ಸಪ್ತ ಸಾಗರದಾಚೆ ಕನ್ನಡ ಸಿನಿಮಾದ ಘಮಲು

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚಿನ ಕಮರ್ಷಿಯಲ್ ಸಿನಿಮಾಗಳ ನಡುವೆಯೂ ಅಲ್ಲೊಂದು ಇಲ್ಲೊಂದು ಸಾಮಾಜಿಕ ಕಳಕಳಿಯ ಸಿನಿಮಾಗಳು ಹೆಚ್ಚು ಗಮನ ಸೆಳೀತಿವೆ. ಅದೇ ಹಾದಿಯಲ್ಲಿ ಜ್ಞಾನಂ ಅನ್ನೋ ಸಿನಿಮಾ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡ್ತಿದ್ದು, ಸದ್ಯ ಚಿತ್ರದ ಮನಮುಟ್ಟುವ ಟ್ರೇಲರ್​ವೊಂದು ಹೊರಬಂದಿದೆ.

ಸಪ್ತ ಸಾಗರದಾಚೆ ಕನ್ನಡ ಸಿನಿಮಾದ ಘಮಲು
ಎಲ್ಲೆಲ್ಲೂ ಪ್ರಯೋಗಾತ್ಮಕ ಜ್ಞಾನಂ ಟ್ರೇಲರ್ ಮಜಲು
ಜ್ಞಾನಂ.. ಸಂಪೂರ್ಣ ಹೊಸಬರ ತಂಡವೊಂದು, ವಿಭಿನ್ನ ಕಥಾಹಂದರವನ್ನ ಇಟ್ಕೊಂಡು ತಯಾರು ಮಾಡಿರೋ ಚಿತ್ರ..ಇತ್ತೀಚಿನ ಆ್ಯಕ್ಷನ್, ಲವ್, ಹಾರರ್, ಲವ್​ ಸಿನಿಮಾಗಳ ಅಬ್ಬರದ ನಡುವೆಯೂ ಸಖತ್ ಸುದ್ದಿ ಮಾಡ್ತಿರೋ ಪ್ರಯೋಗಾತ್ಮಕ ಸಿನಿಮಾ. ಕೆಲ ದಿನಗಳ ಹಿಂದಷ್ಟೇ ಜ್ಞಾನಂ ಚಿತ್ರದ ಟೀಸರ್ ತೆರೆಕಂಡಾಗ ಸಿನಿಮಾ ಬಗ್ಗೆ ನಾವೇ ನಿಮಗೆ ಹೇಳಿದ್ವಿ. ಇದೀಗ ಈ ಚಿತ್ರದ ಅದ್ಭುತ ಟ್ರೇಲರ್​ವೊಂದು ತೆರೆಗೆ ಬಂದಿದೆ.

ಜ್ಞಾನಂ ಎರಡು ಬೇರೆ ಬೇರೆ ಪ್ರದೇಶಗಳಲ್ಲಿ ಒಂದೇ ದಿನ ಹುಟ್ಟಿದ ಇಬ್ಬರು ಮಕ್ಕಳ ಕಥೆಯಾಗಿದೆ. ಮಕ್ಕಳಲ್ಲಿ ಒಬ್ಬ ಅಸಮಾನ್ಯ ಬುದ್ಧಿವಂತನಾಗಿದ್ದರೆ ಮತ್ತೊಬ್ಬ ಹೊರ ಜಗತ್ತಿನ ಅರಿವೆ ಇಲ್ಲದಂತೆ ವರ್ತಿಸುವ ಬುದ್ಧಿಮಾಂದ್ಯ ಮಗುವಾಗಿರುತ್ತದೆ. ಇವರಿಬ್ಬರ ಕಥೆಯನ್ನು ಸಮಾಜಕ್ಕೆ ಮೆಸೇಜ್ ಕೊಡುವ ರೀತಿ ನಿರ್ದೇಶಕ ವರದರಾಜ್ ನಿರೂಪಿಸಿದ್ದಾರೆ. ಸದ್ಯ ರಿಲೀಸ್​ ಆಗಿರೋ ಟ್ರೇಲರ್​ನಲ್ಲಿ ಇಬ್ಬರು ಮಕ್ಕಳ ಪರಿಚಯ ಹಾಗೂ 2 ಕುಟುಂಬಗಳ ಪರಿಸ್ಥಿತಿಯ ಒಂದು ಸಣ್ಣ ಝಲಕ್​ನ್ನ ತೋರಿಸಲಾಗಿದೆ. ಟ್ರೇಲರ್ ರಿಲೀಸ್​ ಆದ ಒಂದೇ ದಿನಕ್ಕೆ ಸೋಶೀಯಲ್​ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದು, ಪಾಸಿಟಿವ್​ ರೆಸ್ಪಾನ್ಸ್​ ಪಡೆದುಕೊಂಡಿದೆ.

ಇನ್ನು ಚಿತ್ರದಲ್ಲಿ ಬುದ್ಧಿಮಾಂದ್ಯ ಮಗುವಿನ ಪಾತ್ರವನ್ನು ಧ್ಯಾನ್ ಎಂಬ ಬಾಲಕ ನಿರ್ವಹಿಸಿದ್ದರೆ, ಬುದ್ಧಿವಂತ ಹುಡುಗನಾಗಿ ಲೋಹಿತ್ ಅಭಿನಯಿಸಿದ್ದಾರೆ. ಸುದರ್ಶನ್‌ರವರ ಪತ್ನಿ ಶೈಲಶ್ರೀ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಸಂತೋಷ್ ಕುಮಾರ್, ರಾಧಿಕಾ ಶೆಟ್ಟಿ, ಆಶಾ ಸುಜಯ್, ಜ್ಯೋತಿ ಮುರೂರು ಅಭಿನಯಿಸಿದ್ದಾರೆ. ಈಗಾಗಲೇ ಈ ಚಿತ್ರವು ಯು.ಎಸ್ ನ ಇಂಡಿಯಾ ಫಿಲ್ಮ್ ಫೆಸ್ಟ್ ಅವಾರ್ಡ್ಸ್‌ನಲ್ಲಿ ಭಾಗವಹಿಸಿ ಬೆಸ್ಟ್ ಫಿಲ್ಮ್ ಪ್ರಶಸ್ತಿ ಹಾಗೂ ಕೋಲ್ಕತ್ತಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಆಚ್ಯುಮೆಂಟ್ ಅವಾರ್ಡ್ ಕೂಡ ಪಡೆದುಕೊಂಡಿದೆ. ಸುಮಾರು 11 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಈ ಚಿತ್ರವನ್ನು ವಸಂತ ಸಿನಿ ಕ್ರಿಯೇಷನ್ ಮೂಲಕ ಸಿ.ವೇಣು ಭಾರಧ್ವಾಜ್, ರಾಜು ಭಾರಧ್ವಾಜ್ ನಿರ್ಮಿಸಿದ್ದಾರೆ. ರೋಹಿತ್ ರವರ ಸಂಗೀತ ಸಂಯೋಜನೆಯಲ್ಲಿ ಎರಡು ಹಾಡುಗಳು, ಎರಡು ಬೀಟ್ ಸಾಂಗ್ಸ್ ಚಿತ್ರದಲ್ಲಿ ಇದ್ದು, ನಿರ್ದೇಶಕರೇ ಸಾಹಿತ್ಯ ರಚಿಸಿದ್ದಾರೆ. ಇದೇ ತಿಂಗಳು ಅಂದ್ರೆ ಸೆಪ್ಟೆಂಬರ್ 27ಕ್ಕೆ ಸಿನಿಮಾ ತೆರೆಗೆ ಬರ್ತಿದೆ.
ಅರ್ಚನಾಶರ್ಮಾ, ಎಂಟರ್​ಟೈನ್ಮೆಂಟ್​ ಬ್ಯುರೋ, ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *