Top

ಮಾಜಿ ಸಚಿವ ಡಿ .ಕೆ ಶಿವಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸ..!

ಮಾಜಿ ಸಚಿವ ಡಿ .ಕೆ ಶಿವಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸ..!
X

ನವದೆಹಲಿ: ಮಾಜಿ ಸಚಿವ ಡಿ .ಕೆ ಶಿವಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ವೈದ್ಯರು ಅವರನ್ನು ತಪಾಸಣೆ ನಡೆಸುತ್ತಿದ್ದಾರೆ.

ಆರ್‌ಎಂಎಲ್‌ ಆಸ್ಪತ್ರೆ ಇಂದ ವೈದ್ಯರು ಆಗಮನವಾಗಿದ್ದು, ಡಿ .ಕೆ ಶಿವಕುಮಾರ್ ಅವರ ಬಿಪಿ ಹೈ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ನಿನ್ನೆ ಪುತ್ರಿಗೆ ಇಡಿ ಅಧಿಕಾರಿಗಳು ನೋಟಿಸ್​ ನೀಡಿದ ನಂತರ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿದು ಬಂದಿದೆ.

ನಿನ್ನೆ ಇಡಿ ಅಧಿಕಾರಿಗಳು ಡಿಕೆಶಿ ಹಿರಿಯ ಪುತ್ರಿ ಐಶ್ವರ್ಯಳಿಗೂ ಕೂಡ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಐಶ್ವರ್ಯಾಗೆ, ಸೆಪ್ಟೆಂಬರ್ 12.ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿಮಾಡಲಾಗಿದೆ. ಡಿಕೆಶಿ ಪುತ್ರಿಯ ಹೆಸರಿನಲ್ಲೂ ಕೋಟಿ ಕೋಟಿ ಹಣ ಇನ್ವೆಸ್ಟ್ ಮಾಡಿದ್ದು, ಪುತ್ರಿಯ ಆಸ್ತಿಯ ಬಗ್ಗೆಯೂ ಡಿಕೆಶಿ ತೆರಿಗೆ ಇಲಾಖೆಗೆ ದಾಖಲೆ ಒದಗಿಸಿದ್ದರು.

ಆದರೆ ದಾಖಲೆಗಳ ಹೊಂದಾಣಿಕೆಯಾಗುತ್ತಿಲ್ಲವೆಂಬ ಹಿನ್ನೆಲೆ, ಪುತ್ರಿ ಐಶ್ವರ್ಯಗೂ ಇಡಿ ನೊಟೀಸ್ ಇಶ್ಯೂ ಮಾಡಿದೆ. ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿ ನೊಟೀಸ್ ಜಾರಿಮಾಡಲಾಗಿದೆ. ಈ ವಿಚಾರ ತಿಳಿದ ನಂತರ ಡಿ ಕೆ ಶಿವಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

Next Story

RELATED STORIES