‘ಜಾಲಿ ರೈಡ್’​​ಗೆ ಮಗ, ಅಪ್ಪನ ಬಳಿ ಮಾಡಿದ ನಾಟಕ ಕೇಳಿ ಪೊಲೀಸರೇ ಬೆಚ್ಚಿಬಿದ್ದರು..!!

ಬೆಂಗಳೂರು: ಜಾಲಿ ರೈಡ್ ಮಾಡಲು ಮಗ ಅಪ್ಪನ ಬಳಿ ಅಪಹರಣ ನಾಟಕವಾಡಿ ಎರಡೂವರೆ ಸಾವಿರ ಅಕೌಂಟ್ ಗೆ ಹಾಕಿಸಿಕೊಂಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಡಾನ್ ಬಾಸ್ಕೋ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ಕಾರ್ತಿಕ್ ಎಂಬಾತನೆ ಅಪಹರಣದ ನಾಟಕವಾಡಿದ ಯುವಕ, ಮನೆಯಲ್ಲಿಯೇ ಇದ್ದ ಯುವಕ ಜೆರಾಕ್ಸ್ ಮಾಡಿಸಿಕೊಳ್ಳಲು ಮನೆಯಲ್ಲಿದ್ದ ಫೋರ್ಡ್ ಪಿಸ್ತಾ ಕಾರನ್ನು ತೆಗೆದುಕೊಂಡು ಮನೆಯಿಂದ ಹೋಗಿದ್ದನು, ಆದರೆ ಸ್ವಲ್ಪ ಸಮಯದ ಬಳಿಕ ನಿಮ್ಮ ಮಗನನ್ನು ಅಪಹರಣ ಮಾಡಲಾಗಿದೆ  ಎರಡೂವರೆ ಸಾವಿರ ಅಕೌಂಟ್ ಹಾಕುವಂತೆ ವಾಟ್ಸಪ್ ಮೆಸೆಜ್ ಮಾಡಿದ್ದರು.

ಸಂಜೆ ಆರು ಮುಕ್ಕಾಲಿಗೆ ಹೋಗಿದ್ದವನು ರಾತ್ರಿ 9-30 ಆದರೂ ವಾಪಾಸ್ ಬಂದಿರಲಿಲ್ಲ, ಕರೆ ಮಾಡಿದರೂ ರಿಸೀವ್ ಮಾಡದ ಹಿನ್ನಲೆ ಅಪಹರಣವಾಗಿದೆ ಎಂದು ತಂದೆ ಸುಧಾಕರ್ ಶೆಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತಂದೆಯ ದೂರನ್ನು ಮೊದಲು ಪೊಲೀಸರು  ನಂಬಲಿಲ್ಲ ಕಾರಣ ಎರಡೂವರೆ ಸಾವಿರಕ್ಕೆ ಅಪಹರಣವಾಗಿದೆ ಎಂದು ತಿಳಿಸಿದ್ದಾರು. ಕೊನೆಗೆ ದೂರು ದಾಖಲು ಮಾಡಿಕೊಂಡ ಜ್ಞಾನಭಾರತಿ ಪೊಲೀಸರು  ನಂಬರ್ ಟ್ರಾಕ್ ಗೆ ಹಾಕಿದರು. ಕಾಲ್ ಟ್ರೇಸ್ ಮಾಡಿದಾಗ ಸಿಕ್ಕಿಬಿದ್ದ ಮಗ ಕಾರ್ತಿಕ್ ಸತ್ಯವನ್ನು ಬಾಯಿಬಿಟ್ಟನು, ಅಪ್ಪ ಹಣ ಮತ್ತು ಕಾರು ಕೊಟ್ಟಿಲ್ಲ. ಅದಕ್ಕೆ ಅಪಹರಣ ನಾಟಕವಾಡಿದ್ದು ಎಂದು ತಿಳಿಸಿದ್ದಾನೆ.

Recommended For You

About the Author: Sushmitha T S

Leave a Reply

Your email address will not be published. Required fields are marked *