ಯಾರು ಹಿಡಿದಿಕೊಂಡಿದ್ದಾರೆ, ಹೋಗಲಿ ಬಿಡಿ – ಹೆಚ್.ಡಿ ದೇವೇಗೌಡ ಗರಂ

ಮೈಸೂರು: ಜಿ.ಟಿ ದೇವೇಗೌಡ ಅವರು ಎಲ್ಲಿಗೆ ಹೋಗಬೇಕು ಹೋಗಲಿ ಬಿಡಿ, ಅವರನ್ನು ಯಾರು ಹಿಡಿದುಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಗುರುವಾರ ಜಿಟಿಡಿ ವಿರುದ್ಧ ಸಿಡಿಮಿಡಿಗೊಂಡರು.

ನಗರದಲ್ಲಿಂದು ಹುಣಸೂರು ಉಪಚುನಾವಣೆ ಹಾಗೂ ಪಕ್ಷ ಸಂಘಟನೆ ವಿಚಾರವಾಗಿ ನಡೆಸಿದ ಸಭೆಯಲ್ಲಿ ಭಾಗಿವಹಿಸಿ ಮಾತನಾಡಿದ ಅವರು, ಜಿ.ಟಿ.ದೇವೇಗೌಡರ ಬಗ್ಗೆ ನಾನೇನು ಮಾತನಾಡಿದ್ದೀನಾ? ದೇವೇಗೌಡರು ಗುರುಗಳಲ್ಲ ಅಂತ ಅವರು ಹೇಳಿದ್ದಾರೆ. ಅವರನ್ನು ನಾನು ಕೇಳಿದ್ನಾ ಎಂದು ಮಾಜಿ ಪ್ರಧಾನಿ ಅವರು ಪ್ರಶ್ನಿಸಿದರು.

ನಾನು ವೈಯಕ್ತಿಕವಾಗಿ ಯಾರನ್ನು ನಾನು ಟೀಕೆ ಮಾಡಲ್ಲ, ಅವರು ಹೇಳುವುದನ್ನು ಕೇಳಿಸಿಕೊಳ್ಳುತ್ತೇನೆ. ಕುಮಾರಸ್ವಾಮಿ ಗುರುವಲ್ಲ ಮತ್ತು ನಾನು ಸ್ವಂತ ಬೆಳೆದಿದ್ದೇನೆ ಅಂತ ಹೇಳಿದ್ದಾರೆ. ಅವರು ಹೇಳಿಕೆಗಳನ್ನು ಕಿವಿಯಲ್ಲಿ ಕೇಳಿಸಿಕೊಂಡಿದ್ದೇನೆ ಎಂದು ಹೆಚ್.ಡಿ ದೇವೇಗೌಡ ಅವರು ಜಿ.ಡಿ ದೇವೆಗೌಡ ವಿರುದ್ಧ ಗರಂ ಆದರು.

ಇತ್ತೀಚಿಗೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರು ಸಚಿವ ವಿ.ಸೋಮಣ್ಣ ಸೇರಿದಂತೆ ಇತರ ಬಿಜೆಪಿ ನಾಯಕರೊಟ್ಟಿಗೆ ಗುರುತಿಸಿಕೊಂಡಿದ್ದರು. ಇಂದಿನ ಜೆಡಿಎಸ್ ಚಿಂತನ-ಮಂಥನ ಸಭೆಯಲ್ಲಿ ಜಿಟಿಡಿ ಗೈರಾಗಿದ್ದರು. ಈ ಕಾರ್ಯಕ್ರಮ ಗೈರಾಗುವ ಮೂಲಕ ಹೆಚ್.ಡಿ ಕುಮಾರಸ್ವಾಮಿ ಅವರಿಗೆ  ಸ್ಪಷ್ಟ ಸಂದೇಶ ರವಾನೆ ಮಾಡಿದ್ರಾ ಜಿ.ಟಿ.ಡಿ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

Recommended For You

About the Author: TV5 Kannada

Leave a Reply

Your email address will not be published. Required fields are marked *