ಜೊಮ್ಯಾಟೋ ವಿರುದ್ಧ ನೌಕರರಿಂದಲೇ ಪ್ರತಿಭಟನೆ..!

ಬೆಂಗಳೂರು: ಸೂಕ್ತ ವೇತನ ಮತ್ತು ಭತ್ಯೆ ನೀಡುತ್ತಿಲ್ಲ ಎಂದು ಜೊಮ್ಯಾಟೋ ನೌಕರರು, ಜೊಮ್ಯಾಟೋ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಪ್ರಾರಂಭದಲ್ಲಿ ಜೊಮ್ಯಾಟೋ ಸಂಸ್ಥೆ ಸೂಕ್ತ ಸಂಬಳ ಮತ್ತು ಭತ್ಯೆ ನೀಡುತ್ತಿತ್ತು. ಆದ್ರೆ ವರ್ಷಗಳು ಕಳೆದಂತೆ, ಬ್ಯುಸಿನೆಸ್ ಹೆಚ್ಚಾಗಿ ಇದೀಗ ಚೆನ್ನಾಗಿ ಕೆಲಸ ಮಾಡಿಸಿಕೊಂಡು ಸಂಬಳ ನೀಡಲು ಸತಾಯಿಸುತ್ತಿದೆ ಎಂದು ನೌಕರರು ಆರೋಪ ಮಾಡಿದ್ದಾರೆ.

ಇದೀಗ ಬ್ಯುಸಿನೆಸ್ ಹೆಚ್ಚಾಗಿದ್ದು, ಹೆಚ್ಚು ಕೆಲಸ ಮಾಡಿಕೊಂಡು, ಕಡಿಮೆ ಸಂಬಳ ಕೊಡುತ್ತಿದೆ ಎನ್ನಲಾಗಿದೆ. ಈ ಕಾರಣಕ್ಕೆ ಜೊಮ್ಯಾಟೋ ನೌಕರರು ಹೆಚ್ ಎಸ್ ಆರ್ ಲೇಔಟ್‌ನಲ್ಲಿರುವ ಮುಖ್ಯ ಕಚೇರಿ ಬಳಿ ಸಂಸ್ಥೆಯ ನಡೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಮೂರು ದಿನಗಳಿಂದ ಕೋರಮಂಗಲ, ಹೆಚ್.ಎಸ್ ಆರ್ ಸುತ್ತಮುತ್ತಲ ಸಾವಿರಾರು ನೌಕರರು ಪ್ರತಿಭಟನೆ ನಡೆಸಿದ್ದರೂ ಕೂಡ, ಜೊಮ್ಯಾಟೋ ಸಂಸ್ಥೆ ಮಾತ್ರ ಕ್ಯಾರೆ ಅಂತಿಲ್ಲ ಅನ್ನೋದು ನೌಕರರ ಅಳಲು. ಸ್ಥಳಕ್ಕೆ ಆಗಮಿಸಿ ಹೆಚ್.ಎಸ್.ಆರ್ ಲೋಔಟ್ ಪೊಲೀಸರು ಸಂಧಾನ ನಡೆಸಲು ಮುಂದಾಗಿದ್ದು, ಸಮಸ್ಯೆ ನಿವಾರಣೆಯಾಗತ್ತಾ ಕಾದು ನೋಡಬೇಕಿದೆ.

Recommended For You

About the Author: Shravani Bhat

Leave a Reply

Your email address will not be published. Required fields are marked *