‘ನಾಳೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ’ – ಮಾಜಿ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಕೇಂದ್ರ ಸರ್ಕಾರ ಪ್ರತಿ ಪಕ್ಷಗಳನ್ನು ಮುಗಿಸುವ ಕೆಲಸ ಮಾಡುತ್ತಲೇ ಇದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಕೇಂದ್ರ ಬಿಜೆಪಿ ವಿರುದ್ಧ ಮಂಗಳವಾರ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳನ್ನು ಮುಗಿಸುವ ಕೆಲಸ ಸದಾ ರೀತಿಯಲ್ಲಿ ನಡೆಯುತ್ತಿದ್ದು ಐಟಿ, ಇಡಿ, ಸಿಬಿಐ ಎಲ್ಲವೂ ಅವರ ಸುಪರ್ದಿಯಲ್ಲಿವೆ. ತನಿಖಾ ಸಂಸ್ಥೆಗಳು ಅವರ ಕೆಲಸ ಮಾಡಲಿ ಅದನ್ನು ಬಿಟ್ಟು ಬಿಜೆಪಿ ನಿರ್ದೇಶನದಂತೆ ಮಾಡಿವುದು ಸರಿಯಲ್ಲ ಎಂದು ಅವರು ತಿಳಿಸಿದರು.

ಅಲ್ಲದೇ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಇಡಿಯವರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಅವರು ದುರುದ್ದೇಶವಾಗಿಯೇ ಕಿರುಕುಳ ಕೊಡುತ್ತಿದ್ದಾರೆ. ಈ ವಿಷಯವಾಗಿ ನಮ್ಮ ಮುಖಂಡರ ಜೊತೆ ಸಭೆ ನಡೆಸಿದ್ದೇವೆ. ಅವರನ್ನು ಬಂಧಿಸಿದ್ದನ್ನು ಖಂಡಿಸಿ ನಾಳೆ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ನುಡಿದರು.

ಸದ್ಯ ಕಾಂಗ್ರೆಸ್​ನವರನ್ನೇ ಹುಡುಕಿ, ಹುಡುಕಿ ಟಾರ್ಗೆಟ್ ಮಾಡುತ್ತಿದ್ದಾರೆ. ನನಗೇನು ಐಟಿ, ಇಡಿಯವರ ಭಯವಿಲ್ಲ, ತಪ್ಪು ಮಾಡಿದರೆ ತಾನೇ ಭಯ. ದುರುದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡೋದು ತಪ್ಪು ಎಂದರು.

ದೆಹಲಿಯಲ್ಲಿನ ಸುನೀಲ್ ಶರ್ಮಾ ನಿವಾಸದಲ್ಲಿ ಹಣ ಸಿಕ್ಕಿದೆ. 8.5 ಕೋಟಿ ರೂಪಾಯಿ ಐಟಿ ದಾಳಿ ವೇಳೆ ದೊರೆತಿದೆ ಎನ್ನಲಾಗಿದೆ. ಶರ್ಮಾ ಅವರೇ ಹಣ ತಮ್ಮದೆಂದು ಒಪ್ಪಿಕೊಂಡಿದ್ದಾರೆ. ಇಷ್ಟದರೂ ಕೂಡ ಡಿ.ಕೆ ಶಿವಕುಮಾರ್​ರವರ ಹಣವೆಂದು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಅವರನ್ನು ದುರುದ್ದೇಶದಿಂದ ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ರಾಮಲಿಂಗಾರೆಡ್ಡಿ ಅವರು ಹೇಳಿದರು.

ಹಿಂದೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದರು. ಜೊತೆಗೆ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕೂಡ ಸಲ್ಲಿಸಿದ್ದರು. ಇದಲ್ಲದೇ ಅನರ್ಹ ಶಾಸಕರ ಜೊತೆಗೂ ಇವರು ಗುರುತಿಸಿಕೊಂಡಿದ್ದರು.

Recommended For You

About the Author: TV5 Kannada

Leave a Reply

Your email address will not be published. Required fields are marked *