ದ್ವೇಷದ ರಾಜಕಾರಣ ನೋಡಿಕೊಂಡು ಇನ್ಮೇಲೆ ಸುಮ್ಮನೆ ಕೂರಲ್ಲ..!

ಬೆಂಗಳೂರು: ನರೇಂದ್ರ ಮೋದಿ ಸರ್ಕಾರ ರಚನೆ ಆದಾಗಿನಿಂದಲೂ ವಿರೋಧ ಪಕ್ಷದ ಮುಖಂಡರ ವಿರುದ್ಧ ತೊಂದರೆ ಕೊಡುವುದಲ್ಲದೇ, ಬೆದರಿಸುವುದು, ಒತ್ತಡ ತರುವುದು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ದೇಶದಲ್ಲಿ ದ್ವೇಷದ ರಾಜಕಾರಣಕ್ಕೆ ಕರ್ನಾಟಕ ಜನತೆ ತಯಾರಿಲ್ಲ. ಕೇಂದ್ರದ ಸ್ವಾಯತ್ತ ಸಂಸ್ಥೆಗಳ ದುರುಪಯೋಗ ಕೆಲಸ ಮಾಡಿಕೊಂಡು, ರಾಜಕೀಯವಾಗಿ ಹಣೆಯುವ ಕೆಲಸ ನಡೆಯುತ್ತಿದೆ ಎಂದು ಗುಂಡೂರಾವ್  ಆರೋಪಿಸಿದರು.

ಈ ಹಿಂದೆ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಡಿ.ಕೆ ಶಿವಕುಮಾರ್ ಅವರು ರಕ್ಷಣೆ ಕೊಟ್ಟಿದ್ದರು. ಹೀಗಾಗಿಯೇ ಅವರ ಮೇಲೆ ಐಟಿ ಇಲಾಖೆ ರೈಡ್ ಮಾಡಿದರು. ಇದು ರಾಜಕೀಯ ದುರುದ್ದೇಶದಿಂದ ಡಿಕೆಶಿ ವಿರುದ್ಧ ಕ್ರಮ ಆಗಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಬಿಜೆಪಿ ದ್ವೇಷದ ರಾಜಕಾರಣ ನೋಡಲು ಆಗಲ್ಲ. ನಾವು ಸುಮ್ನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ತನಿಖೆಗೆ ಡಿಕೆ ಶಿವಕುಮಾರ್ ಅವಕಾಶ ಕೊಟ್ಟರು ಅವರನ್ನು ಬಂಧಿಸಲಾಗಿದೆ. ಇದು ಹೇಡಿತನದ ಕೆಲಸ ಕೇಂದ್ರ ಸರ್ಕಾರ ಮಾಡಿದೆ ಎಂದು ಕಿಡಿಕಾರಿದರು.

ಈಗ ಇಡಿ ಯವರು ಡಿ.ಕೆ ಶಿವಕುಮಾರ್ ಅವರ ಮಗಳಿಗೂ ನೋಟಿಸ್ ನೀಡಿದೆ. ಅವರ ಕುಟುಂಬವನ್ನು ತೇಜೋವದೆ ಮಾಡುವ ಕೆಲಸ ಮಾಡಲಾಗುತ್ತಿದೆ. ಡಿ.ಕೆ ಶಿವಕುಮಾರ್ ಜೊತೆ ನಾವಿದ್ದೇವೆ ಎಂದು ಅಭಯ ನೀಡಿದರು.

ಇದೇ ಸಂದರ್ಭದಲ್ಲಿ ಅವರು ಮಾತನಾಡಿ, ದೇಶದ ಆರ್ಥಿಕ ಪರಿಸ್ಥಿತಿ ಕುಗ್ಗಿದೆ. ಉದ್ಯೋಗ ಇಲ್ಲ, ಆದರೆ ಬಿಜೆಪಿಯವರು ಮಾತ್ರ ಸೇಡಿನ ರಾಜಕಾರಣ ಮಾಡ್ಕೊಂಡೇ ಇದ್ದಾರೆ. ವಿರೋಧ ಪಕ್ಷವನ್ನು ವಿರೋಧಿಸುವುದು ಇಡೀ ದೇಶಕ್ಕೆ ಗಂಡಾಂತರ. ನಮ್ಮನ್ನು ಯಾರು ಮುಟ್ಟಕ್ಕಾಗೊಲ್ಲ ಅಂತ ಬಿಜೆಪಿ ಅಂನ್ಕೊಂಡಿದೆ ಎಂದು ದಿನೇಶ್ ಗುಂಡುರಾವ್ ಹೇಳಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *