ಕರ್ನಾಟಕ ರಕ್ಷಣಾ ವೇದಿಕೆಗೂ, ಒಕ್ಕಲಿಗರ ಪ್ರತಿಭಟನೆಗೂ ಸಂಬಂಧವಿಲ್ಲ -ನಾರಾಯಣ ಗೌಡ

ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ, ಕೇಂದ್ರ ಸರ್ಕಾರ ತುಳಿಯುವ ಕೆಲಸ ಮಾಡುತ್ತಿದೆ ಎಂದು ಕೇಂದ್ರದ ವಿರುದ್ಧ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು ಹೇಳಿದರು.

ನಗರದಲ್ಲಿಂದು ಡಿಕೆಶಿಯವರ ಬಂಧನವನ್ನು ಖಂಡಿಸಿ ಒಕ್ಕಲಿಗರ ಪ್ರತಿಭಟನೆ ಹಮ್ಮಿಕೊಂಡ ಹಿನ್ನಲೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಿಕೆಶಿ ಅವರು ಇಡಿ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಹೀಗಿದ್ದರೂ ಅನಗತ್ಯವಾಗಿ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ನಾರಾಯಣ ಗೌಡ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಅವರು, ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿರುವುದು ಮೆಲ್ನೋಟಕ್ಕೆ ಕಾಣುತ್ತದೆ. ನಾನು ಇಲ್ಲಿ ಒಕ್ಕಲಿಗ ಸಮುದಾಯ ವ್ಯಕ್ತಿಯಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇನೆ. ಪ್ರತಿಭಟನೆಗೂ ಕರ್ನಾಟಕ ರಕ್ಷಣಾ ವೇದಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಸ್ಪಷ್ಟನೆ ನೀಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದವರನ್ನು ಕರೆದಿದ್ದೇವೆ ಎಲ್ಲರೂ ಬರುತ್ತಾರೆ. ನಾರಾಯಣ ಗೌಡರು ರಾಜಕೀಯ ಧುಮುಕುತ್ತಾರೆ ಹೀಗಾಗಿ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಪ್ರಶ್ನೆಗೆ, ನಾನು ರಾಜಕೀಯಗೆ ಇಳಿಬೇಕಿದ್ದರೆ ಯಾವುತ್ತೋ ಇಳಿಯುತ್ತಿದ್ದೆ. ಈ ಪ್ರತಿಭಟನೆಯಲ್ಲಿ ನನಗೆ ಜಾತಿ ರಾಜಕಾರಣ ಮಾಡುವುದು ಅಗತ್ಯವಿಲ್ಲ ಎಂದು ಕರವೇ ಅಧ್ಯಕ್ಷ ತಿಳಿಸಿದರು.

ಸುಮಾರು 10 ಗಂಟೆಗೆ ಎಲ್ಲರೂ ಸೇರಿ 12 ಗಂಟೆಗೆ ರ್ಯಾಲಿ ಫ್ರೀಡಂ ಪಾರ್ಕಗೆ ಹೋಗಿ ತಲುಪುತ್ತದೆ. ಅಲ್ಲಿಂದ ರಾಜ್ಯಪಾಲರಿಗೆ ಭೇಟಿಯಾಗಿ ಮನವಿ ಕೊಡುತ್ತವೆ ಎಂದರು.

Recommended For You

About the Author: TV5 Kannada

Leave a Reply

Your email address will not be published. Required fields are marked *