ಪಬ್ ಜಿ‌‌ ಆಯ್ತು, ಈಗ ಟಿಕ್‌–ಟಾಕ್ ಹುಚ್ಚು ಯುವತಿ ಬಲಿ..!

 ಬೆಂಗಳೂರು: ಪಬ್ ಜಿ‌‌ ಆಯ್ತು ಈಗ ಟಿಕ್ ಟಾಕ್ ಹುಚ್ಚು ಬದುಕಿ ಬಾಳಬೇಕಾದ ಬಾಲಕಿಯೋರ್ಬಳನ್ನು ಬಲಿ ಪಡೆದ್ದು ಪೋಷಕರನ್ನು ದುಖಃಕ್ಕೆ ದೂಡಿದೆ.

ಬೆಂಗಳೂರಿನ ಹನುಮಂತ ನಗರದಲ್ಲಿ ತಾಯಿ‌ ಮೊಬೈಲ್ ಕೊಡ್ಲಿಲ್ಲ ಅನ್ನೋ ಕಾಣಕ್ಕೆ‌ 16 ವರ್ಷದ ಬಾಲಕಿ ಪ್ರಿಯಾಂಕ ನೇಣು‌ಬಿಗಿದುಕೊಂಡಿದ್ದು,ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

10 ತರಗತಿ‌ ಓದ್ತಾ ಇದ್ದ ಪ್ರಿಯಾಂಕ ಟಿಕ್ ಟಾಕ್ ನೋಡೋ‌‌ ಗೀಳಿಗೆ ಬಿದ್ದಿದ್ಳು. ಸ್ಕೂಲ್‌‌ನಿಂದ ಬಂದ ತಕ್ಷಣ‌ ಮೊಬೈಲ್ ತೆಗೆದುಕೊಳ್ಳೋಕೆ ಅಂತಾ ಪ್ರಿಯಾಂಕ ಬಂದಿದ್ದಾಳೆ, ಆಗ ಯಾವಾಗ್ಲೂ ಮೊಬೈಲ್ ನೋಡೋದೆ ಕೆಲ್ಸನಾ ಹೋಗಿ ಓದ್ಕೊ ಅಂತಾ ಪ್ರಿಯಾಂಕ ತಾಯಿ ಬುದ್ಧಿ ಮಾತು ಹೇಳಿದ್ದಾಳೆ.

ಆದರೂ ಹಠ ಹಿಡಿದ ಪ್ರಿಯಾಂಕ ತಾಯಿಯೊಂದಿಗೆ ಜಗಳಕ್ಕೆ‌ ಇಳಿದ್ದಾಳೆ. ನಂತರ ಪ್ರಿಯಾಂಕ‌ ತಾಯಿ‌ ಮೊಬೈಲ್ ಕೊಡದೆ ದೇವಸ್ಥಾನಕ್ಕೆ ಹೋಗಿದ್ದು.ಈ ವೇಳೆ‌ ತನ್ನ ರೂಂ‌ನಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಘಟನಾ‌ ಸ್ಥಳಕ್ಕೆ ಹನುಂತನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಪ್ರಿಯಾಂಕ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಒಟ್ನಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ನೋ‌ ಹುಚ್ಚು ಬಾಳಿ ಬದುಕಬೇಕಾದ ಮಕ್ಕಳ ಜೀವನವನ್ನೇ ಬಲಿಪಡೆಯುವಂತಾಗ್ತಿರೋದು ನಿಜಕ್ಕೂ ದುರಂತ.

Recommended For You

About the Author: Dayakar

Leave a Reply

Your email address will not be published. Required fields are marked *