‘ಕಿಚ್ಚ ಸುದೀಪ್​ ಮತ್ತು ಸುನೀಲ್​ ಶೆಟ್ಟಿ ಜುಗಲ್​ಬಂದಿ ಚಿಂದಿ’ – TV5 Kannada ರೇಟಿಂಗ್​ 4/5

ಬಲವಾದ ಕಾರಣಕ್ಕೆ ಹೋರಾಡೋ ಬಾದ್​ಶಾ ಪೈಲ್ವಾನ್​ ಅಖಾಡಕ್ಕೆ ಇಳಿದಾಯ್ತು, ಮುಂಜಾನೆಯೇ ಅಭಿಮಾನಿಗಳಿಗೆ ಪೈಲ್ವಾನ್ ಕಿಚ್ಚನ ದರ್ಶನವಾಯ್ತು. ಕಳೆದೊಂದು ವರ್ಷದಿಂದ ಬಾರೋ ಪೈಲ್ವಾನ್​ ಅಂತ ಕೂಗ್ತಿದ್ದ ಸುದೀಪಿಯನ್ಸ್, ಬಂದೇ ಬಿಟ್ಟ ಪೈಲ್ವಾನ್​ ಅಂತ ಹಬ್ಬ ಆಚರಿಸ್ತಿದ್ದಾರೆ. ವಿಶ್ವದಾದ್ಯಂತ ಅಭಿನಯ ಚಕ್ರವರ್ತಿಯ ಆರ್ಭಟ ಶುರುವಾಗಿದ್ದು, ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಹಾಗಾದ್ರೆ ಬನ್ನಿ ಪೈಲ್ವಾನ್​ ಕಥೆಯೇನು(?) ಸಿನಿಮಾ ಹೇಗಿದೆ(?) ಮುಂದಿ ಓದಿ.

ವಿಶ್ವದಾದ್ಯಂತ ಶುರುವಾಯ್ತು ಪೈಲ್ವಾನ್ ಬಾದ್​ಶಾ ಆರ್ಭಟ
ಮೀಸೆ ಮಣ್ಣಾಗದ ಜಗಜಟ್ಟಿ ಮಲ್ಲನ​ ಖದರ್ ಹೇಗಿದೆ ಗೊತ್ತಾ(?)

ಕನ್ನಡ ಸಿನಿರಸಿಕರು ಮಾತ್ರವಲ್ಲ, ಭಾರತೀಯ ಸಿನಿಪ್ರೇಮಿಗಳು ಕಾತರದಿಂದ ಕಾಯ್ತಿದ್ದ ಸಿನಿಮಾ ಪೈಲ್ವಾನ್. ಕೃಷ್ಣ ನಿರ್ದೇಶನದ ಈ ಸ್ಪೋರ್ಟ್​ ಡ್ರಾಮಾದಲ್ಲಿ ಕಿಚ್ಚ ಸುದೀಪ್​ ಕುಸ್ತಿ ಪೈಲ್ವಾನ್​ ಮತ್ತು ಬಾಕ್ಸರ್​ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಕಿಚ್ಚನ ಪೈಲ್ವಾನ್​ ಲುಕ್ಕು, ಅದ್ದೂರಿ ಮೇಕಿಂಗ್​ ಮತ್ತು ಸ್ಯಾಂಪಲ್​ಗಳಿಂದ್ಲೇ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದ ಪೈಲ್ವಾನ್ ಸಿನಿಮಾ ಫೈನಲಿ ತೆರೆಗಪ್ಪಳಿಸಿದೆ. ಪ್ರೇಕ್ಷಕರು ಪೈಲ್ವಾನ್​ ಕಿಚ್ಚನ ಖದರ್​ ನೋಡಿ ಮೆಚ್ಚಿಕೊಂಡಿದ್ದಾರೆ.

ಚಿತ್ರ: ಪೈಲ್ವಾನ್
ನಿರ್ದೇಶನ: ಎಸ್​​. ಕೃಷ್ಣ
ನಿರ್ಮಾಣ: ಸ್ವಪ್ನ ಕೃಷ್ಣ
ಸಂಗೀತ: ಅರ್ಜುನ್ ಜನ್ಯಾ
ಛಾಯಾಗ್ರಹಣ: ಕರುಣಾಕರ. ಎ
ತಾರಾಗಣ: ಕಿಚ್ಚ ಸುದೀಪ್, ಸುನೀಲ್ ಶೆಟ್ಟಿ, ಆಕಾಂಕ್ಷ ಸಿಂಗ್, ಶರತ್​​ ಲೋಹಿತಾಶ್ವ, ಸುಶಾಂತ್ ಸಿಂಗ್, ಕಬೀರ್​ ದುಹಾನ್​ ಸಿಂಗ್​, ಅಪ್ಪಣ್ಣ ಮತ್ತಿತರರು.

ಪೈಲ್ವಾನ್ ಸ್ಟೋರಿಲೈನ್

ಗಜೇಂದ್ರಗಢದ ಉಸ್ತಾದ್​​ ಸರ್ಕಾರ್. ಆತನ ಮನೆಯಲ್ಲಿ, ಗರಡಿಯಲ್ಲಿ ಬೆಳೆಯುವ ಅನಾಥ ಹುಡುಗ ಕಿಚ್ಚ ಅಲಿಯಾಸ್​ ಕೃಷ್ಣ. ಪೈಲ್ವಾನ್​ ಕಿಚ್ಚನನ್ನ ನ್ಯಾಷನಲ್​​​​ ಲೆವೆಲ್​ ಕುಸ್ತಿ ಚಾಂಪಿಯನ್​ ಮಾಡ್ಬೇಕು ಅನ್ನೋದು ಸರ್ಕಾರ್​​ ಗುರಿ. ಬೆಳೆಸಿದ ಸರ್ಕಾರ್​ ಕನಸನ್ನ ನನಸು ಮಾಡೋದೇ ಕಿಚ್ಚನ ಗುರಿ. ಆದ್ರೆ ಆತನ ಬಾಳಲ್ಲಿ ರುಕ್ಮಿಣಿಯ ಆಗಮನವಾಗುತ್ತೆ. ಅದಾಗಲೇ ಬೇರೆ ಹುಡುಗನೊಂದಿಗೆ ಮದ್ವೆ ನಿಶ್ಚಯವಾಗಿದರು, ರುಕ್ಮಿಣಿ-ಕೃಷ್ಣನನ್ನ ಪ್ರೀತಿಸ್ತಾಳೆ. ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿ ಆಕೆಯ ಅಪ್ಪನ ಮುಂದೆ ಸರ್ಕಾರ್​​​ ತಲೆ ತಗ್ಗಿಸುವಂತೆ ಮಾಡ್ತಾನೆ ಪೈಲ್ವಾನ್.

ಮಾತು ಮೀರಿದ ಕೃಷ್ಣ, ತಂದೆ ಸಮಾನರಾದ ಸರ್ಕಾರ್​ ಅವರಿಂದ ದೂರಾಗ್ತಾನೆ. ಊರು ಬಿಟ್ಟು ಹೆಂಡತಿ ಜೊತೆ ಮತ್ತೊಂದು ಊರಿಗೆ ಬಂದು, ಸರ್ಕಾರ್​​ ಮತ್ತು ಕುಸ್ತಿ ನೆನಪಿನಲ್ಲೇ ಜೀವನ ನಡೆಸ್ತಿರ್ತಾನೆ. ಹೀಗೆ ಕುಸ್ತಿಯನ್ನ ಬಿಟ್ಟ ಕಿಚ್ಚ ಮತ್ತೆ ಕುಸ್ತಿ ಅಖಾಡಕ್ಕೆ ಇಳಿತ್ತಾನಾ(?) ಕುಸ್ತಿ ಪೈಲ್ವಾನ್ ಕಿಚ್ಚ ಟೋನಿ ಎದುರು ಪ್ರೋ ಬಾಕ್ಸಿಂಗ್​ ಲೀಗ್​ ರಿಂಗ್​​ನಲ್ಲಿ ಇಳಿಯೋದ್ಯಾಕೆ(?) ಸರ್ಕಾರ್​ ಕಂಡ ಕನಸನ್ನ ಕಿಚ್ಚ ನನಸು ಮಾಡ್ತಾನಾ(?) ಇಲ್ವಾ(?) ಅನ್ನೋದನ್ನ ತೆರೆಮೇಲೆ ನೋಡಿ ಎಂಜಾಯ್ ಮಾಡ್ಬೇಕು.

ಕಿಕ್​​ ಕೊಡುತ್ತೆ ಕಿಚ್ಚನ ಕುಸ್ತಿ. ಥ್ರಿಲ್​​​ ಕೊಡುತ್ತೆ ಬಾದ್ಶಾ ಬಾಕ್ಸಿಂಗ್
ಕಿಚ್ಚ ಸುದೀಪ್​ ಮತ್ತು ಸುನೀಲ್​ ಶೆಟ್ಟಿ ಜುಗಲ್​ಬಂದಿ ಚಿಂದಿ

ಇಡೀ ಸಿನಿಮಾ ಇಷ್ಟವಾಗೋದೇ ಪಾತ್ರವರ್ಗದ ಆಯ್ಕೆಯಿಂದ. ಪೈಲ್ವಾನ್​ ಕಿಚ್ಚನಾಗಿ ಬಾದ್​ಶಾ​ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ದೇಹವನ್ನ ಹುರಿಗೊಳಿಸಿಕೊಂಡಿರೋ ಸುದೀಪ್, ಥೇಟ್​​ ಕುಸ್ತಿ ಪೈಲ್ವಾನ್​ ರೀತಿ ಅಬ್ಬರಿಸಿದ್ದಾರೆ. ಬಾಕ್ಸರ್​ ಆಗಿಯೂ ಪವರ್​ಫುಲ್​ ಪಂಚ್ ಕೊಡ್ತಾರೆ. ಫಸ್ಟ್​ ಹಾಫ್ ಕಿಚ್ಚನ ಗತ್ತು, ಖದರ್​​, ಲವ್​​ಗೆ ಸೀಮಿತವಾದ್ರೆ, ಕಥೆ ಸೆಕೆಂಡ್​ ಹಾಫ್​ನಲ್ಲಿ ಶುರುವಾಗುತ್ತೆ. ಪೈಲ್ವಾನ್ ಲುಕ್​​ನಲ್ಲೇ ಕಿಕ್​ ಕೊಡೋ ಕಿಚ್ಚ, ರಣಸ್ಥಳೀಪುರದ ಕುಸ್ತಿ ಅಖಾಡದಲ್ಲಿ ರಾಜ ರಾಣಾ ಪ್ರತಾಪ್​ ವರ್ಮಾ ಎದುರು ಧೂಳೆಬ್ಬಿಸಿದ್ದಾರೆ.

ಆ್ಯಕ್ಷನ್​, ರೊಮ್ಯಾನ್ಸ್​, ಕಾಮಿಡಿ, ಎಮೋಷನ್​ ಹೀಗೆ ಎಲ್ಲಾ ವಿಭಾಗದಲ್ಲೂ ಸುದೀಪ್​ ಫುಲ್​ ಮಾರ್ಕ್ಸ್​​ ಗಿಟ್ಟಿಸ್ತಾರೆ. ಕಿಚ್ಚನ ತಂದೆ ಮತ್ತು ಗುರು ಸರ್ಕಾರ್​ ಪಾತ್ರದಲ್ಲಿ ಸುನೀಲ್​ ಶೆಟ್ಟಿ, ಗಮನ ಸೆಳೀತಾರೆ. ಗಂಭೀರ ನೋಟದಲ್ಲೇ ಉಸ್ತಾದ್​ ಪಾತ್ರಕ್ಕೆ ಜೀವ ಸುನೀಲ್​ ಶೆಟ್ಟಿ ತುಂಬಿದ್ದಾರೆ. ಸುದೀಪ್​ ಮತ್ತು ಸುನೀಲ್​ ಶೆಟ್ಟಿ ಜುಗಲ್​ಬಂದಿ ಚಿತ್ರದ ಹೈಲೆಟ್.

ನಾಯಕಿ ಆಕಾಂಕ್ಷಾ ಸಿಂಗ್​​​ ಗ್ಲಾಮರ್ ಡಾಲ್​ ಆಗಿ ಉಳಿಯದೇ, ರುಕ್ಮಿಣಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಿಚ್ಚನನ್ನ ಕುಸ್ತಿಯಲ್ಲಿ ಸೋಲಿಸಲೇಬೇಕು ಅಂತ ಹವಣಿಸೋ ರಣಸ್ಥಳೀಪುರದ ರಾಜ ರಾಣಾ ಪ್ರತಾಪ್​ ವರ್ಮಾ ಪಾತ್ರದಲ್ಲಿ ಸುಶಾಂತ್​ ಸಿಂಗ್​ ಗಮನ ಸೆಳೀತಾರೆ. ಬಾಕ್ಸಿಂಗ್​ ಕೋಚ್​ ಪಾತ್ರದಲ್ಲಿ ಶರತ್​ ಲೋಹಿತಾಶ್ವ, ಬಾಕ್ಸರ್​​​ ಟೋನಿಯಾಗಿ ಕಬೀರ್​ ದುಹಾನ್​ ಸಿಂಗ್​, ಫಸ್ಟ್ ಹಾಫ್​ ಇಡೀ ಕಿಚ್ಚನ ಸ್ನೇಹಿತ ಪಾಪು ಪಾತ್ರದಲ್ಲಿ ಅಪ್ಪಣ್ಣ ಇಷ್ಟವಾಗ್ತಾರೆ.

