ಈತನ ಕಣ್ಣಿಗೆ ಚಿನ್ನ ಬಿಟ್ರೆ ಬೇರೇನು ಕಾಣಲ್ಲ, ಸಿಕ್ಕಗೆಲ್ಲ ಕನಿಷ್ಠ1 ಕೆಜಿ ಗ್ಯಾರೆಂಟಿ

ಬೆಂಗಳೂರು: ಈತ ಪೊಲೀಸರ ಕೈಗೆ ಸಿಕ್ಕಿದರೆ ಸಾಕು ಕನಿಷ್ಠ ಅಂದರು 1 ಕೆ.ಜಿ ಚಿನ್ನಾಭರಣ ಮೀಸ್​ ಇಲ್ಲ, ಮನೆಗೆ ಕನ್ನ ಹಾಕಿ ಕೆ.ಜಿ ಗಟ್ಟಲೇ ಚಿನ್ನಾಭರಣ ಎಸ್ಕೇಪ್​ ಆಗುವ ಬಾರೀ ಅಸಾಮಿ ಈಗ ಆರಕ್ಷಕರ ಅಥಿತಿಯಾಗಿದ್ದಾನೆ.

ಸಿಲಿಕಾನ್​ ಸಿಟಿಯ ಕೆ.ಜಿ ನಗರದ ನಿವಾಸಿ ಈ ಕಳ್ಳ ಸಿಟಿ ಪೊಲೀಸರಿಗೆ ಬೇಕಾಗಿರುವಂತ ಮೋಸ್ಟ್​ ವಾಟೆಂಟ್​ ಲೀಸ್ಟ್​ನಲ್ಲಿ ಈತನ ಮೊದಲು ಅಂದ್ರೆ ತಪ್ಪಿಲ್ಲ, ‘ವೀರಮಣಿ ಅಲಿಯಾಸ್ ಚಾಪು’ ಈತ ಅಪ್ಪಿ-ತಪ್ಪಿ ತಗ್ಲಾಕೊಂಡು ಇದೀಗ ಕೆಂಪೇಗೌಡ ನಗರ ಪೊಲೀಸರ ಅತಿಥಿಯಾಗಿದ್ದಾನೆ.

ವೀರಮಣಿ ಜೊತೆ ಆತನ ಸಹಚರರಾದ ಶಾಂತ, ಶಾಂಡಾ ಸೇರಿದಂತೆ ಒಟ್ಟು ಐವರನ್ನು ಬಂಧಿಸಿಲಾಗಿದೆ. ಮೈಸೂರು ಮೂಲದ ಡಾಕ್ಟರ್ ಒಬ್ಬರ ಮನೆಯಲ್ಲಿ ಬರೋಬ್ಬರಿ 5 ಕೆ.ಜಿ ಚಿನ್ನಾಭರಣ ದೋಚಿದ್ದ ಭೂಪ. ಈ ಬಗ್ಗೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದ್ಯ ಈತನ ಬಳಿ ಕೆ.ಜಿ ನಗರ ಪೊಲೀಸರು 2.5 ಕೆ.ಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *