ಅಧ್ಯಕ್ಷ ಇನ್ ಅಮೆರಿಕಾ ಚಿತ್ರದಲ್ಲಿ ಮರುಕಳಿಸಲಿದೆ ಈ ಹಳೇ ಹಾಡು

ಚಿ.ತು ಸಂಘದ ಮಾನ್ಯ ಅಧ್ಯಕ್ಷ ಮಹೋದಯ ಅಮೆರಿಕಾಕ್ಕೆ ಹೋಗಿ ಬಂದಿರೋದು ಸ್ಯಾಂಡಲ್​ವುಡ್ ಸಿನಿ ಪ್ರೇಕ್ಷಕರಿಗೆಲ್ಲ ಗೊತ್ತು. ಈಗಾಗಲೇ ಟೀಸರು , ಪೋಸ್ಟರು , ಮೇಕಿಂಗ್​​, ಟೈಟಲ್ ಸಾಂಗ್​ಗಳನ್ನ ಬಿಟ್ಟು ಪ್ರೇಕ್ಷಕರನ್ನೆಲ್ಲ ಅಲರ್ಟ್ ಮಾಡಿದ್ದಾರೆ ಅಧ್ಯಕ್ಷರು. ಈಗ ‘ಅಮ್ಮ ನಾ ಸೇಲ್ ಆದೆ , ಅಮೆರಿಕಾ ಪಾಲಾದೇ’’ ಅಂತ ಹಾಡಿ ಕುಣಿತಿದ್ದಾರೆ.

ಅಮೆರಿಕಾದಲ್ಲಿ ರಾಗಿಣಿ ಜೊತೆ ಅಧ್ಯಕ್ಷ ಮಸ್ತ್ ಡ್ಯಾನ್ಸ್​..!
ಸೇಲಾಗಿ , ಅಮೆರಿಕಾ ಪಾಲಾದ ಚಿ.ತು ಸಂಘದ ಅಧ್ಯಕ್ಷ..!​​​
‘ಅಧ್ಯಕ್ಷ ಇನ್ ಅಮೆರಿಕಾ’.. ನಟ ಶರಣ್ ಮತ್ತು ರಾಗಿಣಿ ನಟನೆಯ ಹೊಚ್ಚ ಹೊಸ ನಿರೀಕ್ಷಿತ ಸಿನಿಮಾ. ‘ಅಧ್ಯಕ್ಷ’ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಒಂದರಲ್ಲಿ ಹಾಡಿ ಕುಣಿದ್ದಿದ್ದ ಶರಣ್ ಮತ್ತು ತುಪ್ಪದ ಬೆಡಗಿ ರಾಗಿಣಿ ಫಸ್ಟ್ ಟೈಮ್ ‘ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಸ್ಯಾಂಡಲ್​ವುಡ್ ಖ್ಯಾತ ಸಂಭಾಷಣೆ ಬರಹಗಾರ ಯೋಗಾನಂದ ಮುದ್ದಾನ್ ಫಸ್ಟ್ ಟೈಮ್ ಡೈರೆಕ್ಷನ್ ಮಾಡಿರುವ ಸಿನಿಮಾ ‘ಅಧ್ಯಕ್ಷ ಇನ್ ಅಮೆರಿಕಾ’. ಈಗಾಗಲೇ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ ಸಿನಿಮಾ ರಿಲೀಸ್​ಗೆ ಮಾಡಲು ಯೋಜನೆ ರೂಪಿಸಿದೆ.. ರಿಲೀಸ್​​ಗೂ ಮೊದಲು ಫಿಲ್ಮ್​​ಟೀಮ್​​​ ತನ್ನ ಬತ್ತಳಿಕೆಯಿಂದ ಒಂದೊಂದೆ ಕುತೂಹಲಭರಿತ ಅಸ್ತ್ರಗಳನ್ನು ಪ್ರೇಕ್ಷಕರ ಹೃದಯಕ್ಕೆ ಬಿಡುತ್ತಿದೆ. ಅದ್ರಲ್ಲೊಂದು  ‘ಅಮ್ಮ ನಾ ಸೇಲ್ ಆದೆ , ಅಮೆರಿಕಾ ಪಾಲಾದೆ’ ಸಾಂಗ್​​​.

ಅಮ್ಮ ನಾ ಸೇಲ್ ಆದೆ.. ಅಮೆರಿಕಾ ಪಾಲಾದೆ ಈ ಸಾಲಿನ ಹಾಡನ್ನು ಇಡೀ ಕರ್ನಾಟಕವೇ ಮೆಚ್ಚಿಕೊಂಡಾಡಿರುವ ಹಾಡು. ಕಾಶಿನಾಥ್ ಅವರ ‘ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್’ ಸಿನಿಮಾದಲ್ಲಿ ಈ ಹಾಡಿತ್ತು. ಈ ಅದೇ ಹಾಡಿನ ಮೊದಲ ಸಾಲನ್ನು ಬಳಸಿಕೊಂಡು ಮಗದೊಂದು ವಂಡರ್ ಫುಲ್ ಹಾಡನ್ನಾಗಿಸಿದೆ ‘ಅಧ್ಯಕ್ಷ ಇನ್ ಅಮೆರಿಕಾ’ ಸಿನಿಮಾ ತಂಡ.
ಫಾರಿನ್ ಲೋಕೆಷನಲ್ಲಿ ನಟ ಶರಣ್ ಮತ್ತು ರಾಗಿಣಿ ಮಸ್ತ್ ಸ್ಟೆಪ್ ಹಾಕಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ,ಡಾ.ವಿ.ನಾಗೇಂದ್ರ ಪ್ರಸಾದ್ ಅವರ ಪದಪುಂಜದಲ್ಲಿ ಹಾಡು ಅರಳಿದೆ. ಬಾಲಿವುಡ್​ನ ಖ್ಯಾತ ಗಾಯಕ ಟಿಪ್ಪು ಹಾಡಿಗೆ ಹಿನ್ನೆಲೆ ಧ್ವನಿಯ ಜೀವವಾಗಿದ್ದಾರೆ.

ವಿಶ್ವ ಪ್ರಸಾದ್ ಟಿ.ಜಿ ‘ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರವನ್ನು ನಿರ್ಮಾಣ ಮಾಡಿದ್ದು ಅತಿ ಶೀಘ್ರದಲ್ಲಿಯೇ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದ್ದಾರೆ.
ಶ್ರೀಧರ್ ಶಿವಮೊಗ್ಗ_ಎಂಟರ್​​ಟೈನ್ಮೆಂಟ್​ ಬ್ಯೂರೋ_ ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *