ಡಿಕೆಶಿ ಅರೆಸ್ಟ್‌ ಹಿನ್ನೆಲೆ ಒಕ್ಕಲಿಗರ ಪ್ರತಿಭಟನೆ: ಪೊಲೀಸರಿಂದ 15 ಷರತ್ತು..!

ಬೆಂಗಳೂರು: ಡಿಕೆಶಿಯನ್ನು ಇಡಿ ಬಂಧಿಸಿದ್ದನ್ನು ಖಂಡಿಸಿ ನಾಳೆ ಬೆಂಗಳೂರಿನಲ್ಲಿ ಒಕ್ಕಲಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆದ್ರೆ ಪ್ರತಿಭಟನೆ ನಡೆಸಲು ಪೊಲೀಸರು 15 ಷರತ್ತು ವಿಧಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಟ್ರಾಫಿಕ್ ಹೆಚ್ಚುವರಿ ಆಯುಕ್ತ ರವಿಕಾಂತೇಗೌಡ ಮತ್ತು ಡಿಸಿಪಿಗಳು, ಭದ್ರತೆ ಕುರಿತು ಮಾಹಿತಿ ನೀಡಿದ್ದಾರೆ.

ಪೊಲೀಸ್ ಆಯುಕ್ತರ 15 ಸೂಚನೆ ಮೇರೆಗೆ ಪ್ರತಿಭಟನೆಗೆ ಅವಕಾಶ ನೀಡಲಾಗಿದ್ದು, ಸೂಚನೆಯಂತೆ ಬೇರೆ ಏನಾದ್ರು ಅಹಿತಕರ ಘಟನೆಗಳು ನಡೆದರೆ ಪ್ರತಿಭಟನೆ ಆಯೋಜಕರೇ ನೇರಹೊಣೆಯಾಗಲಿದ್ದಾರೆ ಎಂದು ಕೂಡ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಈ ಕೆಳಗಿನ ಷರತ್ತುಗಳನ್ನ ಪ್ರತಿಭಟನಾಕಾರರಿಗೆ ಸೂಚಿಸಲಾಗಿದೆ.
1. ನಿಗದಿತ ರಸ್ತೆಯಲ್ಲಿ ಮಾತ್ರ ಮೆರವಣಿಗೆ.

2. ಯಾವುದೇ ಧಾರ್ಮಿಕ ,ರಾಜಕೀಯ, ಸಾಮಾಜಿಕ ಭಾಷಾವಾರು ಅಥವಾ ಸಾಂಸ್ಕೃತಿಕ ಗುಂಪುಗಳನ್ನು ಕೆರಳಿಸುವಂತೆ ಪ್ರಚೋದನಕಾರಿ ಹೇಳಿಕೆ ನೀಡುವಂತಿಲ್ಲಾ.

3. ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 36 ಮತ್ತು 37 ಉಲ್ಲಂಘನೆ ಮಾಡುವಂತಿಲ್ಲಾ.

4. ಸಾರ್ವಜನಿಕ ರಸ್ತೆ ಅಡಚಣೆ ಆಗದಂತೆ ನೋಡಬೇಕು.

5. ದೊಡ್ಡ ಮಟ್ಟದ ಧ್ವನಿ ವರ್ಧಕಗಳನ್ನು ಬಳಸುವಂತಿಲ್ಲಾ.

6. ಅಹಿತಕರ ಘಟನೆಗಳು ನಡೆದ್ರೆ ಆಯೋಜಕರೇ ಸಂಪೂರ್ಣ ಹೊಣೆ.

7. ಸುವ್ಯವಸ್ಥಿತವಾಗಿ ನಡೆಸಬೇಕು ಮತ್ತು ಕಾನೂನು ಸುವ್ಯವಸ್ಥಿತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು.

8. ಕಾರ್ಯಕ್ರಮ ಅನುಮತಿ ನೀಡಿರುವ ಸ್ಥಳದಲ್ಲೇ ಮಾಡಬೇಕು, ರಸ್ತೆಗಿಳಿದು ಬಂದ್ ಮಾಡುವಂತಿಲ್ಲಾ.

9. ಪಟಾಕಿ ಮತ್ತು ಬೆಂಕಿ ಹಚ್ಚುವಂತಿಲ್ಲಾ.

10. ಪೊಲೀಸರು ಮತ್ತು ಸಂಚಾರಿ ನೀಡುವಂತ ಸೂಚನೆಗಳನ್ನು ಸ್ಥಳದಲ್ಲಿ ಪಾಲಿಸಬೇಕು.

11. ಕಾರ್ಯಕ್ರಮ ಸಮಯದಲ್ಲಿ ಗಲಭೆ ಮಾಡಿ ಸಾರ್ವಜನಿಕ ಆಸ್ತಿಪಾಸ್ತಿ ,ಜೀವಹಾನಿ ಮಾಡಿದ್ರು ಆಯೋಜಕರ ಮೇಲೆ ಮತ್ತು ಗಲಭೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

12. ಕಾರ್ಯಕ್ರಮ ಶಾಂತಿಯುತವಾಗಿ ನಡೆಯಬೇಕು.

13. ಷರತ್ತು ಉಲ್ಲಂಘನೆ ಮಾಡಿದಲ್ಲೇ ಪ್ರತಿಭಟನೆ ಅನುಮತಿ ರದ್ದು ಮಾಡಲಾಗುವುದು ಮತ್ತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.

14. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು.

15. ಯಾವುದೇ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವಂತಿಲ್ಲಾ.

ಇನ್ನು ಪ್ರತಿಭಟನೆ ನಡೆಸುತ್ತಿರುವ 10 ಜನ ಆಯೋಜಕರಿಂದ ಬಾಂಡ್ ಬರೆಸಿಕೊಳ್ಳಲಾಗಿದ್ದು, ಟಿ.ನಾರಾಯಣ ಗೌಡ ಕರವೇ, ರವಿ ಶಂಕರ್ ವೈ.ಡಿ, ಬಸವರಾಜ ಪಡಕೋಟಿ, ನಾಗರಾಜ್. ಜೆ, ಭಾರತಿ ಶಂಕರ್, ರಾಧ ವೆಂಕಟೇಶ್, ಕುಮಾರ್, ಅನಿಲ್ ಗೌಡ, ಜಗದೀಶ್ ಗೌಡ, ಕೃಷ್ಣಮೂರ್ತಿ. ಕೆ ಸೇರಿದಂತೆ ಒಟ್ಟು 10 ಜನರಿಂದ ಪೊಲೀಸ್ ಕಮಿಷನರ್ ಬಾಂಡ್ ಬರೆಸಿಕೊಂಡಿದ್ದಾರೆ.

ಪ್ರತಿಭಟನಾ ಮೆರವಣಿಗೆ ಯಾವ ರಸ್ತೆಯಲ್ಲಿ ಸಾಗಲಿದೆ..?

ನ್ಯಾಷನಲ್ ಕಾಲೇಜ್ ಮೈದಾನ- ಎಡ ತಿರುವು- ಪಿ ಎಂ.ಕೆ ರಸ್ತೆ- ಎಡ ತಿರುವ – ವಾಣಿವಿಲಾಸ ರಸ್ತೆ- ನ್ಯಾಷನಲ್ ಕಾಲೇಜ್ ಜಂಕ್ಷನ್- ಡಯಾಗನಲ್ ರಸ್ತೆ- ಸಜ್ಜನ್ ರಾವ್ ಸರ್ಕಲ್ – ಡಯಾಗನಲ್ ರಸ್ತೆಯಲ್ಲಿ ಮುಂದುವರೆದು – ಮಿನರ್ವ ಸರ್ಕಲ್- ಜೆಸಿ ರಸ್ತೆ- ಶಿವಾಜಿ ಜಂಕ್ಷನ್- ಟೌನ್ ಹಾಲ್- ಎನ್ ಆರ್ ಜಂಕ್ಷನ್- ಪೋಲಿಸ್ ಠಾಣೆ ಜಂಕ್ಷನ್- ಪೊಲೀಸ್ ಕಾರ್ನರ್- ಎಡ ತಿರುವು- ಕೆ ಜಿ ರಸ್ತೆ- ಮೈಸೂರು ಬ್ಯಾಂಕ್ ಸರ್ಕಲ್- ಬಲ ತಿರುವು – ಪ್ಯಾಲೇಸ್ ರೋಡ್- ಪ್ಯಾಲೇಸ್ ಜಂಕ್ಷನ್- ಎಡ ತಿರುವು- ವೈ ರಾಮಚಂದ್ರ ರಸ್ತೆ- ಕನಕದಾಸ ವೃತ್ತ- ಬಲ ತಿರುವು – ಕಾಳೀದಾಸ ರಸ್ತೆ ಮೂಲಕ – ಫ್ರೀಡಂಪಾರ್ಕ್.

Recommended For You

About the Author: TV5 Kannada

Leave a Reply

Your email address will not be published. Required fields are marked *