ಹೊಸ ಟ್ರಾಫಿಕ್ ರೂಲ್ಸ್ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದೇನು..?

ರಾಮನಗರ: ಬೆಂಗಳೂರಿನಲ್ಲಿಂದು ಡಿಕೆಶಿ ಬಂಧನ ಖಂಡಿಸಿ, ಒಕ್ಕಲಿಗರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಬಗ್ಗೆ ರಾಮನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿನ ಕಾರ್ಯಕ್ರಮ ಈ ಮೊದಲೇ ನಿಗದಿಯಾಗಿತ್ತು. ಹಾಗೇ ನನಗೆ ಪ್ರತಿಭಟನೆಗೆ ಆಹ್ವಾನವಿರಲಿಲ್ಲ. ಆದರೂ ಕೂಡ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ನನಗೆ ಮೊದಲೇ ಆಹ್ವಾನ ನೀಡಿದ್ದರೆ ನಾನು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದೆ ಎಂದು ಹೇಳಿದರು.

ಮುಂದೆ ಕುಮಾರಸ್ವಾಮಿಯನ್ನು ಬಂಧಿಸುತ್ತಾರೆಂದು ಜಾಹೀರಾತಿನಲ್ಲಿ ಫೋಟೋ ಹಾಕಿದ್ದರ ಬಗ್ಗೆ ಮಾತನಾಡಿದ ಹೆಚ್ಡಿಕೆ, ಆದರೆ ಈ ಕುಮಾರಸ್ವಾಮಿಯನ್ನ ಯಾರು ಏನು ಮಾಡೋಕ್ಕಾಗಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

ಇನ್ನು ನೂತನ ಮೋಟಾರ್ ವಾಹನ ಕಾಯ್ದೆ ಅನ್ವಯವಾಗಿದ್ದ ಬಗ್ಗೆ ಮಾತನಾಡಿದ ಹೆಚ್ಡಿಕೆ, ಈಗಿನ ಸರ್ಕಾರ ಜನಸಾಮಾನ್ಯರಿಗೆ ಅನುಕೂಲವಾಗುವ ತೀರ್ಮಾನವನ್ನ ಮಾಡಬೇಕು. ಈಗ ನನ್ನ ಕೈಯಲ್ಲಿ ಅಧಿಕಾರವಿಲ್ಲ. ಆದರೆ ನೋಡೋಣ ಅವರೇನು ಮಾಡ್ತಾರೆಂದು ಕಾಯೋಣ. ಬಿಜೆಪಿಯಲ್ಲಿ ಅವರಿಗೆ ಗೊತ್ತುಗುರಿಯಿಲ್ಲ . ಅವರು ಅಧಿಕಾರ ಮಾಡುತ್ತಿರುವ ವಿಧಾನ ನಿಮಗೆ ಗೊತ್ತಿದೆ. ನಾನು ಈ ಬಗ್ಗೆ ಚರ್ಚೆ ಮಾಡಲ್ಲ, ಜನರಿಗೆ ಈ ಸರ್ಕಾರದ ಪೆಟ್ಟು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ಡಿಕೆಶಿ ಮಗಳಿಗೂ ಇಡಿ ಸಮನ್ಸ್ ನೀಡಿದ್ದರ ಬಗ್ಗೆ ಮಾತನಾಡಿದ ಮಾಜಿ ಸಿಎಂ ಹೆಚ್ಡಿಕೆ, ಇನ್ನು ಹಲವರು ದೊಡ್ಡಮಟ್ಟದಲ್ಲಿ ಕಾನೂನು ಬಾಹಿರ ಚಟುವಟಿಕೆ ಮಾಡಿರುವ ಬಗ್ಗೆ ಗಮನವಿಲ್ಲ. ಆದರೆ ಇದ್ಯಾವುದೋ ಕೇಸ್ ಇಟ್ಕೊಂಡು ಅವರ ವಿರುದ್ಧ ಹೊರಟ್ಟಿದ್ದಾರೆ. ಇದರಲ್ಲಿ ಕೇಂದ್ರದ ಅಧಿಕಾರಿಗಳಿದ್ದಾರೋ, ಬೇರೆಯವರಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *