ಜಿ .ಟಿ ದೇವೇಗೌಡಗೆ ಟಾಂಗ್​ ಕೊಟ್ಟ ಹೆಚ್​.ಡಿ ಕುಮಾರಸ್ವಾಮಿ

ಮೈಸೂರು: ದಸರಾ ಅನುಭವ ಧಾರೆ ಎರೆಯಲು ನಾವೇ ಮಾಜಿ ಸಚಿವ ಜಿ .ಟಿ ದೇವೇಗೌಡ ಅವರನ್ನು ಬಿಟ್ಟಿದ್ದೇವೆ  ಎಂದು ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ಟಾಂಗ್​ ಕೊಟ್ಟರು.

ನಗರದಲ್ಲಿಂದು ಸಭೆಗೆ ಗೈರಾದ ಜಿಟಿಡಿಗೆ ಟಾಂಗ್ ಕೊಟ್ಟ ಮಾಜಿ ಸಿಎಂ,  ಜಿ. ಟಿ ದೇವೇಗೌಡರು ಗ್ರಾಮೀಣ ಭಾಗದವರು. ನಾವು ನಗರ ಪ್ರದೇಶದ ಸಭೆ ಕರೆದಿದ್ದೇವೆ.  ಕಳೆದ ವರ್ಷ ಜಿಟಿಡಿ ದಸರಾ ಯಶಸ್ವಿಯಾಗಿ ಮಾಡಿದ್ದರು. ಅದರ ಅನುಭವವನ್ನು ಧಾರೆ ಎರೆದು ಕೊಡಲು ನಾವೇ ಕಳುಹಿಸಿದ್ದೇವೆ ಎಂದರು.

ಖಾತೆ ಕೋಡೋದು ನನ್ನ ಕೈಯಲ್ಲಿ ಇರಲಿಲ್ಲ. ಹಾಗಾಗಿ ಅದರ ಬಗ್ಗೆ ಚರ್ಚೆ ಮಾಡೋಲ್ಲ. ಯಾರು ಯಾರಿಗೆ ಕೈ ಕೊಡ್ತಾರೆ ಅನ್ನೋದನ್ನು ಮುಂದೆ ನೋಡೋಣ ಎಂದು ಹೇಳಿದರು.

ನಂತರ ಮಾತನಾಡಿದ  ಅವರು, ಯಾರು ಬೇಕಾದರೂ ಆರೋಪ ಮಾಡಬಹುದು. ಇವತ್ತು ಯಾರು ಆರೋಪ ಮಾಡ್ತಾರೆ ಅವರೇ ಇನ್ನು ಮೂರು ನಾಲ್ಕು ತಿಂಗಳಲ್ಲಿ ನಮ್ಮ ಹತ್ರ ಓಡಿ ಬರ್ತಾರೆ. ನಮ್ಮ ಗೆಳೆಯರ ಬಗ್ಗೆ ಯೋಚನೆ ಮಾಡೋದಕ್ಕಿಂತ ಜನರ ಬಗ್ಗೆ ಯೋಚನೆ ಮಾಡ್ತಿನಿ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಜ್ಯದಲ್ಲಿ ಸರ್ಕಾರ ಇದ್ದಂತೆ ಕಾಣುತ್ತಿಲ್ಲ,  ಮುಖ್ಯಮಂತ್ರಿಗಳಿಗೆ ಅಧಿಕಾರ ನಡೆಸೋಕೆ ಸ್ವಾತಂತ್ರ್ಯ ಇಲ್ಲ.
ಪಕ್ಷದಲ್ಲಿ ಸಿಎಂ ಜೊತೆ ಯಾರು ಇಲ್ಲ. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಹೈಕಮಾಂಡ್ ಕೊಟ್ಟಿಲ್ಲ. ಬಿಜೆಪಿಯವರ ಕೇಂದ್ರದ ನಿರ್ಧಾರದಿಂದಲೇ ಮಧ್ಯಂತರ ಚುನಾವಣೆ ಬರಬಹುದು. ನಾವ್ಯಾರು ಸರ್ಕಾರ ಬೀಳಿಸುವ ಪ್ರಯತ್ನ ಮಾಡಲೇಬೇಕಿಲ್ಲ, ಬಿಜೆಪಿಯವರ ನಿರ್ಧಾರಗಳಿಂದಲೇ ಮಧ್ಯಂತರ ಚುನಾವಣೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭವಿಷ್ಯ ನುಡಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *