ಖಾಸಗಿ ಶಾಲೆಗಳಿಗೆ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಫೈನಲ್​​ ವಾರ್ನಿಂಗ್​

ಬೆಂಗಳೂರು: ಸರ್ಕಾರದ ಬಾಯಿ ಮಾತಿನ ಅದೇಶದಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಇಲ್ಲ ಎಂದು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್​ ರಾವ್ ಅವರು ಶನಿವಾರ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆ ಟ್ರಾಫಿಕ್ ಉಲ್ಲಂಘನೆ ದಂಡ ವಸೂಲಿ ಕಡಿಮೆ ಮಾಡ್ತಿವಿ ಎಂದು ಹೇಳಿದ್ದ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಮಾತಿಗೆ ಕಮೀಷನರ್​ ಪ್ರತಿಕ್ರಿಯಿಸಿದ್ದು, ಇದುವರೆಗೆ ಸಾರಿಗೆ ಇಲಾಖೆ ಇಂದ ಯಾವುದೇ ಆದೇಶ ಬಂದಿಲ್ಲ, ಸೆಪ್ಟೆಂಬರ್ ಮೂರರಂದು ಹೊಸ ವಸೂಲಿ ನೀತಿ ಅಧಿಸೂಚನೆ ಬಂದಿದೆ ಎಂದು ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಅನ್ವಯವಾಗಿ ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡುತ್ತಿದ್ದು, ನಂತರ ಯಾವುದೇ ಹೊಸ ಅಧಿಸೂಚನೆ ಬಂದಿಲ್ಲ, ಒಂದು ವೇಳೆ ಸರ್ಕಾರದ ಅಧಿಸೂಚನೆ ಹೊರಡಿಸಿದರೆ ಅದನ್ನು ಪಾಲಿಸುತ್ತೇವೆ. ಸದ್ಯ ಸಾರ್ವಜನಿಕರ ಜೊತೆ ಸಹಾನುಭೂತಿಯಿಂದ ವರ್ತಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಅವರು ಹೇಳಿದರು.

ಇದೇ ವೇಳೆ ಖಾಸಗಿ ಸ್ಕೂಲ್​ಗಳಿಗೆ ವಾರ್ನಿಂಗ್ ಭಾಸ್ಕರ್ ರಾವ್ ಅವರು, ರಸ್ತೆಯಲ್ಲಿ ಸ್ಕೂಲ್ ಬಸ್ ಪಾರ್ಕಿಂಗ್ ಮಾಡಿದ್ದ ಶಾಲೆಗಳಿಗೆ ವಾರ್ನಿಂಗ್​ ಕೊಟ್ಟಿದ್ದಾರೆ. ಶಾಲೆಯ ವಾಹನಗಳನ್ನು ರಸ್ತೆಯಲ್ಲಿ ಪಾರ್ಕ್ ಮಾಡುತಿದ್ದರು. ಈ ಸಂಬಂಧ ಪಾರ್ಕಿಂಗ್ ವ್ಯವಸ್ಥೆ ಇದ್ದರೆ ಮಾತ್ರ ಬಸ್​ಗಳನ್ನು ಬಳಸುವಂತೆ ಕಮೀಷನರ್ ಹೇಳಿದ್ದರು. ಆದರೆ, ಈ ಬಗ್ಗೆ ಕ್ಯಾರೆ ಎನ್ನದ ಖಾಸಗಿ ಶಾಲೆಗಳು ಈ ಬಗ್ಗೆ ನೋಟಿಸ್​ ಕೂಡ ನೀಡಿತ್ತು.

ಇನ್ನು ರಸ್ತೆಯಲ್ಲಿ ಬಸ್ ಕಾರುಗಳನ್ನು ನಿಲ್ಲಸಬಾರದು, ಕಾಂಪೌಂಡ್ ಒಳಗೆ ನಿಲ್ಲಿಸಬೇಕು. ಇಲ್ಲವಾದ್ರೆ ಕಾನೂನು ಕ್ರಮ ಜರುಗಿಸಲಾಗುವುದು. ನೋಟಿಸ್​ಗೆ ಎಚ್ಚೆತ್ತುಕೊಂಡಿಲ್ಲ, ಅಂದ್ರೆ ರಸ್ತೆಯಲ್ಲಿ ಪಾರ್ಕ್ ಮಾಡಿದ ಅಷ್ಟೂ ವಾಹನಗಳಿಗೆ ನೋ ಪಾರ್ಕಿಂಗ್ ಕೇಸ್ ದಾಖಲು ಮಾಡಲಾಗುವುದು ಎಂದು ಕಮೀಷನರ್​ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *