ಹೆಚ್​ಡಿಕೆ. ಹೆಚ್​ಡಿಡಿ, ಸಾರಾ ಮಹೇಶ್ ವಿರುದ್ಧ ಜಿಟಿಡಿ ಕೆಂಡಾಮಂಡಲ..! ಆರೋಪಗಳ ಸುರಿಮಳೆ

ಮೈಸೂರು: ನಾನು ಇವತ್ತು ಸತ್ಯ ಹೇಳ್ತಿನಿ ರಾಜಕೀಯಕ್ಕೆ ತಂದಂತ ಗುರು ನನಗೆ ಯಾರೂ ಇಲ್ಲ ಎಂದು ಮಾಜಿ ಸಚಿವ ಜಿ .ಟಿ ದೇವೇಗೌಡ ಗುರುವಾರ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಜೆಡಿಎಸ್ ಚಿಂತನ ಮಂತನ ಸಭೆಗೆ ನನಗೆ ಆಹ್ವಾನ ಬಂದಿಲ್ಲ. ನನಗೆ ರಾಜಕೀಯ ಗುರುಗಳು ಯಾರೂ ಇಲ್ಲ ಅಂತ ಹೇಳಿದ್ದಿನಿ. ಆದರೆ ದೇವೇಗೌಡರು ಅಥವಾ ಕುಮಾರಸ್ವಾಮಿ ನನ್ನ ಗುರುಗಳು ಅಲ್ಲ ಅಂತ ಹೇಳಿಲ್ಲ. ನಾನು ಸ್ವಂತ ಶಕ್ತಿಯಿಂದ ಬೆಳೆದು ಬಂದವನು. ಇನ್ನೂ ರಾಜಕೀಯವಾಗಿ ಕುಮಾರಸ್ವಾಮಿ, ಸಾರಾ ಮಹೇಶ್ ನಡೆಸಿಕೊಂಡಿದ್ದು ಸರಿಯಲ್ಲ ಎಂದು ಕುಮಾರಸ್ವಾಮಿ ಮತ್ತು ಸಾರಾ ಮಹೇಶ್ ವಿರುದ್ಧ ಆಕ್ರೋಶ ಹೊರಹಾಕಿದರು.

ನನಗೆ ಉಸ್ತುವಾರಿ ಸಚಿವ ಸ್ಥಾನ ಕೊಟ್ಟರು. ಯಾವುದೇ ಕೆಲಸ ಆಗಬೇಕಾದರು ನಾನು ಸಾರಾ ಮಹೇಶ್ ಕುಮಾರಸ್ವಾಮಿಗೆ ಹೇಳಬೇಕು. ನನಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಕೊಟ್ಟಿದ್ದರ ಉದ್ದೇಶ. ನಿಭಾಯಿಸಲು ಸಾಧ್ಯವಾಗದೇ ವಾಪಸ್ ಹೋಗ್ತಾನೆ ಅಂತ. ಆ ವಿಚಾರ ನನಗೆ ಗೊತ್ತಾಗಿ ನಾನು ಹೋಗಿ ಉನ್ನತ ಶಿಕ್ಷಣ ಸಚಿವ ಸ್ಥಾನ ನಿಭಾಯಿಸಿದೆ ಎಂದರು.

ನಾನು ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ. ನಾನು ಸಿದ್ದರಾಮಯ್ಯ ರಾಜಕೀಯ ವಿರೋಧಿಗಳಾಗಿದ್ವಿ. ಆದರೆ ನಾನು ಯಾವತ್ತೂ ಸಿದ್ದರಾಮಯ್ಯ ಮನೆಯವರನ್ನು ದ್ವೇಷ ಮಾಡಿಲ್ಲ. ನಾನು ಮೈತ್ರಿ ಸರ್ಕಾರದಲ್ಲೂ ಹೇಳಿದೆ ಸಿದ್ದರಾಮಯ್ಯ ಪ್ರಬುದ್ಧ ನಾಯಕರು. ಅವರು ಮುಖ್ಯಮಂತ್ರಿ ಆಗಲಿ  ಎಂದು ನಾನು ಹೇಳಿದೆ ಎಂದರು

ಸಾರಾ ಮಹೇಶ್ ನನ್ನ ವಿರುದ್ಧವಾಗಿ ಕೆಲಸ ಮಾಡ್ತಾರೆ. ನನ್ನ ಮಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಬೇಕಾದಾಗ. ಸಾರಾ ಮಹೇಶ್ ವಿರೋಧ ಪಕ್ಷದವರಿಗೆ ಸಹಾಯ ಮಾಡ್ತಾರೆ. ದೇವೇಗೌಡರ ದುಡಿಮೆ ಅವರ ಹೆಸರು ಕುಮಾರಸ್ವಾಮಿ ಸಿಎಂ ಅದರು ಎಂಪಿ ಆದರು. ನನಗೆ ಯಾವುದೇ ಸಪೋರ್ಟ್ ಇಲ್ಲ,  ನಾನೇ ಬೆಳೆದು ಬಂದೆ ಎಂದರು.

ನಾನು ಕೂಲಿ ಕೆಲಸ ಮಾಡೋನು, ದುಡಿದು ತಿಂತಿನಿ. ದೇವರು, ಚಾಮುಂಡೇಶ್ವರಿ ಕ್ಷೇತ್ರದ ಜನರು ಶಕ್ತಿ ತುಂಬ್ತಾರೆ.
ನನಗೆ ಆಗಿರುವ ನೋವು ಎಲ್ಲೂ ಹೇಳಿಲ್ಲ. ಚಿಕ್ಕಮಾದು ಅವರಿಂದ, ಸಾರಾ ಮಹೇಶ್ ರನ್ನು ಇಟ್ಕೋಂಡು ನನಗೆ ನೋವು ಕೊಟ್ಟರು. ಕುಮಾರಸ್ವಾಮಿ ಮೇಲೆ ನಮ್ಮ ಜನರು ನಂಬಿಕೆ ಕಳ್ಕೊಂಡಿದ್ದಾರೆ ಎಂದು ನುಡಿದರು.

ನಾನು 8ನೇ ಕ್ಲಾಸ್ ಓದಿಲ್ಲ ನನಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಕೊಡ್ತಾರೆ. ಈ ರಾಜ್ಯದ ಜನರೇ ನೋಡಿದ್ದಾರೆ ಅವರಿಗೆ ಗೊತ್ತು ನಾನು ಏನೂ ಅಂತ. ನಾನು ಯಾವುದೇ ಚುನಾವಣೆಗೂ ಭಾಗವಹಿಸೋಲ್ಲ. ಹುಣಸೂರು ಉಪಚುನಾವಣೆಗೂ ಭಾಗವಹಿಸೋಲ ಎಂದು ಜಿ .ಟಿ ದೇವೇಗೌಡ ತಿಳಿಸಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *