ವೀರಶೈವರು ಪಾಯಸ, ಒಕ್ಕಲಿಗರು ಮಾಂಸ – ಜೆಡಿಎಸ್​ ಶಾಸಕ ಶ್ರೀನಿವಾಸ್

ತುಮಕೂರು: ಒಕ್ಕಲಿಗರು ಮಾಂಸ ಇದ್ದಹಾಗೆ, ವೀರಶೈವರು ಪಾಯಸ ಇದ್ದಹಾಗೆ ಎಂದು ಮಾಜಿ ಸಚಿವ ಎಸ್.ಆರ್ ಶ್ರೀನಿವಾಸ್ ಅವರು ತಮ್ಮ ಸ್ವ-ಸಮುದಾಯದ ಮೇಲೆಯೇ ಬುಧವಾರ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಒಕ್ಕಲಿಗರು ಮಾಂಸ ಜಾಸ್ತಿ ತಿಂತಿವಿ. ಹೀಗಾಗಿ ನಮಗೆ ಬುದ್ದಿ ಕಡಿಮೆ ಇರುವುದರಿಂದ ನಮ್ಮ ಮೇಲೆ ಜನ ಸವಾರಿ ಮಾಡುತ್ತಾರೆ. ನಮ್ಮ ಸಮುದಾಯದಲ್ಲಿ ಒಗ್ಗಟ್ಟು ಇಲ್ಲ ಎಂದು ತಮ್ಮ ಸಮುದಾಯದ ವಿರುದ್ಧ ಅವರು ವ್ಯಂಗ್ಯವಾಡಿದರು.

ಬೇರೆ ಸಮಾಜಕ್ಕೆ ಹೋಲಿಸಿದರೆ ನಾವಿನ್ನು ಎದ್ದಿಲ್ಲ, ಮಲಗಿದ್ದೇವೆ.  ಲಿಂಗಾಯಿತರು ಪಾಯಸ ಇದ್ದಹಾಗೆ ಹೀಗಾಗಿ ಅದು ಅವರ  ಜೊತೆಯಲ್ಲಿ ಹರಿದುಕೊಂಡು ಹೋಗುತ್ತೆ. ಆ ಪಾಯಸ ಎಲ್ಲೂ ಇಬ್ಬಾಗ ಆಗಲ್ಲ. ನಾವು ತಿನ್ನೋದು ಮಾಂಸ. ನಮ್ಮ ಬುದ್ದಿನೂ ಮಾಂಸ ಎಂದು ಎಸ್.ಆರ್ ಶ್ರೀನಿವಾಸ್ ಅವರು ಹೇಳಿದರು.

ಇತ್ತೀಚಿಗೆ ಒಕ್ಕಲಿಗರ ನಾಯಕರನ್ನು ತುಳಿಯುವ ಕೆಲಸ ನಡೆಯುತ್ತಿದೆ ಎಂದು ಕೆಲವು ಒಕ್ಕಲಿಗ ನಾಯಕರು ಬಹಿರಂಗವಾಗಿ ಹೇಳಿಕೊಂಡಿದ್ದರು, ಈ ಹೇಳಿಕೆಗಳಿಗೆ ಕೆಲವು ನಾಯಕರು ವಿರೋಧ ಸೂಚಿಸಿದರೆ ಇನ್ನೂ ಕೆಲವು ನಾಯಕರು ಬೆಂಬಲ ಸೂಚಿಸಿದ್ದರು.

Recommended For You

About the Author: TV5 Kannada

Leave a Reply

Your email address will not be published. Required fields are marked *