ಇದು ಕನ್ನಡ ಸಿನಿಪ್ರೇಮಿಗಳು ಎಚ್ಚೆತ್ತುಕೊಳ್ಳಬೇಕಾದ ಸಮಯ..!

ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್​ ದಿನದಿಂದ ದಿನಕ್ಕೆ ಕೆಟ್ಟ ಸ್ವರೂಪ ಪಡೀತಿದೆ. ಸದ್ಯ ಪ್ಯಾನ್​ ಇಂಡಿಯಾ ಸಿನಿಮಾಗಳ ಮೂಲಕ ಸ್ಯಾಂಡಲ್​​ವುಡ್​​​ ಶೈನ್​ ಆಗ್ತಿದೆ ಅಂತ ಖುಷಿ ಪಡ್ಬೇಕಾ ಇಲ್ಲ, ಕೆಲವರ ಹುಚ್ಚಾಟಕ್ಕೆ ಕನ್ನಡ ಚಿತ್ರಗಳು ಬಲಿಯಾಗ್ತಿವೆ ಅಂತ ಬೇಸರ ಪಡ್ಬೇಕಾ ಗೊತ್ತಾಗ್ತಿಲ್ಲ. ಪೈಲ್ವಾನ್​ ಪೈರಸಿ ವಿಚಾರ ಬೇರೆ ಅರ್ಥ ಪಡ್ಕೊಂಡು ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇಬ್ರು ಸೂಪರ್​ ಸ್ಟಾರ್​ಗಳ ಫ್ಯಾನ್ಸ್​​​​​ ನಡುವೆ ಕಿಚ್ಚು ಹಚ್ಚಿದೆ. ಇದು ನಿಜಕ್ಕೂ ಸಿನಿಪೇಮಿಗಳು ಎಚ್ಚೆತ್ತುಕೊಳ್ಳಬೇಕಾದ ಸಮಯ.

ಪೈಲ್ವಾನ್​.. ಪೈಲ್ವಾನ್​.. ಪೈಲ್ವಾನ್..​ ಸದ್ಯ ಕನ್ನಡ ಚಿತ್ರರಂಗದಲ್ಲಿ ಕಿಚ್ಚನದ್ದೇ ದರ್ಬಾರ್. ಗಾಂಧಿನಗರದ ಸಂತೋಷ್​ ಥಿಯೇಟರ್​ನಿಂದ ಅಮೇರಿಕಾ, ಯೂರೋಪ್​, ಆಸ್ಟ್ರೇಲಿಯಾದ ಮೂಲೆ ಮೂಲೆಯಲ್ಲಿರೋ ಥಿಯೇಟರ್​ಗಳಲ್ಲಿ ಪೈಲ್ವಾನ್​ ಸಿನಿಮಾ ಧೂಳೆಬ್ಬಿಸಿದೆ. ಬಾಕ್ಸಾಫೀಸ್​​ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದು, ದಾಖಲೆ ಬರೀತಿದೆ. ಒಳ್ಳೆ ಸಿನಿಮಾ ಕೊಟ್ರೆ, ಜನ ಕೈ ಬಿಡೋದಿಲ್ಲ ಅನ್ನೋದನ್ನ ಪೈಲ್ವಾನ್ ಸಿನಿಮಾ ಒನ್ಸ್ ಅಗೇನ್​ ಪ್ರೂವ್​ ಮಾಡಿದೆ. ಕನ್ನಡ ಮಾತ್ರವಲ್ಲ, ಪರಭಾಷೆಗಳಲ್ಲೂ ಚಿತ್ರ ರಿಲೀಸ್​ ಆಗಿ ಸಖತ್​​ ರೆಸ್ಪಾನ್ಸ್​ ಗಿಟ್ಟಿಸಿಕೊಳ್ತಿದೆ.

ಲೀಕಾಸುರರ ಹುಚ್ಚಾಟಕ್ಕೆ ಸೋರಿ ಹೋಯ್ತು ಪೈಲ್ವಾನ್​ ಚಿತ್ರ..!
ಪೈರಸಿಗೆ ಜಗ್ಗಲಿಲ್ಲ ಪೈಲ್ವಾನ್​.. ಬಾಕ್ಸಾಫೀಸ್​​ನಲ್ಲಿ ಕಿಚ್ಚನ ಅಬ್ಬರ
ಕೋಟಿ ಕೋಟಿ ಕೊಳ್ಳೆ ಹೊಡೆದು ದಾಖಲೆ ಬರೆದ ಬಾದ್​ ಶಾ
ಕನ್ನಡ ಚಿತ್ರರಂಗದಲ್ಲೀಗ ಪೈಲ್ವಾನ್​​ ಕಿಚ್ಚನದ್ದೇ ಅಬ್ಬರ, ಆರ್ಭಟ. ದಿನದಿಂದ ದಿನಕ್ಕೆ ಪೈಲ್ವಾನ್​ ಅಬ್ಬರ ಜೋರಾಗ್ತಿದ್ದು, ಅಭಿಮಾನಿಗಳು ಕುಣಿದು ಕುಪ್ಪಳಿಸ್ತಿದ್ದಾರೆ. ಆದ್ರೆ, ರಿಲೀಸ್​ ದಿನವೇ ಪೈರಸಿ ಭೂತ ಪೈಲ್ವಾನ್​​ನ ಅಲ್ಲಾಡಿಸಿಬಿಡ್ತು. ಕಿಡಿಗೇಡಿಗಳು ಇಡೀ ಸಿನಿಮಾವನ್ನ ಆನ್​ಲೈನ್​ನಲ್ಲಿ ಲೀಕ್​ ಮಾಡಿಬಿಟ್ರು. ಕಟ್ಟುಮಸ್ತಾದ ಪೈಲ್ವಾನ್​ ಇದಕ್ಕೆಲ್ಲಾ ಜಗ್ಗಲೇಯಿಲ್ಲ. ಸಹೃದಯ ಕನ್ನಡ ಪ್ರೇಕ್ಷಕರು ಪೈರಸಿ ಬಿಟ್ಟು, ಥಿಯೇಟರ್​ಗೆ ದಾಂಗುಡಿ ಇಡುತ್ತಿದ್ದಾರೆ. ದೊಡ್ಡ ಪರದೆಯಲ್ಲೇ ಪೈಲ್ವಾನ್​ ಪಟ್ಟುಗಳನ್ನ ನೋಡಿ ಎಂಜಾಯ್​ ಮಾಡ್ತಿದ್ದಾರೆ.

ಪೈಲ್ವಾನ್​ ಸಿನಿಮಾ ಪೈರಸಿಯಾಗಿರೋದು ಬರೀ ಚಿತ್ರತಂಡಕ್ಕೆ ಮಾತ್ರವಲ್ಲ, ಸುದೀಪ್​ ಅಭಿಮಾನಿಗಳಿಗೂ ಬೇಸರ ತಂದಿದೆ. ಒಂದೊಳ್ಳೆ ಸಿನಿಮಾ ಹೀಗೆ ಲೀಕಾಸುರರ ಉಪಟಳಕ್ಕೆ ಬಲಿಯಾಗ್ತಿರೋದು ನಿಜಕ್ಕೂ ನೋವಿನ ಸಂಗತಿ. ಕೋಟಿ ಕೋಟಿ ಬಂಡವಾಳ ಹಾಕಿ, ನೂರಾರು ಕಾರ್ಮಿಕರು, ಹತ್ತಾರು ತಂತ್ರಜ್ಞರು, ಕಲಾವಿದರು ಹಗಳಿರುಳು ಕಷ್ಟಪಟ್ಟು ಮಾಡಿದ ಚಿತ್ರವನ್ನ, ಹೀಗೆ ಲೀಕ್​ ಮಾಡಿ ಕೆಲವರು ವಿಕೃತಿ ಮೆರೆಯುತ್ತಿದ್ದಾರೆ. ಆದ್ರೆ, ಈ ಪೈರಸಿ ವಿಚಾರವೇ ಈಗ ಸ್ಯಾಂಡಲ್​ವುಡ್​ ಫ್ಯಾನ್ಸ್​ ವಾರ್​ ಅನ್ನೋ ಬೆಂಕಿಗೆ ತುಪ್ಪ ಸುರಿದಿದೆ.

ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಡಿ ಹಾರ್ಟ್ಸ್​​​​ನ ಕೆಣಕೋದು ಸರಿನಾ..?!
ಅಭಿಮಾನಿಗಳ ಮಧ್ಯೆ ತಂದಿಟ್ಟು ತಮಾಷೆ ನೋಡ್ತಿರೋದ್ಯಾರು..?
ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್​ ವಾರ್​ ಅನ್ನೋದು ಇಂದು ನೆನ್ನೆಯದಲ್ಲ. ಆದ್ರೆ, ಸೋಷಿಯಲ್​ ಮೀಡಿಯಾ ಬಂದ್ಮೇಲೆ ಅದು ಮತ್ತಷ್ಟು ಅತಿರೇಕಕ್ಕೆ ಹೋಗ್ತಿದೆ. ತಮ್ಮ ನೆಚ್ಚಿನ ನಟನ ಸಿನಿಮಾವನ್ನ ಮೆಚ್ಚಿ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುವ ಕೆಲವರು ಮತ್ತೊಬ್ಬ ನಟನ ಸಿನಿಮಾವನ್ನ ತೆಗಳುವ ಮಟ್ಟಕ್ಕೆ ಇಳಿತ್ತಿದ್ಧಾರೆ. ಅದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪಾಸಿಟೀವ್​ ಪಬ್ಲಿಸಿಟಿ ಅನ್ನೋದ್ರ ಜೊತೆಗೆ ನೆಗೆಟೀವ್​ ಪಬ್ಲಿಸಿಟಿ ಅನ್ನೋ ಕೆಟ್ಟ ಚಾಳಿ ಶುರುವಾಗಿದೆ. ಸದ್ಯ ಪೈಲ್ವಾನ್​ ಚಿತ್ರಕ್ಕೂ ಇದೇ ಈಗ ಮಾರಕವಾಗಿದೆ. ಅದು ಬೇರೆ ಬೇರೆ ಸ್ವರೂಪ ಪಡ್ಕೊಂಡು ದರ್ಶನ್​ ಮತ್ತು ಸುದೀಪ್​ ಅಭಿಮಾನಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ಪೈಲ್ವಾನ್​ ಚಿತ್ರ ರಿಲೀಸ್​ ದಿನವೇ ಕೆಲ ಕಿಡಿಗೇಡಿಗಳು ಸೋಷಿಯಲ್​ ಮೀಡಿಯಾದಲ್ಲಿ ನೆಗೆಟೀವ್​ ಪಬ್ಲಿಸಿಟಿ ಶುರು ಮಾಡಿದ್ರು. ಇದನ್ನೆಲ್ಲಾ ದರ್ಶನ್​ ಅಭಿಮಾನಿಗಳು ಮಾಡ್ತಿದ್ಧಾರೆ ಅಂತ ಸುದೀಪ್​ ಅಭಿಮಾನಿಗಳು​ ವಾದಿಸೋಕ್ಕೆ ಶುರು ಮಾಡಿದ್ರು. ಸದ್ಯ ಸುದೀಪ್​​ ಮತ್ತು ದರ್ಶನ್​ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಜಗಜಾಹೀರಾಗಿದೆ. ಹಾಗಾಗಿ ಈ ಕೆಸರೆರಚಾಟ ಮತ್ತಷ್ಟು ರಂಗುಪಡೆದುಕೊಂಡಿದೆ. ಪೈಲ್ವಾನ್ ಸಿನಿಮಾ ಪೈರಸಿ ಆಗೋದಕ್ಕೂ ದರ್ಶನ್​ ಫ್ಯಾನ್ಸ್​ ಕಾರಣ ಅನ್ನೋ ಮಟ್ಟಿಗೆ ಈ ಆರೋಪ- ಪ್ರತ್ಯಾರೋಪ ಹೋಯ್ತು.

ಕುರುಕ್ಷೇತ್ರಕ್ಕೂ ಎದುರಾಗಿತ್ತು ಪೈರಸಿ, ನೆಗೆಟೀವ್​ ಪಬ್ಲಿಸಿಟಿ ಕಾಟ
ಎಲ್ಲಾ ಅಡೆತಡೆ ಮೀರಿ ಬಾಕ್ಸಾಫೀಸ್​​ನಲ್ಲಿ ದುರ್ಯೋಧನನ ಅಬ್ಬರ
ಕೆಲದಿನಗಳ ಹಿಂದೆ ರಿಲೀಸ್​​ ಆದ ಕುರುಕ್ಷೇತ್ರ ಚಿತ್ರ ಪೈರಸಿ ಮತ್ತು ನೆಗೆಟೀವ್​ ಪಬ್ಲಿಸಿಟಿ ಎದುರಿಸಬೇಕಾಯ್ತು. ನಿಜಕ್ಕೂ ನಿಜವಾದ ಅಭಿಮಾನಿಗಳು ಹೀಗೆ ಮತ್ತೊಂದು ಸಿನಿಮಾ ಸೋಲಿಗೆ ಹವಣಿಸೋದಿಲ್ಲ. ದರ್ಶನ್​ ಅಭಿಮಾನಿಗಳು ಕೂಡ ಇದೇ ಮಾತನ್ನ ಹೇಳ್ತಿದ್ದಾರೆ. ನಾವು ಪೈಲ್ವಾನ್​ ಸಿನಿಮಾ ಬಗ್ಗೆ ನೆಗೆಟೀವ್​​ ಪಬ್ಲಿಸಿಟಿ ಮಾಡ್ತಿಲ್ಲ, ಹಾಗ್​ ನೋಡಿದ್ರೆ, ಕುರುಕ್ಷೇತ್ರ ಚಿತ್ರಕ್ಕೂ ಇದೇ ಸಮಸ್ಯೆ ಎದುರಾಗಿತ್ತು. ಆಗ ಯಾರು ಇದ್ರ ಬಗ್ಗೆ ಮಾತನಾಡಲಿಲ್ಲ. ಹಾಗಾದ್ರೆ, ಅದಕ್ಕೆ ಕಾರಣ ಸುದೀಪ್​ ಅಭಿಮಾನಿಗಳಾ ಅಂತ ಪ್ರಶ್ನಿಸ್ತಿದ್ದಾರೆ.

ಪ್ಯಾನ್​ ಇಂಡಿಯಾ ಸಿನಿಮಾಗಳಿಗೆ ಪೈರಸಿ ಕಾಟ ತಪ್ಪಿದ್ದಲ್ಲ..!
ಇದು ಕನ್ನಡ ಸಿನಿಪ್ರೇಮಿಗಳು ಎಚ್ಚೆತ್ತುಕೊಳ್ಳಬೇಕಾದ ಸಮಯ..!
ಇಷ್ಟು ದಿನ ಕನ್ನಡ ಸಿನಿಮಾಗಳು ಕರ್ನಾಟಕದಲ್ಲಿ ಮಾತ್ರ ರಿಲೀಸ್ ಆಗ್ತಿತ್ತು. ಆದ್ರೆ, ಈಗ ನಾಲ್ಕೈದು ಭಾಷೆಗಳಲ್ಲಿ ತೆರೆಗಪ್ಪಳಿಸ್ತಿದೆ. ಪರಭಾಷೆಯ ಸಿನಿಮಾಗಳು ಎದುರಿಸುತ್ತಿರುವ ಪೈರಸಿಯನ್ನ ಕನ್ನಡ ಸಿನಿಮಾಗಳು ಎದುರಿಸುವಂತಾಗಿದೆ. ತಮಿಳ್​ ರಾಕರ್ಸ್​ ಅನ್ನೋ ವೆಬ್​ಸೈಟ್​​​ನ​ ಕಿಡಿಗೇಡಿಗಳು ಎಲ್ಲಾ ಭಾಷೆಯ ಸಿನಿಮಾಗಳನ್ನ ಲೀಕ್​ ಮಾಡ್ತಿದ್ದಾರೆ. ಆದ್ರೆ, ಪೈಲ್ವಾನ್​ ಪೈರಸಿಯನ್ನ ದರ್ಶನ್​ ಅಭಿಮಾನಿಗಳ ಮೇಲೆ ಹೊರಿಸೋದು ತಪ್ಪು. ಫ್ಯಾನ್ಸ್​​​​​ ಹೆಸರಿನಲ್ಲಿ ಕೆಲವರು ಹುಚ್ಚಾಟ ಮೆರಿತ್ತಿದ್ದು, ಅದು ಹೀಗೆ ಅಭಿಮಾನಿಗಳ ನಡುವಿನ ಸಂಘರ್ಷಕ್ಕೆ ಕಿಚ್ಚು ಹಚ್ಚಿದೆ.

ಕಿಚ್ಚ ಸುದೀಪ್​ ಕೂಡ ವೀಡಿಯೋ ಸಂದೇಶ ಮತ್ತು ಟ್ವೀಟ್​ಗಳ ಮೂಲಕ ಪೈಲ್ವಾನ್​​ ಗೆಲುವಿಗೆ ಸಂತಸ ವ್ಯಕ್ತಪಡಿಸ್ತಿದ್ದಾರೆ. ಬೆಳೆಯುವವರನ್ನ ಕಂಡ್ರೆ, ಕಾಲೆಳೆಯೋರು ಇರ್ತಾರೆ ಬಿಡಿ ಅಂತ ಹೇಳ್ತಾ ಬರ್ತಿದ್ದಾರೆ. ಇತ್ತ ಚಿತ್ರತಂಡ ಕೂಡ ಪೈಲ್ವಾನ್ ಸಿನಿಮಾ ಪೈರಸಿಗೆ ಕಾರಣರಾದ ಕಿಡಿಗೇಡಿಗಳ ಹುಟ್ಟಡಗಿಸೋಕ್ಕೆ ಸೈಬರ್​ ಕ್ರೈಮ್​ ಠಾಣೆ ಮೆಟ್ಟಿಮೇರಿದೆ.

ಜನರು ಕೂಡ ಸೋಷಿಯಲ್​ ಮೀಡಿಯಾವನ್ನ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ನಿಮ್ಮ ಒಂದು ಪೋಸ್ಟ್​​ ನಾನಾ ಸ್ವರೂಪ ಪಡೆದುಕೊಳ್ಳೋ ಸಾಧ್ಯತೆಯಿರುತ್ತೆ. ಜವಾಬ್ದಾರಿಯುತವಾಗಿ ಜಾಲತಾಣಗಳನ್ನ ಉಪಯೋಗಿಸಬೇಕು. ಎಲ್ಲರೂ ನಮ್ಮ ಕಲಾವಿದರೇ. ಎಲ್ಲರೂ ಕನ್ನಡ ಸಿನಿಮಾಗಳನ್ನ ನೋಡಿ ಹರಸಬೇಕು. ಕೊನೆ ಪಕ್ಷ ಮತ್ತೊಬ್ಬರ ಕಾಲೆಳೇಯೋದನ್ನಾದ್ರು ನಿಲ್ಲಸಬೇಕು.
ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೋ, ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *