ಕಾಂಗ್ರೆಸ್​ನಲ್ಲಿ ಯಾರಿಗೆ ಸಿಗಲಿದೆ ವಿಪಕ್ಷ ನಾಯಕ ಸ್ಥಾನ – ದೆಹಲಿಯಲ್ಲಿಂದು ಸಭೆ

ಬೆಂಗಳೂರು: ಇಂದು ನವದೆಹಲಿಯಲ್ಲಿ ಎಐಸಿಸಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಭೆಯಲ್ಲಿ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ನೇತೃತ್ವವಹಿಸಲಾಗಿದ್ದು ಈ ವೇಳೆ ಎಲ್ಲಾ ರಾಜ್ಯಗಳ ಪಿಸಿಸಿ ಅಧ್ಯಕ್ಷರು ಸಿಎಲ್ಪಿ ಲೀಡರ್​ ಭಾಗವಹಿಸಲಿದ್ದಾರೆ.

ಇನ್ನು ಈ ಸಭೆಯಲ್ಲಿ ಭಾಗವಹಿಸಲಿರುವ ಕರ್ನಾಟಕದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭಾಗವಹಿಸಲಿದ್ದಾರೆ. ನಿರೀಕ್ಷೆಯಂತೆಯೇ ಸಭೆಯ ಮುಗಿದ ಬಳಿಕ ಪಕ್ಷದ ಅಧ್ಯಕ್ಷರೊಟ್ಟಿಗೆ ರಾಜ್ಯ ಕಾಂಗ್ರೆಸ್​ ನಾಯಕರು ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನದ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ವಿಪಕ್ಷ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕೆಂಬ ಚರ್ಚೆ ಮಾಡಲಾಗುವುದು, ಸದ್ಯ ಈ ಸ್ಥಾನಕ್ಕೆ ಐವರು ಕೈ ಮುಖಂಡರು ಪೈಪೋಟಿ ನಡೆಸಿದ್ದಾರೆ ಆದರೆ ಸಿದ್ದರಾಮಯ್ಯ ಮಾತ್ರ ವಿಪಕ್ಷ ನಾಯಕ ಸ್ಥಾನ ನನಗೆ ಇರಲಿ ಎಂಬ ಆಶಾಭಾವನೆ ವ್ಯಕ್ತಪಡಿಸುವ ಸಾಧ್ಯತೆ ಇದೆ. ಈ ನಡುವೆ ಸಿದ್ದರಾಮಯ್ಯ ಅವರಿಗೆ ಉಳಿದ ನಾಲ್ವರು ನಾಯಕರು ತೀರ್ವ ಪೈಪೋಟಿ ನೀಡುತ್ತಿದ್ದಾರೆ.

ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ಮಾಜಿ ಸಚಿವ ಹೆಚ್.ಕೆ.ಪಾಟೀಲ್, ಮಾಜಿ ಸಚಿವ ಕೃಷ್ಣಭೈರೇಗೌಡ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ವಿಪಕ್ಷ ಸ್ಥಾನದ ರೇಸ್​ನಲ್ಲಿ ಸಖತ್​ ಪೈಪೋಟಿ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ವಿಪಕ್ಷ ಸ್ಥಾನ ತಪ್ಪಿಸಲು ಹಿರಿಯ ಕಾಂಗ್ರೆಸ್​ ನಾಯಕರಾದ ಮಲ್ಲಿಕಾರ್ಜುನ್​ ಖರ್ಗೆ, ಪರಮೇಶ್ವರ್, ಹೆಚ್​.ಕೆ ಪಾಟೀಲ್​ ಅವರು ಕಾರ್ಯತಂತ್ರ ನಡೆಸಿದ್ದಾರೆ.

ಇನ್ನು ಡಾ. ಜಿ. ಪರಮೇಶ್ವರ್ ಮಾಡಿ ಇಲ್ಲಾ ಹೆಚ್​.ಕೆ ಪಾಟೀಲ್​ ಅವರಿಗೆ ಅವಕಾಶ ಕೊಡಿ ಎಂಬ ಒತ್ತಡವೂ ಕೂಡ ಇದೆ ಹಿರಿಯರ ಕಾರ್ಯತಂತ್ರಕ್ಕೆ ಸಿದ್ದರಾಮಯ್ಯನ ಪ್ರತಿತಂತ್ರ ರೂಪಿಸಿದ್ದಾರೆ. ನನಗೆ ಕೊಡಿ ಇಲ್ಲಾ ರಮೇಶ್ ಕುಮಾರ್ ಮಾಡಿ ಎಂದು ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡುವ ಸಾಧ್ಯತೆಯಿದೆ.

ಹೀಗಾಗಿ ಕುತೂಹಲ ಮೂಡಿಸಿದೆ ಪ್ರತಿಪಕ್ಷ ನೇಮಕ ವಿಚಾರ. ಇದೇ ವೇಳೆ ಕೆಪಿಸಿಸಿ ಪದಾಧಿಕಾರಿಗಳ ನೇಮಕದ ಬಗ್ಗೆ ಚರ್ಚೆ ಕೂಡ ನಡೆಸಲಿದೆ. ಈ ಸಂದರ್ಭದಲ್ಲಿ ೨೭೦ ಪದಾಧಿಕಾರಿಗಳನ್ನು ವಿಸರ್ಜಿಸಿದ್ದಾರೆ. ಮೂರು ತಿಂಗಳಾದರೂ ನೂತನ ಪದಾಧಿಕಾರಿಗಳ ನೇಮಕವಾಗಿಲ್ಲ, ಹೀಗಾಗಿ ಈ ನೇಮಕದ ಬಗ್ಗೆಯೂ ಚರ್ಚೆ ಮಾಡಲಾಗುವುದು.

Recommended For You

About the Author: TV5 Kannada

Leave a Reply

Your email address will not be published. Required fields are marked *