ಯುವ ದಸರಾ ಉದ್ಘಾಟನೆಗೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಆಹ್ವಾನ

ಬೆಂಗಳೂರು: ಮೈಸೂರು ದಸರಾ 2019ರ ಸಾಲಿನಲ್ಲಿ ನಡೆಸಲು ಸರ್ಕಾರ ಮತ್ತ ಜಿಲ್ಲಾಡಳಿತ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ರಾಜಕೀಯ ಗಣ್ಯರು ಈ ವಿಶ್ವವಿಖ್ಯಾತ ದಸರಾ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಇದೇ ಸಾಲಿಗೆ ಮತ್ತೊಬ್ಬರು ಸೇರ್ಪಡೆಗೊಂಡಿದ್ದಾರೆ.

ಈ ಬಾರಿ ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್ ಪ್ರಶಸ್ತಿ ಪಡೆದ ಪಿ.ವಿ ಸಿಂಧು ಅವರನ್ನು ಯುವ ದಸರಾ ಕಾರ್ಯಕ್ರಮ ಉದ್ಘಾಟನೆ ಮಾಡಲು ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಅವರು ಆಹ್ವಾನ ಕೊಟ್ಟಿದ್ದಾರೆ.

ಅಕ್ಟೊಬರ್ 1 ರಂದು ಯುವ ದಸರಾ ಉದ್ಘಾಟನೆ ನಡೆಯಲಿದೆ ಈ ಒಂದು ಸಂದರ್ಭದಲ್ಲಿ ತಾವು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ಭಾರತದ ಕೀರ್ತಿ ಪತಾಕೆ ಪ್ರಪಂಚದಾದ್ಯಂತ ಹಾರಿಸಿದ್ದೀರಿ, ನೀವು ಲಕ್ಷಾಂತರ ಯುವ ಕ್ರೀಡಾ ಪ್ರತಿಭೆಗಳಿಗೆ ಸ್ಪೂರ್ತಿಯಾಗಿದ್ದೀರಿ ಹೀಗಾಗಿ ನೀವು ನಮ್ಮ ಮೈಸೂರು ದಸರಾ ಉದ್ಘಾಟನೆ ಮಾಡಬೇಕು ಎಂದು ಪತ್ರದ ಮುಖಂತರ ಕೋರಿಕೊಂಡಿದ್ದಾರೆ.

ಸದ್ಯ ನಮ್ಮ ಮೈಸೂರು ದಸರಾ ವಿಶ್ವವಿಖ್ಯಾತವಾಗಿದ್ದು ಪ್ರತಿವರ್ಷ ಸಡಗರ ಸಂಭ್ರಮದಿಂದ ಈ ನಾಡಹಬ್ಬ ದಸರಾವನ್ನು ಆಚರಿಸುತ್ತೇವೆ ಈ ಸಂದರ್ಭದಲ್ಲಿ ಹಲವು ಗಣ್ಯರು ಪ್ರತಿವರ್ಷ ದಸರಾ ಹಬ್ಬದ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡುತ್ತಾರೆ, ಹೀಗಾಗಿ ಅಕ್ಟೋಬರ್ 1ರಂದು ಯುವ ದಸರಾ ಉದ್ಘಾಟನೆ ಮಾಡಲು ಬನ್ನಿ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರು ಪಿ.ವಿ.ಸಿಂಧು ಅವರಿಗೆ ಆಹ್ವಾನ ನೀಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *