ಟೀಂ ಇಂಡಿಯಾ ಹೆಡ್ ಕೋಚ್​ಗೆ ಬಿಸಿಸಿಐ ಭರ್ಜರಿ ಗಿಫ್ಟ್

ನವದೆಹಲಿ: ಇತ್ತೀಚೆಗಷ್ಟೆ ಕೆರೆಬಿಯನ್ನರ ನಾಡಲ್ಲಿ ಆತಿಥೇಯ ವಿಂಡೀಸ್ ವಿರುದ್ಧ ಟಿ-20, ಏಕದಿನ ಮತ್ತು ಟೆಸ್ಟ್​ ಸರಣಿಯಲ್ಲಿ ಟೀಮ್ ಇಂಡಿಯಾ ಗೆದ್ದಿತ್ತು. ಟೀಮ್ ಇಂಡಿಯಾದ ಹೆಡ್ ಕೋಚ್ ರವಿ ಶಾಸ್ತ್ರಿ ಅವರಿಗೆ ಬಿಸಿಸಿಐ ಬಂಪರ್ ಗಿಫ್ಟ್​ ಕೊಟ್ಟಿದೆ.

ಇತ್ತಿಚೆಗಷ್ಟೆ ನೂತನ ಹೆಡ್​ ಕೋಚ್ ಆಗಿ ಮತ್ತೆ ಎರಡು ವರ್ಷಗಳ ಕಾಲ ಮರು ನೇಮಕವಾಗಿದ್ದ ರವಿ ಶಾಸ್ತ್ರಿಗೆ ಈಗ ಇನ್ನೊಂದು ಸಿಹಿ ಸುದ್ದಿ ಸಿಕ್ಕಿದೆ. ಅಷ್ಟಕ್ಕೂ ರವಿ ಶಾಸ್ತ್ರಿಗೆ ಸಿಕ್ಕಿರುವ ಬಂಪರ್​ ಗಿಫ್ಟ್ ಅಂದರೆ ಶಾಸ್ತ್ರಿ ಅವರ ವೇತನದಲ್ಲಿ ಶೇಕಾಡ 20ರಷ್ಟು ಬಿಸಿಸಿಐ ಏರಿಕೆ ಮಾಡಿದೆ.

ಕೋಚ್ ರವಿ ರವಿ ಶಾಸ್ತ್ರಿ ಆಂಗ್ಲರ ನಾಡಲ್ಲಿ ನಡೆದ ವಿಶ್ವಕಪ್​ನ್ನ ಗೆಲ್ಲಿಸಿ ಕೊಡದೆ ಇರಬಹುದು ಆದರೆ. ಟೆಸ್ಟ್ ಫಾರ್ಮೆಟ್​ನಲ್ಲಿ ತಂಡವನ್ನ ನಂ.1 ಸ್ಥಾನದಲ್ಲಿ ನಿಲ್ಲಿಸಿದ್ದಾರೆ.ಇದಲ್ಲದೇ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಕಾರಣಕ್ಕೆ ಹೆಡ್ ಕೋಚ್ ರವಿ ಶಾಸ್ತ್ರಿಗೆ ಬಿಸಿಸಿಐ ಬಂಪರ್ ಗಿಫ್ಟ್ ಕೊಟ್ಟಿದೆ. ಶೇಖಡ 20ರಷ್ಟು ವಾರ್ಷಿಕ ವೇತನದಲ್ಲಿ ಹೆಚ್ಚುವರಿ ಏರಿಕೆ ಪಡೆದಿದ್ದಾರೆ.57 ವರ್ಷದ ರವಿ ಶಾಸ್ತ್ರಿ ಈ ಹಿಂದೆ 8 ಕೋಟಿ ರೂಪಾಯಿ ಪಡೆಯುತ್ತಿದರು.  ಇದೀಗ ರವಿ ಶಾಸ್ತ್ರಿ ಮುಂದಿನ ಟಿ20 ವಿಶ್ವಕಪ್ ವರೆಗೆ 9.5 ಕೋಟಿಯಿಂದ 0 ಕೋಟಿ ರೂಪಾಯಿವರೆಗೂ ವಾರ್ಷಿಕವಾಗಿ ವೇತನ ಪಡೆಯಲಿದ್ದಾರೆ.

ಬರೀ ಹೆಡ್ ಕೋಚ್ ರವಿ ಶಾಸ್ತ್ರಿಗೆ ಮಾತ್ರವಲ್ಲ ತಂಡದ ಸಹಾಯಕ ಕೋಚ್​ಗಳಿಗೂ ಬಿಸಿಸಿಐ ಭರ್ಜರಿ ಗಿಫ್ಟ್​ನ್ನ ಕೊಟ್ಟಿದೆ. ಟೀಮ್ ಇಂಡಿಯಾ ಬೌಲರ್ಸ್ ಗಳು ಇತ್ತಿಚೆಗೆ ಶಾಂಧಾರ್ ಪ್ರದರ್ಶನ ಕೊಟ್ಟಿದೆ. ಇದಕ್ಕೆ ಬೌಲಿಂಗ್ ಕೋಚ್ ಭರತ್ ಅರುಣ್ ಅವರ ಶ್ರಮವೇ ಕಾರಣವಾಗಿದೆ.

ಟೀಮ್ ಇಂಡಿಯಾ ಬೌಲಿಂಗ್ ಹೇಳಿಗೆಗಾಗಿ ಶ್ರಮಿಸುತ್ತಿರುವ ಭರತ್ ಅರುಣ್ ಇತ್ತಿಚೆಗಷ್ಟೆ ತಂಡದ ಬೌಲಿಂಗ್ ಕೋಚ್ ಆಗಿ ಮರು ನೇಮಕವಾಗಿದ್ರು. ಭರತ್ ಅರುಣ್ ಗೆ ವಾರ್ಷಿಕವಾಗಿ 3.5 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಇನ್ನು ತಂಡದ ನೂತನ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿರುವ ವಿಕ್ರಮ್ ರಾಥೋರ್​​ಗೂ ಬಂಪರ್ ಗಿಫ್ಟ್ ಸಿಕ್ಕಿದೆ. ತಂಡದ ಬ್ಯಾಟಿಂಗ್ ಲೈನ್​ಅಪ್​ನ್ನ ಬಲಿಷ್ಠ ಮಾಡಲು ಪಣ ತೊಟ್ಟಿರುವ ವಿಕ್ರಮ್ ರಾಥೋಡ್​ಗೆ ಬಿಸಿಸಿಐ ವಾರ್ಷಿಕವಾಗಿ 2.5 ಕೋಟಿ ರೂಪಾಯಿಯಿಂದ 3 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *