ಗೋಕಾಕನಲ್ಲಿ ತಾರಕಕ್ಕೇರಿದ ಜಾರಕಿಹೊಳಿ ಸಹೋದರರ ಹಗ್ಗ-ಜಗ್ಗಾಟ

ಬೆಳಗಾವಿ: ಅನರ್ಹ ಕಾಂಗ್ರೆಸ್​ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರಿಬ್ಬರ ನಡುವೆ ಗೋಕಾಕ್​ ಅಧಿಪತ್ಯಕ್ಕಾಗಿ ಬಿಗ್ ಫೈಟ್ ನಡೆದಿದೆ. ಅಧಿಕಾರಿಗಳಿಗೆ ರಮೇಶ್ ಜಾರಕಿಹೊಳಿ ಅವರು ನೀಡಿದ ಸೂಚನೆಗೆ ಸತೀಶ್ ಜಾರಕಿಹೊಳಿ ಅವರು ಗರಂ ಆಗಿದ್ದಾರೆ.

ನಾನು ದೆಹಲಿಗೆ ಹೋಗುತ್ತಿದ್ದೇನೆ, ಗೋಕಾಕನಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುಂಚೆ ಅಳಿಯ ಅಂಬಿರಾವ್ ಪಾಟೀಲ್​ಗೆ ತಿಳಿಸಿ ಎಂದು ಅಧಿಕಾರಿಗಳಿಗೆ ರಮೇಶ್ ಜಾರಕಿಹೊಳಿ ಅವರು ಸೂಚನೆ ಕೊಟ್ಟಿದ್ದಾರೆ. ಅವರ ಸೂಚನೆಗೆ ಅಧಿಕಾರಿಗಳ ಮೇಲೆ ಸತೀಶ್ ಜಾರಕಿಹೊಳಿ ಗರಂ ಆಗಿದ್ದಾರೆ ಜೊತೆಗೆ ಇವರಿಬ್ಬರ ಮಧ್ಯೆ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.

ಸದ್ಯ ಪತ್ರ ಚಳುವಳಿ ಆರಂಭಿಸಿದ ಸತೀಶ್ ಜಾರಕಿಹೊಳಿ ಅವರು ಗೋಕಾಕನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೋಲಿಸರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗೆ ಸತೀಶ್ ಜಾರಕಿಹೊಳಿ ಅವರು ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಪೋಲಿಸರು ಅನವಶ್ಯಕ ಕಿರುಕುಳು ನೀಡಿ, ಸಂಬಂಧವಿಲ್ಲದ ಪ್ರಕರಣಗಳಲ್ಲಿ ಕೇಸ್ ಹಾಕಲಾಗುತ್ತಿದ್ದು ಇಂತಹ ಪ್ರಕರಣಗಳ ತನಿಖೆ ಬೇರೆ ಠಾಣೆಯ ಅಧಿಕಾರಿಗಳಿಂದ ನಡೆಸುವಂತೆ ಆಗ್ರಹಿಸಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *