Top

ಪೈಲ್ವಾನ್ ವಿತರಣೆಯನ್ನು ವಹಿಸಿಕೊಂಡಿದ್ದು ಯಾರು ಗೊತ್ತಾ..?

ಪೈಲ್ವಾನ್ ವಿತರಣೆಯನ್ನು ವಹಿಸಿಕೊಂಡಿದ್ದು ಯಾರು ಗೊತ್ತಾ..?
X

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಪೈಲ್ವಾನ್‌ ಫೀವರ್‌ ಜೋರಾಗಿದೆ. ನಟ ಕಿಚ್ಚ ಸುದೀಪ್​​​ ಅಭಿನಯದ ಪೈಲ್ವಾನ್ ಸಿನಿಮಾ ನಾಳೆ ವಿಶ್ವದಾದ್ಯಂತ ತೆರೆಕಾಣುತ್ತಿದೆ.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಪೈಲ್ವಾನ್ ರಿಲೀಸ್ ಆಗ್ತಾ ಇದ್ದು, ಬರೋಬ್ಬರಿ 3 ಸಾವಿರ ಸ್ಕ್ರೀನ್ಸ್​​ಗಳಲ್ಲಿ ತೆರೆಕಾಣಲಿದೆ.

ಇನ್ನು ಪೈಲ್ವಾನ್ ವಿತರಣೆಯನ್ನು KGF ಖ್ಯಾತಿಯ ಕಾರ್ತಿಕ್ ಗೌಡ ವಹಿಸಿಕೊಂಡಿದ್ದು, ಕೆಜಿಎಫ್ ನಂತರ ಪೈಲ್ವಾನ್​​​ ಬಹುರಾಜ್ಯಗಳಲ್ಲೂ ರಿಲೀಸ್ ಆಗ್ತಿದೆ. ಕೇಕ್​​ ಕಟ್​​ ಮಾಡುವ ಮೂಲಕ ಚಿತ್ರತಂಡ ಸಂಭ್ರಮಿಸಿದ್ದು, ಎಸ್.ಕೃಷ್ಣ ನಿರ್ದೇಶನದಲ್ಲಿ ಗುರುವಾರ ತೆರೆಗೆ ಬರ್ತಿದೆ.

ಇನ್ನೂ ಕಿಚ್ಚ ಸುದೀಪ್, ಸಲ್ಮಾನ್ ಖಾನ್ ನಟನೆಯ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ಕನ್ನಡದ ಪ್ರಭುದೇವ ನಿರ್ದೇಶನ ಹಾಗೂ ಸಲ್ಲು ನಿರ್ಮಾಣದ ದಬಾಂಗ್​​​ 3 ಚಿತ್ರ ಡಿಸೆಂಬರ್​​ 20ರಂದು ರಿಲೀಸ್​​ ಆಗ್ತಾ ಇದ್ದು, ಸಲ್ಲು ರಗಡ್​​​​ ಲುಕ್​​ನಲ್ಲಿರೋ ಕನ್ನಡ ಅವತರಣಿಕೆಯ ದಬಾಂಗ್ 3ರ ಪೋಸ್ಟರ್ ಸದ್ಯ ರಿವೀಲ್​​ ಆಗಿದೆ.

Next Story

RELATED STORIES