‘ಒಕ್ಕಲಿಗರು ನಡೆಸಿಲ್ಲ, ಡಿಕೆಶಿ ಬೆಂಬಲಿಗರು, ಹಿತೈಸಿಗಳು ಮಾಡಿದ ಪ್ರತಿಭಟನೆ’- ಡಾ. ಅಶ್ವಥ್​ ನಾರಾಯಣ್​​

ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಬಂಧನ ಮಾಡಿದನ್ನು ವಿರೋಧಿಸಿ ನಿನ್ನೆ ಒಕ್ಕಲಿಗರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಮುದಾಯದಿಂದ ಈ ಪ್ರತಿಭಟನೆ ನಡೆದಿಲ್ಲ, ಡಿ.ಕೆ ಶಿವಕುಮಾರ್ ಅವರ ಹಿತೈಷಿಗಳು, ಬೆಂಬಲಿಗರು ಪ್ರತಿಭಟನೆ ನಡೆಸಿದರು ಎಂದು ಉಪಮುಖ್ಯಮಂತ್ರಿ ಡಾ. ಅಶ್ವಥ್​ ನಾರಾಯಣ ಅವರು ಗುರುವಾರ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರೂ ಇದ್ದರು, ಪಕ್ಷದ ನಾಯಕರು ಇದ್ದರು ಅಂದರೆ ಅದು ಸಮುದಾಯದ ಕಾರ್ಯಕ್ರಮ ಆಗಲ್ಲ, ಪ್ರತಿಭಟನೆ ಮಾಡಿದರು ಜೊತೆ ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತೆ, ಇದರ ಬಗ್ಗೆ ಹೆಚ್ಚಿನ ವಿಶ್ಲೇಷಣೆಗಳು ಬೇಡ ಎಂದು ಅವರು ತಿಳಿಸಿದರು.

ಇನ್ನು ಬಿಜೆಪಿಯಿಂದ ಒಕ್ಕಲಿಗ ನಾಯಕರ ಟಾರ್ಗೆಟ್ ಎಂಬ ಕಾಂಗ್ರೆಸ್ ಆರೋಪ ವಿಚಾರವಾಗಿ ಸಹ ಪ್ರತಿಕ್ರಿಯಿಸಿದ ಅವರು, ಮೊದಲಿಂದಲೂ ಇಂತಹ ಹೇಳಿಕೆಗಳನ್ನು ಕೊಟ್ಟು ಬದಲಾಯಿಸ್ತಾನೇ ಬರ್ತಿದ್ದಾರೆ. ತಮ್ಮ ಅನುಕೂಲಕ್ಕೆ ರಾಜಕಾರಣ ಮಾಡೋದು ಬೇಡ, ಜನರಿಗಾಗಿ ರಾಜಕಾರಣ ಮಾಡಲಿ ಕಾಂಗ್ರೆಸ್​ನವರು ಇಂತಹ ಹೇಳಿಕೆ ಅವರ ಸ್ಥಾನ ಮತ್ತು ವ್ಯಕ್ತಿತ್ವಕ್ಕೆ ಸರಿ ಬರಲ್ಲ, ಜಾತಿ ಹೆಸರಲ್ಲಿ ಕಾಂಗ್ರೆಸ್​ನವರು ಜನರ ದಾರಿ ತಪ್ಪಿಸೋದು ಬೇಡ, ಜಾತಿಗೆ ಕಳಂಕ ತರುವ ಕೆಲಸ ಬೇಡ ಎಂದು ಕಾಂಗ್ರೆಸ್ ನಾಯಕರಿಗೆ ಡಿಸಿಎಂ ಅಶ್ವಥ್​ ನಾರಾಯಣ ತಿರುಗೇಟು

ಅಲ್ಲದೇ ನಮ್ಮ ಕಾಂಗ್ರೆಸ್ ನಾಯಕರು ಡಿಕೆಶಿ ಅವರ ಬಂಧನಕ್ಕೆ ಜಾತಿ ಬಣ್ಣ ಕೊಡೋದನ್ನು ನಿಲ್ಲಿಸಲಿ. ಸಮಾಜದಲ್ಲಿ ದ್ವೇಷ ಉಂಟು ಮಾಡೋದು ಬೇಡ, ಜಾತಿ ಮೀರಿ ಸಮಾಜ ಕಟ್ಟುವ ಕೆಲಸ ಆಗಲಿ. ಸಮಾಜ ಒಡೆಯುವ ಪ್ರಯತ್ನ ಮಾಡೋದು ಬೇಡ ಕಾಂಗ್ರೆಸ್​ನವರು, ಜಾತಿ ಹೆಸರಲ್ಲಿ ಬ್ಲಾಕ್ ಮೇಲ್ ಮಾಡೋದು ನಿಲ್ಲಿಸಲಿ ಎಂದು ಡಾ. ಅಶ್ವಥ್​ ನಾರಾಯಣ ಅವರು ಮಾತನಾಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *