ಮಾನವೀಯತೆಯನ್ನೇ ಮಾರಿಕೊಂಡುಬಿಟ್ರಾ ಕಿಮ್ಸ್ ವೈದ್ಯರು..?!

ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆ ತನ್ನ ಎಡವಟ್ಟಿನಿಂದಲೇ ಪದೇ ಪದೇ ಸುದ್ದಿಯಾಗುತ್ತದೆ. ಈ ಬಾರಿಯೂ ಕೂಡ ದೊಡ್ಡ ಎಡವಟ್ಟು ಮಾಡುವ ಮೂಲಕ ಕಿಮ್ಸ್ ಸುದ್ದಿಗೆ ಬಂದಿದೆ.

ಮೂರ್ಛೆರೋಗ ಬಂದ ರೋಗಿಯೊಬ್ಬ ಆಸ್ಪತ್ರೆಯಲ್ಲೇ ಮೂರ್ಛೆರೋಗ ಬಂದು ಒದ್ದಾಡುತ್ತಿದ್ದರೂ ಕೂಡ ವೈದ್ಯರು ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ. ಡಾಕ್ಟರ್‌ ಎದುರೇ ಮೂರ್ಛೆರೋಗ ಬಂದು ರೋಗಿ ಬೆಡ್ ಮೇಲಿಂದ ಬಿದ್ದು ನರಳಾಡಿದರೂ ಕೂಡ ವೈದ್ಯರು ಕ್ಯಾರೇ ಎನ್ನದೇ ನಿಷ್ಕರುಣೆ ತೋರಿರುವುದು ವಿಪರ್ಯಾಸದ ಸಂಗತಿ.

ಕಿಮ್ಸ್‌ನ್ನ ಬಡವರ ಪಾಲಿನ ಸಂಜೀವಿನಿ ಎನ್ನಲಾಗುತ್ತದೆ. ಆದ್ರೆ ಇಲ್ಲಿನ ವೈದ್ಯರಲ್ಲಿ, ಕೆಲ ಸಿಬ್ಬಂದಿಗಳು ಮಾನವೀಯತೆಯೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಪದೇ ಪದೇ ಚಿಕಿತ್ಸೆಗೆ ಬಂದ ಪೇಷೆಂಟ್‌ಗಳ ಬಗ್ಗೆ ನಿರ್ಲಕ್ಷ್ಯ ತೋರುವುದು ಸಾಮಾನ್ಯವಾಗಿಬಿಟ್ಟಿದೆ. ಇವರ ಬೇವಜವಾಬ್ದಾರಿತನ ನೋಡಿದ್ರೆ ಕಿಮ್ಸ್ ವೈದ್ಯರು ಮಾನವೀಯತೆಯನ್ನ ಮಾರಿಕೊಂಡು ಬಿಟ್ರಾ ಎಂಬ ಪ್ರಶ್ನೆ ಉದ್ಭವಿಸಿದೆ.

Recommended For You

About the Author: Dayakar

Leave a Reply

Your email address will not be published. Required fields are marked *