ಸೆ.13ರಂದು ಗೋಚರಿಸಲಿದ್ದಾನೆ ಭಯಂಕರ ಚಂದ್ರ, ಅದ್ಯಾಕೆ ಗೊತ್ತಾ..!

ಪೂರ್ಣ ಪ್ರಮಾಣದ ಚಂದ್ರ (Harest Moon) ಇದೇ ಸೆಪ್ಟೆಂಬರ್ 13, 2019ರಂದು ಭಾರತದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಶುಕ್ರವಾರದಂದು ಪಶ್ಚಿಮ ದಿಕ್ಕಿನಲ್ಲಿ ವಾಸ ಮಾಡುವ ಜನರ ಕಡೆ ಚಂದ್ರ ಮೂಡಲಿದ್ದು ಅವರು ಭಯಂಕರವಾದ ಚಂದ್ರನ ರೂಪವನ್ನು ನಾಳೆ ಕಣ್ತುಂಬ ನೋಡಲಿದ್ದಾರೆ.

ಈ ಶುಕ್ರವಾರ, ಆಕಾಶದಲ್ಲಿ ಒಂದು ಹುಣ್ಣಿಮೆ ಕಾಣಿಸುತ್ತದೆ, ಇದು ಸುಮಾರು 20 ವರ್ಷಗಳಲ್ಲಿ ಮೊದಲ ಬಾರಿಗೆ ಸೆ.13 ನೇ ಶುಕ್ರವಾರದಂದು ಹೊಂದಿಕೆಯಾಗುತ್ತದೆ. ಇದು ಪಶ್ಚಿಮದ ಜನರಿಗೆ ಸಾಕಷ್ಟು ಬೃಹದಾಕರದಲ್ಲಿ ಕಾಣಿಸಿಕೊಳ್ಳುತ್ತಾನೆ ಅಲ್ಲದೇ ಈ ದಿನವು ಹುಣ್ಣಿಮೆ ದಿನ ಆಗಿರುತ್ತದೆ.

ಹಾರ್ವೆಸ್ಟ್ ಮೂನ್ ಎಂಬುದು ಪತನದ ಆರಂಭ ಅಥವಾ ಶರತ್ಕಾಲದ ವಿಷುವತ್ ಸಂಕ್ರಾಂತಿಯ ಸಮೀಪವಿರುವ ಹುಣ್ಣಿಮೆ ಎಂದು ಹೇಳುತ್ತಾರೆ. ಇದು ಹಗಲು ಮತ್ತು ರಾತ್ರಿಯಲ್ಲಿ ಒಂದೇ ಸಮನಾಗಿ ಇರುವುದನ್ನು ಅರ್ಥೈಸಲಾಗುವುದು. ಇದು ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳ ಹುಣ್ಣಿಮೆಯಲ್ಲಿ ಕಾಣಿಸಿಕೊಳ್ಳುತ್ತದೆ. ಒಂದೊಂದು ಸಲ ಈ ಸನ್ನಿವೇಶವೂ ಅಕ್ಟೋಬರ್ ತಿಂಗಳಲ್ಲಿ ಸಹ ಸಂಭವಿಸಬಹುದು.

ಸೆಪ್ಟೆಂಬರ್​ 14, 2019ರಂದು ಬೆಳಗ್ಗೆ 12:33 ಗಂಟೆಗೆ ಯುಎಸ್​ನಲ್ಲಿ ಹಾರ್ವೆಸ್ಟ್ ಮೂನ್ ಗೋಚರವಾಗಲಿದೆ ಎಂಬುದನ್ನು ಪ್ರಪಂಚದ ಪ್ರಖ್ಯಾತ ಪಂಚಾಗವೊಂದು ಹೇಳುತ್ತಿದೆ. ಇದನ್ನು ನೋಡಲು ಉತ್ತಮವಾದ ಕಾಲ ಎಂದರೆ ಸೆ.13, ಶುಕ್ರವಾರ ರಾತ್ರಿ ಆಕಾಶದತ್ತ ನೋಡಿ ಈ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಪೂರ್ಣ ಪ್ರಮಾಣದ ಚಂದ್ರ ಏಕೆ ಕರೆಯುತ್ತಾರೆ.

ಶರತ್ಕಾಲದ ವಿಷುವತ್ ಸಂಕ್ರಾಂತಿಯಿಂದಾಗಿ ಚಂದ್ರನು ಸೂರ್ಯಾಸ್ತದ ಬಳಿಕ ಚಂದ್ರನು ಸುಮಾರು 50 ನಿಮಿಷಗಳ ನಂತರ ಪೂರ್ಣ ಪ್ರಮಾಣದ ಚಂದ್ರ ಮೇಲೆರುತ್ತಾನೆ. ಈ ವೇಳೆ ಚಂದ್ರನು ಪ್ರಕಾಶಮಾನವಾದ ಬೆಳದಿಂಗಳನ್ನು ಸೃಷ್ಟಿಸುತ್ತಾನೆ. ರೈತರು ಬೇಸಿಗೆಯಲ್ಲಿ ಬೆಳೆದ ಬೆಳೆಗಳ ಕಟ್ಟಾವಿನೊಂದಿಗೆ ಸಂಭ್ರಮದ ರೀತಿಯಾಗಿರುತ್ತದೆ ಅದಕ್ಕೆ ಈ ರೀತಿ ಪೂರ್ಣ ಪ್ರಮಾಣದ ಚಂದ್ರ ಗೋಚರಕ್ಕೆ ರೈತರ ಸಂಪ್ರದಾಯಕ ಸೂಚಕವೆಂದು ಸಹ ಕರೆಯುತ್ತಾರೆ.

