ಜಾರಕಿಹೊಳಿ ಬ್ರದರ್ಸ್ ಕಿತ್ತಾಟ ಮತ್ತೆ ತಾರಕಕ್ಕೆ..!

ಬೆಳಗಾವಿ: ಜಾರಕಿಹೊಳಿ ಸಹೋದರರ ಜಗಳ ಮತ್ತೆ ತಾರಕಕ್ಕೆರಿದೆ ಇದೀಗ ಹೊಸ ತಿರುವು ಪಡೆದಿದೆ. ಅನರ್ಹ ಶಾಸಕ ರಮೇಶ್​​ ಜಾರಕಿಹೊಳಿ ಮತ್ತು ಮಾಜಿ ಸಚಿವ ಸತೀಶ್ ಜಾರಕಿಹೊಳಿ ನಡುವಿನ ಕದನ ಈಗ ವಿಕೋಪಕ್ಕೆ ಹೋಗುವ ಲಕ್ಷಣ ಕಾಣುತ್ತಿದೆ. ಇದರಲ್ಲಿ ಅಧಿಕಾರಿಗಳು ಹೈರಾಣಾಗುವಂತಾಗಿದೆ.

ಜಾರಿಕಿಹೊಳಿ ಬ್ರದರ್ಸ್ ಕಿತ್ತಾಟ ಮತ್ತೆ ತಾರಕಕ್ಕೆ ಏರಿದೆ.  ರಮೇಶ್ ಜಾರಕಿಹೊಳಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸತೀಶ್ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.

ಗೋಕಾಕ ಕ್ಷೇತ್ರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಅಳಿಯ ಅಂಬಿರಾಯ್ ಪಾಟೀಲ್ ಒಪ್ಪಿಗೆ ಪಡೆಯಿರಿ ಎಂದು ರಮೇಶ್ ಜಾರಕಿಹೊಳಿ ಅವರು ಖಡಕ್ ಸೂಚನೆ ನೀಡಿದ್ದರು. ಹೀಗಾಗಿ ರಮೇಶ್ ಜಾರಕಿಹೊಳಿ ನಡವಳಿಕೆಯ ವಿರುದ್ಧ ಸತೀಶ್ ಜಾರಕಿಹೊಳಿ ಬುಧವಾರ ಗರಂ ಆಗಿದ್ದಾರೆ.

ಗೋಕಾಕ ತಾಲೂಕಿನ ಅಧಿಕಾರಿಗಳಿಗೆ ರಮೇಶ್ ಜಾರಕಿಹೊಳಿ ಸೂಚನೆಗೆ, ಸತೀಶ್ ಜಾರಕಿಹೊಳಿ ಕೆರಳಿ, ಅಂಬಿರಾಯ್ ಪಾಟೀಲ್ ಮಾತು ಕೇಳಿ ಅಧಿಕಾರಿಗಳು ಕಾನೂನು ಬಾಹಿರ ಕೆಲಸ ಮಾಡಿದರೆ ನಾನು ಸುಮ್ಮನೆ ಇರಲ್ಲ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ ಇದೆ ರೀತಿ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಅವರು ತನ್ನ ಅಳಿಯನ ದರ್ಪ ತೋರಿಸಿದರೆ ಮುಂದಿನ ದಿನಗಳಲ್ಲಿ ಬಹಿರಂಗ ಪ್ರತಿಭಟನೆ ಮಾಡುವ ಕುರಿತು ಸತೀಶ್ ಜಾರಕಿಹೊಳಿ ಎಚ್ಚರಿಕೆ ಸಂದೇಶ ನೀಡಿದರು.

ಈ ಹಿಂದೆ ಸತೀಶ್ ಜಾರಕಿಹೊಳಿ ಅವರು ಅಂಬಿರಾಯ್ ಪಾಟೀಲ್ ಸಾಮ್ರಾಜ್ಯ ಕೊಚ್ಚಿ ಹೋಗಲಿದೆ ಎಂದಿದ್ದರು. ಸದ್ಯ ಜಾರಕಿಹೊಳಿ ಬ್ರದರ್ಸ್ ಕದನದಲ್ಲಿ ಅಲ್ಲಿನ ಅಧಿಕಾರಿಗಳು ಸಿಲುಕಿ ಹೈರಾಣಾಗುತ್ತಿರುವುದು ಮೆಲ್ನೋಟಕ್ಕೆ ಕಾಣುತ್ತಿದೆ.

Recommended For You

About the Author: TV5 Kannada

Leave a Reply

Your email address will not be published. Required fields are marked *