‘ನೆರೆ ಸಂತ್ರಸ್ತರ ಕಷ್ಟಕ್ಕೆ ಬಾರದ ಸರ್ಕಾರ ಇದ್ದರೆಷ್ಟು ಹೋದರೆಷ್ಟು’

ಮೈಸೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬೀಗರಾದ ರಂಗಪ್ಪ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಂದಿದ್ದು, ಈ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನಾನು ರಂಗಪ್ಪ ಸ್ನೇಹಿತರು, ತಿಂಡಿಗೆ ಕರೆದಿದ್ದರು ಬಂದಿದ್ದೆ. ಇಷ್ಟು ಬಿಟ್ಟು ಬೇರೆ ಇನ್ಯಾವ ರಾಜಕೀಯವೂ ಇದರಲ್ಲಿ ಇಲ್ಲ ಎಂದಿದ್ದಾರೆ.

ಇನ್ನು ಕನ್ನಡದಲ್ಲಿ ಪರೀಕ್ಷೆ ಬರೆಯೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಯಾವುದೇ ಪರೀಕ್ಷೆ ಆದರೂ ಕನ್ನಡದಲ್ಲಿ ಇರಲಿ. ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ಅದು ಕನ್ನಡಿಗರಿಗೆ ಅನ್ಯಾಯ ಮಾಡಿದಂತೆ ಎಂದು ಹೇಳಿದ್ದಾರೆ.

ಅಲ್ಲದೇ, ಕನ್ನಡದಲ್ಲೇ ಮಾತನಾಡಬೇಕು ಕನ್ನಡಪರ ಸಂಘಟನೆಗಳು ಧ್ವನಿ ಎತ್ತಬೇಕು. ಅಮಿತ್ ಶಾಗೆ ಬುದ್ದಿ ಕಡಿಮೆ, ಹಿಂದಿ ರಾಷ್ಟ್ರ ಭಾಷೆ ಅಲ್ಲ. ದೇಶದ ಎಲ್ಲಾ ಭಾಷೆಗಳಂತೆ ಹಿಂದಿ ಸಹ ಒಂದು ಭಾಷೆ. ಹಿಂದಿ ಸಾರ್ವಭೌಮ ಭಾಷೆ ಅಲ್ಲ. ಬಲತ್ಕಾರವಾಗಿ ಯಾವ ಭಾಷೆಯನ್ನು ಹೇರಬಾರದು. ಯಾವ ಭಾಷೆ ಕಲಿಯಲು ನಮ್ಮ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ನೀಡುವ ವಿಚಾರ ಕುರಿತಂತೆ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಅವರೇನು ಧರ್ಮಕ್ಕೆ ಕೊಡುತ್ತಾರಾ.? ಅದೇನು ಸಿಹಿ ಕೊಡೋದು ಅದು ಅವರ ಕರ್ತವ್ಯ. 45 ದಿನದಿಂದ ಕೊಟ್ಟಿಲ್ಲದೇ ಇರುವುದನ್ನು ನಾವೇನು ಹೇಳಬೇಕು ಎಂದಿದ್ದಾರೆ.

ಇನ್ನು ಕೇಂದ್ರ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ನೆರೆ ಸಂತ್ರಸ್ತರ ಕಷ್ಟಕ್ಕೆ ಬಾರದ ಇಂತಹ ಕೇಂದ್ರ ಸರಕಾರ, ಇದ್ದರೆಷ್ಟು ಹೋದರೆಷ್ಟು ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *