Top

ರಸ್ತೆಗಳು ಚೆನ್ನಾಗಿರೋ ಕಾರಣ ಅಪಘಾತಗಳು ಹೆಚ್ಚಾಗುತ್ತಿದೆ - ಗೋವಿಂದ್ ಕಾರಜೋಳ

ರಸ್ತೆಗಳು ಚೆನ್ನಾಗಿರೋ ಕಾರಣ ಅಪಘಾತಗಳು ಹೆಚ್ಚಾಗುತ್ತಿದೆ - ಗೋವಿಂದ್ ಕಾರಜೋಳ
X

ಚಿತ್ರದುರ್ಗ: ನಾನೂ ಕೂಡ ಈ ಹೊಸ ಮೋಟಾರು ವಾಹನ ಕಾಯ್ದೆಯನ್ನು ವಿರೋಧಿಸುತ್ತೇನೆ. ದೇಶದಲ್ಲಿ ಸುರಕ್ಷತೆ ದೃಷ್ಟಿಯಿಂದ ವಾಹನ ಕಾಯ್ದೆ ತಿದ್ದುಪಡಿ ತರಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರು ಬುಧವಾರ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದುಬಾರಿ ದಂಡಕ್ಕೆ ನನ್ನ ಸಹಮತ ಇಲ್ಲ. ಗುಜರಾತ್ ಮಾದರಿಯಲ್ಲಿ ದಂಡ ವಿನಾಯಿತಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ ಎಂದು ಡಿಸಿಎಂ ಅವರು ತಿಳಿಸಿದರು.

ಇದೇ ವೇಳೆಯಲ್ಲಿ ದೇಶದಲ್ಲಿ ಪ್ರತಿದಿನ 10 ಸಾವಿರ ರಸ್ತೆ ಅಪಘಾತಗಳು ನಡೆಯುತ್ತಿವೆ. ರಸ್ತೆಗಳು ಚನ್ನಾಗಿರೋ ಕಾರಣದಿಂದ ಅಪಘಾತ ಹೆಚ್ಚಾಗುತ್ತಿವೆ. ರಸ್ತೆಗಳು ಅಭಿವೃದ್ಧಿಯಾಗಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಗೋವಿಂದ್ ಕಾರಜೋಳ ಅವರು ವಿವಾದಾತ್ಮಕ ಹೇಳಿಕೆ ನೀಡಿದರು.

ಈ ಹಿಂದೆ ಕಾಂಗ್ರೆಸ್​ನ ಅನೇಕ ನಾಯಕರು ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆಯನ್ನು ವಿರೋಧಿಸಿದ್ದರು. ಈಗ ಸ್ವತಃ ರಾಜ್ಯ ಬಿಜೆಪಿ ಸರ್ಕಾರದ ಡಿಸಿಎಂ ಗೋವಿಂದ್ ಕಾರಜೋಳ ಅವರೇ ಈಗ ವಿರೋಧಿಸಿದ್ದು ಎಲ್ಲರ ಕಣ್ಣು ಹುಬ್ಬೆರೆಸುವಂತೆ ಮಾಡಿದೆ.

Next Story

RELATED STORIES