‘ಪಕ್ಷದ ವೆಬ್​ಸೈಟ್​ ಪ್ರಥಮ ಬಾರಿಗೆ ಆರಂಭ ಮಾಡಿದ್ದೇವೆ’ – ಹೆಚ್.ಡಿ ದೇವೇಗೌಡ

ಬೆಂಗಳೂರು: ಪಕ್ಷದ ವೆಬ್​ಸೈಟ್​ನ್ನು ಪ್ರಥಮ ಬಾರಿಗೆ ಪ್ರಾರಂಭ ಮಾಡಿದ್ದೇವೆ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರೇ ಸ್ವತಃ ಇಂದು ವೆಬ್ ಸೈಟ್ ಇಟ್ಟುಕೊಂಡಿದರು ಈಗ ಪಕ್ಷದಿಂದ ಅಧಿಕೃತ ವೆಬ್​ಸೈಟ್ ಉದ್ಘಾಟನೆ ಮಾಡಲಾಗಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಗುರುವಾರ ಹೇಳಿದರು.

ನಗರದ ಜೆಪಿಭವನದಲ್ಲಿಂದು ಜೆಡಿಎಸ್ ಪಕ್ಷದ ಅಧಿಕೃತ ವೆಬ್​​ಸೈಟ್ ಪೂಜೆ ಕಾರ್ಯನೆರವೇರಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಪಕ್ಷದ ಕಾರ್ಯಕ್ರಮಗಳ ಕುರಿತಾದ ಪ್ರಚಾರಕ್ಕೆ ಇದು ಅನುಕೂಲವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ತಿಳಿಸುವ ಪ್ರಯತ್ನ ಇದಾಗಿದೆ ಇದನ್ನು ರಮೇಶ್ ಬಾಬು ಅವರು ನೋಡಿಕೊಳ್ಳುತ್ತಾರೆ ಎಂದು ಅವರು ಮಾಹಿತಿ ಕೊಟ್ಟರು.

ಇನ್ನು ಇದರಲ್ಲಿ ಸಣ್ಣ ಒಂದು ಲೋಪ ಇದೆ, ನಮ್ಮ ಪಕ್ಷದ ಅಧ್ಯಕ್ಷರರ ಫೋಟೋ ಕೂಡ ಇರುತ್ತದೆ. ನಂದು (ಹೆಚ್.ಡಿ ದೇವೇಗೌಡ) ಕುಮಾರಸ್ವಾಮಿ ಹಾಗೂ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ ಫೋಟೋ ಕೂಡ ಇರಲಿದೆ, ಇದು ಪಕ್ಷದ ಹೆಸರಲ್ಲಿ ನಡೆಯುತ್ತೆ, ಇದರಲ್ಲಿ ಯಾವುದೇ ನೂನ್ಯತೆಗಳು ಇಲ್ಲ, ಇದರಲ್ಲಿ ಪಕ್ಷದ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳು ಇರುತ್ತಾರೆ ಎಂದರು.

ಸದ್ಯ ಕಾರ್ಯಕರ್ತರ ಯಾವುದೇ ಸಮಸ್ಯೆ ಇದರೂ, ಪಕ್ಷದ ನಿಲುವಿನ ಬಗ್ಗೆ ಹೊಸ ವ್ಯವಸ್ಥೆಯಿಂದ ಬಳಕೆ ಮಾಡಿಕೊಳ್ಳಬಹುದು, ನಾವು ಸ್ವಲ್ಪ ಹಿಂದೆ ಬಿದ್ದಿದ್ವಿ. ಆದರೆ, ಈಗ ಹೊಸದೊಂದು ಯೋಜನೆ ಮಾಡಿದ್ದೇವೆ. ಇದರಲ್ಲಿ ಅನುಭವ ಇರುವ ಸಿಬ್ಬಂದಿಗಳು ಇರುತ್ತಾರೆ, ಹೀಗಾಗಿ ಇದರಿಂದ ಪಕ್ಷದ ಸಂಘಟನೆಗೆ ಅನುಕೂಲ ಆಗಲಿದೆ ಎಂದು ಹೆಚ್.ಡಿ ದೇವೇಗೌಡ ಅವರು ತಿಳಿಸಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *