಯಾಕೃಷ್ಣ ಈ ಚಿತ್ರದಲ್ಲೂ ಶಿವಗಾಮಿಯಾಗಿ ಬಣ್ಣ ಹಚ್ಚಿದ್ದಾರೆ. ರಮ್ಯಾಕೃಷ್ಣ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ‘ಆಡುವೆ ನಾನು ರತಿ ಶಿವಗಾಮಿ’ ಅನ್ನೋ ಲಿರಿಕಲ್ ವೀಡಿಯೋ ಸಾಂಗ್​ ರಿವೀಲ್​ ಆಗಿದೆ.

ವೀರ್​ ಸಮರ್ಥ್​​ ಸಂಗೀತದ ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್​ ಸಾಹಿತ್ಯ ಬರೆದಿದ್ದಾರೆ. ಕ್ಲಾಸಿಕಲ್​ ಸ್ಟೈಲ್​ ಹಾಡನ್ನ ಅನುರಾಧ ಭಟ್​ ಬಹಳ ಸೊಗಸಾಗಿ ಹಾಡಿದ್ದಾರೆ. ಚಿತ್ರದಲ್ಲಿ ರಾಣಿ ಶಿವಗಾಮಿ ಪಾತ್ರಕ್ಕೆ ಬಿಲ್ಡಪ್ ಕೊಡೋ ಸಾಂಗಿದು. ಆಕೆ ಎಷ್ಟು ಪವರ್​​ಫುಲ್..? ಆಕೆ ಒಳ್ಳೆಯವರಿಗೆ ಒಳ್ಳೆಯವಳು, ಕೆಟ್ಟವರಿಗೆ ಕೆಟ್ಟವಳು ಅನ್ನೋದನ್ನ ಈ ಹಾಡಿನಲ್ಲಿ ಹೇಳಲಾಗ್ತಿದೆ. ಡಾ. ಶಿವಶಂಕರ್ ಮಾಸ್ಟರ್​ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ.

ರಾಣಿ ಶಿವಗಾಮಿಯಾಗಿ ರಮ್ಯಾಕೃಷ್ಣ ಒನಪು ವಯ್ಯಾರ
ದರ್ಬಾರ್​ ಹಾಲ್​ನಲ್ಲಿ ಜೋರಾಗಿದೆ ಶಿವಗಾಮಿ ಅಬ್ಬರ
ಬೆಂಗಳೂರಲ್ಲೇ ದರ್ಬಾರ್​ ಹಾಲ್​ ಸೆಟ್​ ಹಾಕಿ ನಾಲ್ಕು ದಿನಗಳ ಕಾಲ ಈ ಹಾಡನ್ನ ಶೂಟ್ ಮಾಡಲಾಗಿದೆ. ರಮ್ಯಾ ಕೃಷ್ಣ ಒನ್ಸ್​ ಅಗೇನ್​ ಶಿವಗಾಮಿಯಾಗಿ ಅಬ್ಬರಿಸೋ ಸುಳಿವು ಸಿಕ್ತಿದೆ. ರಮ್ಯಾಕೃಷ್ಣ ಮತ್ತೊಮ್ಮೆ ರಾಣಿ ಅವತಾರದಿಂದ ಮೋಡಿ ಮಾಡೋಕ್ಕೆ ಬರ್ತಿದ್ದು, ಹಾಡಿನಲ್ಲಿ ಭರತನಾಟ್ಯ ಶೈಲಿಯ ಕ್ಲಾಸಿಕಲ್​ ಡ್ಯಾನ್ಸ್​ ಮಾಡಿ ಮಿಂಚಿದ್ದಾರೆ. ತಮ್ಮ ಒನಪು ವಯ್ಯಾರದ ಮೂಲಕ ಗಮನ ಸೆಳೆದಿದ್ದಾರೆ.

ಬಾಲ್​ ರೆಡ್ಡಿ ಅಂಡ್​ ಟೀಂ ಹಾಡನ್ನ ಸೊಗಸಾಗಿ ಸೆರೆಹಿಡಿದಿದ್ಧಾರೆ. ಶ್ರೀ ವಿಘ್ನೇಶ್​ ಕಾರ್ತಿಕ್​​ ಸಿನಿಮಾಸ್​​ ಬ್ಯಾನರ್​ನಲ್ಲಿ ಜಿ. ಶ್ರೀಧರ್​ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಕಥೆ 9ನೇ ಶತಮಾನದಲ್ಲಿ ಶುರುವಾಗಿ 21ನೇ ಶತಮಾನದಲ್ಲಿ ಕೊನೆಯಾಗುತ್ತೆ, ಅದು ಹೇಗೆ ಅನ್ನೋದನ್ನ ತೆರೆಮೇಲೆ ನೋಡ್ಬೇಕು.

ಪಿ.ಎನ್​ ಸತ್ಯ ಅವರ ಗರಡಿಯಲ್ಲಿ ಪಳಗಿದ ಮಧು ಮಿಣಕನಗುರ್ಕಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವದಿಂದ ಶಿವಗಾಮಿ ಚಿತ್ರವನ್ನ ನಿರ್ದೇಶಿಸಿದ್ದಾರೆ. ರಮ್ಯಾಕೃಷ್ಣ ಬಿಟ್ರೆ, ಉಳಿದಂತೆ ಪ್ರವೀಣ್​ ತೇಜ್​, ಪಾಯಲ್​, ರವಿಕಾಳೆ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಫಸ್ಟ್ ಕಾಪಿ ರೆಡಿಯಾಗಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.
ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೋ, ಟಿವಿ5

Recommended For You

About the Author: TV5 Kannada

Leave a Reply

Your email address will not be published. Required fields are marked *