ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ: ದೇವೇಗೌಡರ ಬೀಗರ ಮನೆಗೆ ಬಂದಿದ್ಯಾಕೆ ಸಿದ್ದರಾಮಯ್ಯ..?!

ಮೈಸೂರು: ಮೈಸೂರು ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ ಉಂಟಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರ ಬೀಗರಾದ ಪ್ರೋ.ಕೆ.ಎಸ್.ರಂಗಪ್ಪರ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಮೈಸೂರಿನ ಬೋಗಾದಿಯಲ್ಲಿರುವ ಪ್ರೋ.ರಂಗಪ್ಪ ನಿವಾಸಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಬೆಳಗ್ಗಿನ ಉಪಹಾರ ಸೇವಿಸಿದರು.

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ ರಂಗಪ್ಪ, ಸಿದ್ದರಾಮಯ್ಯ ನಮ್ಮ ಮನೆಗೆ ಬಂದಿದ್ದು ಸೌಜನ್ಯದ ಭೇಟಿ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಸಿದ್ದರಾಮಯ್ಯರಂಥ ಒಳ್ಳೆಯವರು ಮತ್ತೆ ಸಿಎಂ ಆಗಬೇಕು. ಯಾರೇ ಒಳ್ಳೆ ಕೆಲಸ ಮಾಡಿದ್ರು ನಾನು ಅವರನ್ನು ಬೆಂಬಲಿಸುತ್ತೇನೆ. ನಾನು ಈಗ ರಾಜಕೀಯವಾಗಿ ಸಕ್ರಿಯವಾಗಿಲ್ಲ. ಚುನಾವಣೆಯಲ್ಲಿ ಸೋತ ನಂತರ ಜೆಡಿಎಸ್‌ನನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ನಾನು ಈಗ ಮುಕ್ತವಾಗಿದ್ದೇನೆ. ಯಾರು ನನ್ನ ಗೌರವದಿಂದ ನನ್ನ ಅನುಭವ ಬಳಸಿಕೊಳ್ಳುತ್ತಾರೋ, ನಾನು ಅವರ ಪರವಾಗಿ ಇರುತ್ತೇನೆ. ನಾನು ರಾಜಕೀಯಕ್ಕಿಂತ ಸಂಶೋಧನೆಗೆ ಹೆಚ್ಚಿನ ಆದ್ಯತೆ ಕೊಡ್ತೀನಿ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತು ಮುಂದುವರೆಸಿದ ರಂಗಪ್ಪ, ನನ್ನ ಶಿಷ್ಯನ ಪುಸ್ತಕ ಬಿಡುಗಡೆಗೆ ಸಿದ್ದರಾಮಯ್ಯನವ್ರು ಆಗಮಿಸಿದ್ರು. ಅಲ್ಲಿ ನಾನು ಸಿದ್ದರಾಮಯ್ಯನವ್ರು ಸೌಜನ್ಯದ ಮಾತುಕತೆ ನಡೆಸಿದ್ವಿ. ನಾಳೆ ನಮ್ಮ ಮನೆಗೆ ಉಪಹಾರಕ್ಕೆ ಬನ್ನಿ ಎಂದು ಕರೆದೆ. ಅವರು ಸೌಜನ್ಯದಿಂದ ಇವತ್ತು ಉಪಹಾರಕ್ಕೆ ಬಂದಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಸದ್ಯ ನನ್ನ ಸಂಶೋಧನಾ ಅಧ್ಯಯನ ನಡೆಯುತ್ತಿದೆ. ನನಗೆ ಯಾರೇ ಸಲಹೆ ಕೇಳಿದ್ರು ನಾನು ಸಲಹೆ ಕೊಡಲು ಸಿದ್ದ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಂದು ಯಾವುದೇ ಬೇಧ ಇಲ್ಲ. ನಾನು ಈಗ ಮುಕ್ತವಾಗಿದ್ದೇನೆ, ಯಾರಿಗಾದರು ಸಲಹೆ ಕೊಡ್ತೇನೆ ಎಂದಿದ್ದಾರೆ.

ಚುನಾವಣೆ ಬಳಿಕ ರಂಗಪ್ಪನವರನ್ನ ಕಡೆಗಣಿಸಿದ ವಿಚಾರದ ಬಗ್ಗೆ ಮಾತನಾಡಿದ ರಂಗಪ್ಪ, ನನಗಿನಂತ ಒಳ್ಳೆಯವರು ಸಿಕ್ಕಿದಾಗ ಜೆಡಿಎಸ್ ಮುಖಂಡರು ನನ್ನ ಮರೆತರು. ಸದ್ಯ ನನಗೆ ರಾಜಕೀಯಕ್ಕಿಂತ ಸಂಶೋಧನೆಯಲ್ಲಿ ಹೆಚ್ಚು ಆಸಕ್ತಿ ಇದೆ. ನಾನು ಈ ಹಿಂದಿನ ರಾಜಕೀಯದ ಬಗ್ಗೆ ಮಾತಡೋದಿಲ್ಲ ಎಂದು ಹೇಳಿದರು.

Recommended For You

About the Author: Dayakar

Leave a Reply

Your email address will not be published. Required fields are marked *