ಪ್ರತಿಭಟನೆ ಕುರಿತು ಸಂಸದ ಡಿ.ಕೆ.ಸುರೇಶ್ ಮನವಿ ಮಾಡಿದ್ದು ಹೀಗೆ..?

ಬೆಂಗಳೂರು: ಬೆಂಗಳೂರಿನಲ್ಲಿ ಒಕ್ಕಲಿಗ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿಯಲಿವೆ. ಹೀಗಾಗಿ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇಂದು ನಗರದೆಲ್ಲೆಡೆ ಖಾಕಿ ಸರ್ಪಗಾವಲು ಇರಲಿದೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ರಾಮನಗರ ಹೊತ್ತಿ ಉರಿದಿತ್ತು. ಇದೀಗ ಒಕ್ಕಲಿಗರ ಸಂಘಗಳ ಒಕ್ಕೂಟ ಬೀದಿಗಿಳಿಯಲಿದೆ. ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಹೀಗಾಗಿ ಪ್ರತಿಭಟನೆ ನಡೆಯುವ ಸ್ಥಳದಲ್ಲಿ ಮತ್ತು ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಅಹಿತಕರ ಘಟನೆ ನಡೆದರೆ ಆಯೋಜಕರೇ ನೇರ ಹೊಣೆ ಅಂತ ಷರತ್ತು ವಿಧಿಸಿರುವ ಪೊಲೀಸರು, ನಿಗದಿತ ರಸ್ತೆಯಲ್ಲಿ ಮಾತ್ರ ಮೆರವಣಿಗೆಗೆ ಅವಕಾಶ ನೀಡಿದ್ದಾರೆ. ಅಲ್ಲದೇ ಯಾವುದೇ ಪ್ರಚೋದನಾಕಾರಿ ಹೇಳಿಕೆ ನೀಡುವಂತಿಲ್ಲ ಎಂದು ಎಚ್ಚರಿಸಿದ್ದು, ಸಾರ್ವಜನಿಕ ರಸ್ತೆಗೆ ಅಡಚಣೆಯಾಗದಂತೆ ಮೆರವಣಿಗೆ ಸಾಗಬೇಕು ಅಂತ ತಿಳಿಸಿದ್ದಾರೆ. ಇನ್ನು ದೊಡ್ಡ ಮಟ್ಟದ ಧ್ವನಿ ವರ್ಧಕಗಳನ್ನ ಬಳಸುವಂತಿಲ್ಲ ಅಂತ ಸೂಚಿಸಿದ್ದಾರೆ.

ಅಲ್ಲದೇ ಅನುಮತಿ ಪಡೆದ ಸ್ಥಳದಲ್ಲೇ ಪ್ರತಿಭಟನೆ ನಡೆಸಬೇಕು, ರಸ್ತೆ ಬಂದ್ ಮಾಡುವಂತಿಲ್ಲ, ಮೆರವಣಿಗೆ ದಾರಿಯಲ್ಲಿ ಪಟಾಕಿ, ಬೆಂಕಿ ಹಚ್ಚುವಂತಿಲ್ಲ, ಮೆರವಣಿಗೆ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಬೇಕು, ಯಾವುದೇ ಅಂಗಡಿ ಮುಂಗಟ್ಟು ಬಲವಂತವಾಗಿ ಮುಚ್ಚುವಂತಿಲ್ಲ ಎಂದು ಸೆಕ್ಷನ್ 107ರ ಅನ್ವಯ ಆಯೋಜಕರಿಂದ ಬಾಂಡ್ ಬರೆಸಿಕೊಂಡು ಅನುಮತಿ ನೀಡಲಾಗಿದೆ.

ಇನ್ನು ಪ್ರತಿಭಟನಾ ಮೆರವಣಿಗೆ ಸಾಗುವ ಮಾರ್ಗ ನೋಡೋದಾದರೆ, ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಿಂದ ರ್ಯಲಿ ಪ್ರಾರಂಭವಾಗಲಿದ್ದು, PMK ರಸ್ತೆ – ವಾಣಿ ವಿಲಾಸ ರಸ್ತೆ, ನ್ಯಾಷನಲ್ ಕಾಲೇಜ್ ಜಂಕ್ಷನ್, ಸಜ್ಜನ್ ರಾವ್ ಸರ್ಕಲ್, ಮಿನರ್ವ ಸರ್ಕಲ್, JC ರಸ್ತೆ, ಶಿವಾಜಿ ಜಂಕ್ಷನ್, ಟೌನ್ ಹಾಲ್, NR ಜಂಕ್ಷನ್, KG ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಕನಕದಾಸ ವೃತ್ತ, ಕಾಳಿದಾಸ ರಸ್ತೆ ಮೂಲಕ ಫ್ರೀಡಂ ಪಾರ್ಕ್ ತಲುಪಲಿದೆ.

ಈ ಮಧ್ಯೆ ಡಿಕೆಶಿ ಮಾತ್ರವಲ್ಲ ಅವರ ಪುತ್ರಿಗೂ ಈಗ ಸಂಕಷ್ಟ ಎದುರಾಗಿದೆ.  ಹಿರಿಯ ಪುತ್ರಿ ಐಶ್ವರ್ಯಾಗೆ ಇಡಿ ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮತ್ತೊಂದೆಡೆ ಡಿಕೆ ಸುರೇಶ್, ಶಾಂತಿಯುತ ಪ್ರತಿಭಟನೆಗೆ ಮನವಿ ಮಾಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *