ಡಿ.ಕೆ ಸುರೇಶ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಫೋನ್ ಮಾಡಿದ್ದೇಕೆ..?

ಬೆಂಗಳೂರು: ದೂರವಾಣಿ ಮೂಲಕ ಸಂಸದ ಡಿ.ಕೆ ಸುರೇಶ್ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂಪರ್ಕಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಿನ್ನೆ ದೆಹಲಿಗೆ ತೆರಳಿ ಪಕ್ಷದ ಸಭೆಗೆ ಹಾಜರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡುರಾವ್ ಅವರು ಇಂದು ದೂರವಾಣಿ ಮೂಲಕ ಡಿ.ಕೆ ಸುರೇಶ್ ಅವರಿಗೆ ಸಂಪರ್ಕಿಸಿ ನಾನು ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಬಹುದು ಎಂದು ಕರೆಮಾಡಿದ್ದರು ಎಂದು ಗೊತ್ತಾಗಿದೆ.

ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಿದ್ದರಾಮಯ್ಯ ಅವರು, ಡಿಕೆಶಿ ಭೇಟಿಗೆ ಅವಕಾಶ ನೀಡ್ತಾರಾ? ನಾವು ಭೇಟಿ ಮಾಡಿ ಮಾತನಾಡಬಹುದೇ? ಭೇಟಿ ಮಾಡೋಕೆ ಅನುಮತಿ ಪಡೆಯಬಹುದಾ? ಎಂದು ಕೇಳಿದ್ದಾರೆ.

ಇದಕ್ಕೆ ಸಂಸದ ಡಿ. ಕೆ ಸುರೇಶ್ ಅವರು ಇಲ್ಲ ಸರ್ ಕುಟುಂಬ ಸದಸ್ಯರಿಗೆ ಮಾತ್ರ ಭೇಟಿಗೆ ಅವಕಾಶವಿದೆ, ಕುಟುಂಬ ಸದಸ್ಯರನ್ನ ಬಿಟ್ಟು ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಸುರೇಶ್ ಅವರು ಮಾಜಿ ಸಿಎಂಗೆ ತಿಳಿಸಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಕೋರ್ಟ್ ಅನುಮತಿ ನೀಡಿದರೆ ಮಾತ್ರ ಭೇಟಿ ಮಾಡಬಹುದು ಎಂದು ಸಂಸದ ಡಿ.ಕೆ.ಸುರೇಶ್ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಡಿಕೆಶಿ ವಿಚಾರವೂ ಚರ್ಚೆಯಾಗಿದ್ದು, ಡಿಕೆಶಿ ಪರ ನಿಲ್ಲುವಂತೆ ಸಿದ್ದರಾಮಯ್ಯಗೆ ಸೋನಿಯಾ ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.

Recommended For You

About the Author: TV5 Kannada

Leave a Reply

Your email address will not be published. Required fields are marked *