ಹೆಬ್ಬುಲಿ ನಂತರ ಒನ್ಸ್ ಅಗೇನ್​​ ಕೃಷ್ಣ ಮತ್ತು ಸುದೀಪ್​ ಕಾಂಬಿನೇಷನ್ ವರ್ಕೌಟ್​ ಆಗಿದೆ. ಕಲರ್​ ಕಾಂಬಿನೇಷನ್, ಮೇಕಿಂಗ್​, ಗ್ರಾಫಿಕ್ಸ್​​​​ ಮತ್ತು ಅರ್ಜುನ್ ಜನ್ಯಾ ಸಾಂಗ್ಸ್​​ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ಬಹುತೇಕ ಸನ್ನಿವೇಶಗಳನ್ನ ಸೆಟ್​ಗಳಲ್ಲೇ ಶೂಟ್ ಮಾಡಿರೋದ್ರಿಂದ ಇಡೀ ಸಿನಿಮಾ ಹೊಸ ಫೀಲ್​ ಕೊಡುತ್ತೆ. ಇಡೀ ಸಿನಿಮಾ ಪ್ರೇಕ್ಷಕರು ಪೈಲ್ವಾನ್​ ಜೊತೆ ಕಲರ್​ಫುಲ್​ ಜರ್ನಿ ಹೋಗಿ ಬರ್ತಾರೆ.

ಪೈಲ್ವಾನ್ ಪ್ಲಸ್ ಪಾಯಿಂಟ್ಸ್

⦁ ಸುದೀಪ್​ ಸ್ಟ್ರಾಂಗ್​ ಸ್ಕ್ರೀನ್ ಪ್ರಸೆನ್ಸ್
⦁ ಕಲಾವಿದರ ಅಭಿನಯ ಮತ್ತು ಮೇಕಿಂಗ್
⦁ ಬ್ಯಾಕ್​ಗ್ರೌಂಡ್​​ ಮ್ಯೂಸಿಕ್​, ಸಾಂಗ್ಸ್
⦁ ಗ್ರಾಫಿಕ್ಸ್ ಮತ್ತು ಡೈಲಾಗ್ಸ್

ಪೈಲ್ವಾನ್ ಮೈನಸ್​​ ಪಾಯಿಂಟ್ಸ್

ಎಲ್ಲಾ ವಿಭಾಗದಲ್ಲೂ ಫಸ್ಟ್​ ಕ್ಲಾಸ್​​​ ಅನ್ನಿಸೋ ಪೈಲ್ವಾನ್ ಸಿನಿಮಾದಲ್ಲಿ ಮೈನಸ್​ ಪಾಯಿಂಟ್ಸ್ ಹುಡುಕೋದು ಕಷ್ಟ. ಒಂದು ಪ್ಯಾನ್​ ಇಂಡಿಯಾ ಸಿನಿಮಾಗೇ ಬೇಕಾದ ಅಂಶಗಳನ್ನ ಸಿನಿಮಾದಲ್ಲಿ ಹದವಾಗಿ ಬೆರಸಿದ್ದಾರೆ ನಿರ್ದೇಶಕರು. ಅದು ಇಡೀ ಸಿನಿಮಾ ಎದ್ದು ಕಾಣುತ್ತೆ.
TV5 ರೇಟಿಂಗ್: 4/5

ಫೈನಲ್​ ಸ್ಟೇಟ್​ಮೆಂಟ್

ದೇಸಿ ಕ್ರೀಡೆಯನ್ನ ಆಧರಿಸಿ, ಪೈಲ್ವಾನ್​ ಚಿತ್ರವನ್ನ ಕಟ್ಟಿಕೊಟ್ಟಿರೋ ಚಿತ್ರತಂಡದ ಶ್ರಮವನ್ನ ಮೆಚ್ಚಲೇಬೇಕು. ತಡವಾದ್ರು, ಕ್ವಾಲಿಟಿ ವಿಚಾರದಲ್ಲಿ ಕೃಷ್ಣ ಅಂಡ್ ಟೀಮ್ ರಾಜಿಯಾಗಿಲ್ಲ.. ಅದು ಪ್ರತಿ ದೃಶ್ಯದಲ್ಲೂ ಎದ್ದು ಕಾಣುತ್ತೆ. ಒಂದೊಳ್ಳೆ ಸಂದೇಶದ ಜೊತೆಗೆ ಭರ್ಜರಿ ಮನರಂಜನೆ ಕೊಡೋ ಪೈಲ್ವಾನ್​ ಚಿತ್ರವನ್ನ ಬರೀ ಸುದೀಪ್​ ಅಭಿಮಾನಿಗಳು ಮಾತ್ರವಲ್ಲ, ಸಿನಿಪ್ರೇಕ್ಷಕರೆಲ್ಲ ನೋಡಿ ಎಂಜಾಯ್ ಮಾಡ್ಬೋದು. ನೀವು ಬಿಡುವು ಮಾಡ್ಕೊಂಡು ಪೈಲ್ವಾನ್​ ಆರ್ಭಟವನ್ನ ಕಣ್ತುಂಬಿಕೊಳ್ಳಿ.

Recommended For You

About the Author: TV5 Kannada

Leave a Reply

Your email address will not be published. Required fields are marked *