ಹಾರ್ವೆಸ್ಟ್ ಮೂನ್ ಸೆ.13, ಶುಕ್ರವಾರದಂದು ಬರುವುದರೊಂದಿಗೆ ಈ ವಿದ್ಯಮಾನವನ್ನು ಪಶ್ಚಿಮದ ಜನರು ಈ ಅಂಶವನ್ನು ಕಾತುರದಿಂದ ಕಣ್ತುಂಬಿಕೊಳ್ಳಲು ಕಾಯ್ದು ಕುಳಿತಿರುತ್ತಾರೆ. ಈ ದಿನಾಂಕದ ಬಗ್ಗೆ ಕೆಲವರಲ್ಲಿ ಮೂಢ ನಂಬಿಕೆಗಳನ್ನು ಸಹ ಹೊಂದಿದ್ದಾರೆ. ಇದು ಹನ್ನೆರೆಡು ವರ್ಷ, ಹನ್ನೆರಡು ತಿಂಗಳಗಳು, ರಾಶಿ ಚಕ್ರದಲ್ಲಿ ಹನ್ನೆರಡು ಚಿಹ್ನೆಗಳು ಇತ್ಯಾದಿಗಳು. ಇನ್ನು ಮುಂದೆ ಇದು ಸಂಪ್ರದಾಯವನ್ನು ಮೀರುವುದರಿಂದ ಅಂದರೆ ಅದು 13 ಬರುವುದರಿಂದ ಇದನ್ನು ಕೆಟ್ಟದ್ದು ಎಂಬ ಮಾಹಿತಿಯನ್ನು ಸಂಖ್ಯಾಶಾಸ್ತ್ರದ ಪಂಡಿತರು ನ್ಯಾಷನಲ್ ಜಿಯೋಗ್ರಾಫೀ ತಿಳಿಸಿದ್ದಾರೆ.

ಕೆಲವು ಭಾಗದಲ್ಲಿ 17ರಿಂದ 21 ಮಿಲಿಯನ್ ಜನರು ಈ ದಿನವನ್ನು ಭಯಪಡುತ್ತಾರೆ. ಈ ದಿನವನ್ನು ಇತಿಹಾಸದಲ್ಲಿ ಅತ್ಯಂತ ಭಯಭೀತ ದಿನ ಮತ್ತು ದಿನಾಂಕವಾಗಿದೆ ಎಂಬುದು ಅವರ ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ದಿನ ಬರುತ್ತಿದೆ ಎಂಬುದುನ್ನು ತಿಳಿದು ಕೆಲವು ಜನರು ಭಯದಿಂದ ಪಾರ್ಶ್ವವಾಯುವಿಗೆ ಒಳಗಾಗುತ್ತಾರೆ. ಇನ್ನು ಕೆಲವರು ವ್ಯವಹಾರ ಮಾಡುವಲ್ಲಿ ಹಿಂದೇಟು ಹಾಕುತ್ತಾರೆ. ವಿಮಾನಯಾನ ಮಾಡುವುದಕ್ಕೂ ಸಹ ಜನ ಭಯಪಡುತ್ತಾರೆ. ಮತ್ತೆ ಕೆಲವರು ಮನೆಯಿಂದ ಹೊರಗೆ ಹೊರಲಿಕ್ಕೂ ಸಹ ಬೆದರುತ್ತಾರೆ ಕಾರಣ ಎಂದಿನಂತೆ ಈ ದಿವಸ ಚಂದ್ರ ಕಾಣುವುದಿಲ್ಲ ಹೀಗಾಗಿ ಅವರು ಭಯಭೀತರಾಗುತ್ತಾರೆ.

ಇತಿಹಾಸ ತಜ್ಞರ ಪ್ರಕಾರ ಈ ದಿನ ಪ್ರಪಂಚದ್ಯಂತ ವ್ಯವಹಾರ ಮಾಡುವವರು ಸಾಕಷ್ಟು ಪ್ರಮಾಣದಲ್ಲಿ ನಷ್ಟ ಕಂಡುಬರುತ್ತದೆ. ಇದಕ್ಕೆ ಕಾರಣ ಪೂರ್ಣ ಪ್ರಮಾಣದ ಚಂದ್ರನ ಮೇಲಿರುವ ಭೀತಿ ಎಂದು ಹೇಳಿದ್ದಾರೆ. ಅಕ್ಟೋಬರ್ 13, 2000 ಇಸವಿ ಅಂದ್ರೆ ಸುಮಾರು ಇಪ್ಪತ್ತು ವರ್ಷಗಳ ನಂತರ ಪೂರ್ಣ ಪ್ರಮಾಣದ ನಂತರ ಚಂದ್ರ ಗೋಚರಿಸುತ್ತಿದ್ದಾನೆ. ಮತ್ತೆ ಈ ತರ ಪೂರ್ಣ ಪ್ರಮಾಣದ ಚಂದ್ರ ಕಾಣಿಸುವುದು ಅಗಸ್ಟ್ 13, 2049

Recommended For You

About the Author: TV5 Kannada

Leave a Reply

Your email address will not be published. Required fields are marked *