ಗೀತಾ ಚಿತ್ರದಲ್ಲಿ ಗಣೇಶ್ ಪಾತ್ರವೇನು..? ಇದು ಯಾವ ಸ್ಟೋರಿ ಗೊತ್ತಾ..?

ಗೋಕಾಕ್​ ಚಳುವಳಿ.. ಕರ್ನಾಟಕ ಇತಿಹಾಸದಲ್ಲಿ ಎಂದು ಮರೆಯದ ಹೋರಾಟ. ಗೋಕಾಕ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಸಾಹಿತಿಗಳೆಲ್ಲ ಚಳುವಳಿಗೆ ಮುಂದಾದರು. ಚಳುವಳಿಗೆ ಜನರನ್ನ ಸೇರಿಸೋಕೆ ಅಣ್ಣಾವ್ರೇ ಬರಬೇಕಾಯ್ತು. ಇಂತಹ ಭಾಷಾಭಿಮಾನದ ಹೋರಾಟದ ಹಿನ್ನಲೆಯಲ್ಲಿ ಕನ್ನಡದ ಗೀತಾ ಸಿನಿಮಾ ನಿರ್ಮಾಣವಾಗಿದೆ.

ಕನ್ನಡ ಚಳುವಳಿ.. ಕನ್ನಡದ ಕಟ್ಟಾಳು..ಗೀತಾ ಪ್ರೇಮಿ
ತಾಯ್ನುಡಿ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಚಿನ್ನದ ಹುಡ್ಗ
ಗೀತಾ.. ಗೋಲ್ಡನ್​ ಸ್ಟಾರ್​ ಗಣೇಶ್​ ಸಿನಿಕರಿಯರ್​ನಲ್ಲೇ ಬಹಳ ವಿಶೇಷವಾದ ಸಿನಿಮಾ. ಸಂತೋಷ್​ ಆನಂದ್​​ ರಾಮ್​ ಶಿಷ್ಯ ವಿಜಯ್ ನಾಗೇಂದ್ರ, ಚೊಚ್ಚಲ ಪ್ರಯತ್ನ. ಈಗಾಗಲೇ ಟೀಸರ್​​ ಮತ್ತು ಲಿರಿಕಲ್​ ವೀಡಿಯೋ ಸಾಂಗ್ಸ್​ನಿಂದ ಕುತೂಹಲ ಕೆರಳಿಸಿದ್ದ, ಗೀತಾ ಚಿತ್ರದ ಅಫೀಷಿಯಲ್ ಟ್ರೈಲರ್​ ಹೊರಬಂದಿದೆ. ಗಣೇಶ್​​​​​ ಜೊತೆಗೆ ಶಾನ್ವಿ ಶ್ರೀವಾಸ್ತವ, ಪಾರ್ವತಿ, ದೇವರಾಜ್​, ಸುಧಾರಾಣಿ, ರಂಗಾಯಣ ರಘು, ರವಿಶಂಕರ್​​ ಗೌಡ ಚಿತ್ರದ ಮುಖ್ಯಭೂಮಿಕೆಯಲ್ಲಿದೆ.

ಕನ್ನಡ ಭಾಷೆಯನ್ನೇ ಉಸಿರಾಗಿಸಿಕೊಂಡ ಕನ್ನಡಿಗನ ಕಥೆ ಗೀತಾ. ಭಾಷೆಯ ರಕ್ಷಣೆಗೆ ಆತ ನಡೆಸುವ ಹೋರಾಟ, ಆತನ ಬದುಕಿನಲ್ಲಿ ಬಂದೋಗುವ ಹುಡುಗಿಯರು. ಹೀಗೆ ಬಹಳ ವಿಭಿನ್ನವಾದ ಮತ್ತು ಅಷ್ಟೇ ಸೊಗಸಾದ ಎಳೆಯನ್ನ ಇಟ್ಟುಕೊಂಡು ಗೀತಾ ಸಿನಿಮಾ ಕತೆ ಹೆಣೆಯಲಾಗಿದೆ. 80ರ ದಶಕದ ಕಾಲಘಟ್ಟದಲ್ಲಿ ಈ ಸಿನಿಮಾ ಕತೆಯನ್ನ ಕಟ್ಟಿಕೊಡ್ತಿದ್ದು, 2 ಶೇಡ್​ಗಳಿರೋ ಪಾತ್ರದಲ್ಲಿ ಗಣಿ ಮಿಂಚಿದ್ದಾರೆ. ಗೋಕಾಕ್​ ಚಳುವಳಿಯ ದೃಶ್ಯಗಳನ್ನು ಗೀತಾ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

ಅಣ್ಣಾವ್ರ ಗೋಕಾಕ್​ ಅಖಾಡದಲ್ಲಿ ಶಿಸ್ತಿನ ಕನ್ನಡ ಸೈನಿಕ
ಡಾ. ರಾಜ್​ ಹೋರಾಟಕ್ಕೆ ಕೈ ಜೋಡಿಸಿದ ಗಣೇಶ್..!
1982ರಲ್ಲಿ ನಡೆದ ಗೋಕಾಕ್ ಚಳುವಳಿ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಸಾಹಿತಿಗಳ ಕರೆಗೆ ಓಗೊಟ್ಟು ರಾಜ್ ಕುಮಾರ್ ಚಳುವಳಿಗೆ ಧುಮುಕಿದರು. ಅಣ್ಣಾವ್ರು ಹೋದಲ್ಲೆಲ್ಲ ಜನ ಸೇರಿದ್ರು. ನಾಡಿನ ಮೂಲೆ ಮೂಲೆಗೂ ಹೋದ ಚಳುವಳಿಗಾರರು ಕನ್ನಡ ಪ್ರೇಮವನ್ನು ಜಾಗೃತಗೊಳಿಸಿದರು. ಚಳುವಳಿಯ ತೀವ್ರತೆಗೆ ಸರ್ಕಾರ ಮಣಿದಿತ್ತು, ಅಣ್ಣಾವ್ರ ಶಕ್ತಿ ದೇಶಕ್ಕೆ ಗೊತ್ತಾಗಿತ್ತು. ಇಂತಹ ಗೋಕಾಕ್​ ಚಳುವಳಿಯ ಹಿನ್ನಲೆಯಲ್ಲಿ ಗೀತಾ ಸಿನಿಮಾ ಕಥೆ ಸಾಗುತ್ತೆ.. ಅಂದು ಅಣ್ಣಾವ್ರ ಜೊತೆ ಗೋಕಾಕ್​ ಚಳುವಳಿಯಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ರು. ಅಂತಹ ಹೋರಾಟಗಾರರಲ್ಲಿ ಒಬ್ಬರಾಗಿ ಗಣೇಶ್​​ ನಟಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಕನ್ನಡಿಗನೇ ಸಾರ್ವಭೌಮ

ಗೋಲ್ಡನ್​ ಸ್ಟಾರ್​​ ಮಾಸ್​​ ಪಂಚಿಂಗ್​ ಡೈಲಾಗ್ಸ್ ಸೂಪರ್
ಸಖತ್ ಮೇಕಿಂಗ್..ಕ್ವಾಲಿಟಿ ವಿಷ್ಯುವಲ್ಸ್.. ಚಿಂದಿ ಬಿಜಿಎಂ
ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದ್ದು, ಟ್ರೈಲರ್​​ ಹೊಸ ಫೀಲ್​ ಕೊಡುವಂತಿದೆ.. ಮನಾಲಿ, ಕೊಲ್ಕತ್ತಾ, ಮೈಸೂರು, ಹೈದರಾಬಾದ್, ಬೆಂಗಳೂರು ಸೇರಿದಂತೆ ಅದ್ಭುತ ಲೊಕೇಶನ್​ಗಳಲ್ಲಿ ಸಿನಿಮಾ ಶೂಟಿಂಗ್​ ನಡೆದಿದೆ. ಎರಡೂವರೆ ನಿಮಿಷದ ಟ್ರೈಲರ್​​​​ ಸಿಕ್ಕಾಪಟ್ಟೆ ಕಲರ್​ಫುಲ್​​​ ಮತ್ತು ಅಷ್ಟೆ ಇಂಟ್ರೆಸ್ಟಿಂಗ್​ ಆಗಿದೆ. ಅನೂಪ್​ ರುಬೆನ್ಸ್​ ಬಿಜಿಎಂ ಮತ್ತೊಂದು ಪ್ಲಸ್​ ಪಾಯಿಂಟ್.

ಕನ್ನಡ ಹೋರಾಟಗಾರನಾಗಿ ಗೋಲ್ಡನ್​ ಸ್ಟಾರ್​ ಜಬರ್​ದಸ್ತ್​ ಡೈಲಾಗ್​ಗಳನ್ನ ಹೊಡೆದಿದ್ದಾರೆ. ನಿಜವಾದ ಕನ್ನಡ ಹೋರಾಟಗಾರನ ಪ್ರತಿನಿಧಿಯಾಗಿ ಅವರ ಡೈಲಾಗ್ಸ್​ ಚಿತ್ರಮಂದಿರದಲ್ಲಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸೋದು ಗ್ಯಾರೆಂಟಿ.

ಕನ್ನಡಾಭಿಮಾನದ ಜೊತೆ ಗಣಿ ಪ್ರೀತಿ, ಪ್ರೇಮ, ತ್ಯಾಗ
ಕಂಪ್ಲೀಟ್​​ ಫ್ಯಾಮಿಲಿ ಎಂಟ್ರಟ್ರೈನರ್ ಸಿನಿಮಾ ಗೀತಾ
ಗೀತಾ ಚಿತ್ರದಲ್ಲಿ ಸುಧಾರಾಣಿ, ಗಣೇಶ್​​ ತಾಯಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಲವರ್​ ಬಾಯ್​ ಆಗಿಯೇ ಚಿರಪರಿಚಿತರಾಗಿರೋ ಗಣೇಶ್​, ಈ ಚಿತ್ರದಲ್ಲಿ ಕನ್ನಡ ಹೋರಾಟಗಾರನಾಗಿ ಬಣ್ಣ ಹಚ್ಚಿರೋದೇನೋ ನಿಜ. ಆದ್ರೆ, ಇದರ ಜೊತೆಗೆ ಇಬ್ಬರು ಹುಡುಗಿಯರ ಪ್ರೇಮಿಯಾಗಿಯೂ ಗಣಿ ಮಿಂಚಿದ್ದಾರೆ. ಶಾನ್ವಿ ಶ್ರೀವಾಸ್ತವ ಮತ್ತು ಪಾರ್ವತಿ ನಾಯಕಿಯರಾಗಿ ಗಣಿಗೆ ಸಾಥ್​ ಕೊಟ್ಟಿದ್ದಾರೆ. ಲವ್​, ರೊಮ್ಯಾನ್ಸ್, ಆ್ಯಕ್ಷನ್, ಎಮೋಷನ್​ ಹೀಗೆ ಎಲ್ಲಾ ಅಂಶಗಳನ್ನ ಬೆರಸಿ, ಗೀತಾ ಸಿನಿಮಾ ಕಥೆ ಹೇಳ್ತಿದ್ದು, ಅದನ್ನೇ ಈ ಟ್ರೈಲರ್​ ಕೂಡ ಸಾರಿ ಸಾರಿ ಹೇಳ್ತಿದೆ.

ಈಗಾಗಲೇ ಅನೂಪ್ ರುಬೆನ್ಸ್​ ಮ್ಯೂಸಿಕ್​ ಸಖತ್ ಸೌಂಡ್ ಮಾಡ್ತಿದೆ. ಸ್ಯಾಂಪಲ್​ಗಳಲ್ಲಿ ಶ್ರೀಶ ಕೂದುವಳ್ಳಿ ಛಾಯಾಗ್ರಹಣ ಗಮನ ಸೆಳೀತಿದೆ. ಸಯ್ಯದ್​​ ಸಲಾಂ ಮತ್ತು ಶಿಲ್ಪಾ ಗಣೇಶ್​ ಜಂಟಿಯಾಗಿ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಸೆಪ್ಟೆಂಬರ್ 27ಕ್ಕೆ ತೆರೆಮೇಲೆ ಸ್ವಾಭಿಮಾನಿ ಕನ್ನಡಿಗನ ಹೋರಾಟ ಅನಾವರಣವಾಗ್ತಿದ್ದು, ಅದನ್ನ ನೋಡಿ ಜೈಕಾರ ಹಾಕೋಕ್ಕೆ ನೀವು ರೆಡಿಯಾಗಿ.
ನಾಣಿ.. ಎಂಟ್ರಟ್ರೈನ್​ಮೆಂಟ್​ ಬ್ಯೂರೋ ಟಿವಿ5..

Recommended For You

About the Author: Dayakar

Leave a Reply

Your email address will not be published. Required fields are marked *