ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ಧ ಗಂಭೀರ ಆರೋಪ..!

ಹಾಸನ: ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ವಕೀಲ ದೇವರಾಜೇಂದ್ರಗೌಡ ಆರೋಪ ಮಾಡಿದ್ದು, ಹಾಸನದಲ್ಲಿ ಮಾಜಿ ಸಚಿವ ರೇವಣ್ಣನವರನ್ನು ಒಲಿಸಿಕೊಳ್ಳುವುದಕ್ಕೆ ಬಿಜೆಪಿ ಶಾಸಕ ಪ್ರೀತಂಗೌಡ ಮಾಸ್ಟರ್‌ ಪ್ಲಾನ್ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಭ್ರಷ್ಟ ಅಧಿಕಾರಿಗಳನ್ನು ಹಾಸನದಲ್ಲಿ ಉಳಿಸಿಕೊಳ್ಳಲು ಬಿಜೆಪಿ ಶಾಸಕರಿಂದ ಸಿಎಂ ಕಚೇರಿಗೆ ಪತ್ರ ಕೊಟ್ಟಿದ್ದಾರೆ ಎಂದು ಆರೋಪಿಸಿದ ವಕೀಲ ದೇವರಾಜೇಂದ್ರಗೌಡ, ಪಿಡಬ್ಲ್ಯೂಡಿ, ಎರಿಗೇಶನ್ ಡಿಪಾರ್ಟ್‌ಮೆಂಟ್ಗಳಲ್ಲಿ ಮಾಜಿ ಸಚಿವ ರೇವಣ್ಣ ಆಪ್ತ ಅಧಿಕಾರಿಗಳಿಗೆ ಹಾಸನದಲ್ಲಿ ಉಳಿಸಿಕೊಳ್ಳಲು ಲೆಟರ್ ಕೊಟ್ಟು ಮಣೆ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಕೀಲ ದೇವರಾಜೇಗೌಡ, ರೇವಣ್ಣನವರನ್ನು ಮನವೊಲಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 232 ಅಧಿಕಾರಿಗಳಿಗೆ ಲೆಟರ್ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ ದೇವರಾಜೇಗೌಡ, ಪ್ರೀತಂಗೌಡ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *